ಕೋಟೆ ನಾಡಲ್ಲಿ  ಬಿಡಾಡಿ ದನಗಳ ಹಾವಳಿ, ಕಣ್ಮುಚ್ಚಿ ಕುಳಿತ ನಗರಸಭೆ 

 

ವಾಹನ ಸವಾರರ ಅಪಘಾತಕ್ಕೆ ಯಾರು ಹೊಣೆ
ನಮ್ಮ ಜನ ವಿಶೇಷ ವರದಿ:
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ
ನಗರದಲ್ಲಿ  ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ನಿತ್ಯ  ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬಿಡಾಡಿ ದನಗಳಿಗೆ  ಕಡಿವಾಣ ಹಾಕಿ ದನಗಳನ್ನು ರಸ್ತಗೆ ಬಿಡುವ  ಮಾಲೀಕರ ವಿರುದ್ದ  ಕಾನೂನು ಕ್ರಮ ಜರುಗಿಸದೇ ಅಥವಾ ನಗರದಿಂದ ಬೇರೆಡೆ ಸ್ಥಳಾಂತರ ಮಾಡಬೇಕಾದ ನಗರಸಭೆಗೆ ಮಾತ್ರ ನಿದ್ರೆಗೆ ಜಾರಿದ್ದು  ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ನಗರಸಭೆ ಬಿಡಾಡಿ ದನಗಳ ಸಂಬಂಧಿಸಿದಂತೆ ನಾಮಕಾವಸ್ಥೆಗೆ ನೋಟಿಸ್ ನೀಡತ್ತಾರೆ. ಆದರೆ ದನಗಳ ರಸ್ತೆ ಮಧ್ಯೆಯಲ್ಲಿ‌ ಮಲಗಿದರು ನಗರಸಭೆ ಅವರಿಗೆ ಕಾಣುತ್ತಿಲ್ವ ಎಂಬದು ಮಾತ್ರ  ಸೋಜಿಗೆ ತಂದಿದೆ.  ಬಿಡಾಡಿ ದನಗಳು ಒಂದಲ್ಲ ಎರಡಲ್ಲ  ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ಪ್ರಾರಂಭಿಸಿದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.
ಬಾಕ್ಸ್ :
ಎಲ್ಲೆಲ್ಲಿ ಸಮಸ್ಯೆ:  ಈ ಸಮಸ್ಯೆ ಕೇವಲ ಒಂದು ಪ್ರದೇಶದಲ್ಲಿ ಮಾತ್ರವಲ್ಲ, ಪ್ರಮುಖ ಸ್ಥಳಗಳಾದ ಮಹಾತ್ಮಾ ಗಾಂಧಿವೃತ್ತ, ಎಸ್ಬಿಐ  ಬ್ಯಾಂಕ್ ಸರ್ಕಲ್, ಶಂಕರ್ ಟ್ಯಾಕೀಸ್ ಮುಂಭಾಗ, ಮದಕರಿ ನಾಯಕ ವೃತ್ತ, ಹಳೆ ವೈಶಾಲಿ, ಬಾಲಕರ ಪದವಿ ಪೂರ್ವ ಕಾಲೇಜು‌ ಮುಂಭಾಗ, ಸ್ಟೇಡಿಯಂ ರಸ್ತೆ, ಚಳ್ಳಕೆರೆ ಗೇಟ್ , ಚಳ್ಳಕೆರೆ ಮದಕರಿ ಪುರ ರಸ್ತೆ, ಹೊಳಲ್ಕೆರೆ ರಸ್ತೆ, ಪ್ರವಾಸಿ ಮಂದಿರ ಮುಂಭಾಗ,  ನಗರದ ಎಲ್ಲ ಪ್ರಮುಖ ರಸ್ತೆಗಳು ಇಂದು ಬಿಡಾಡಿ ದನಗಳಿಂದ ತುಂಬಿ ಹೋಗಿದ್ದು, ಜನತೆಗೆ ವಾಹನ ಸಂಚಾರ ಮಾಡುವುದೇ ದುಸ್ತರವಾಗುತ್ತಿದೆ.
ವಾಹನ  ಸವಾರರಿಗೆ ತೊಂದರೆ: ಅವಳಿ ನಗರದಲ್ಲಿರುವ ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆ ಉಂಟು  ಮಾಡುವುದು ಒಂದೆಡೆಯಾದರೆ ಇನ್ನು ನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಬಿಡಾಡಿ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆಯೇ ದಿಢೀರ್ ಎದ್ದು ಎಷ್ಟೋ ಬೈಕ್ ಸವಾರರಿಗೆ ಗಾಯದ ನೋವನ್ನು ನೀಡಿವೆ.‌ ಶಬ್ದ ಕೇಳಿದ ತಕ್ಷಣ  ರಸ್ತೆಯ ಅಕ್ಕಪಕ್ಕದುದ್ದಕ್ಕೂ ಓಡಾಡುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆಯನ್ನುಂಟು ಮಾಡಿವೆ.  ಇಷ್ಟಾದರೂ ನಗರಸಭೆಯು ಈ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
[t4b-ticker]

You May Also Like

More From Author

+ There are no comments

Add yours