ನನ್ನ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ನನ್ನ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡಿದ್ದು ಎಲ್ಲೂ ಸಹ ಒಂದು ಗುಡಿಸಲು ಇಲ್ಲ, ಇದಕ್ಕೆ ಸಾಕಷ್ಟು ಶ್ರಮಿಸಿದ್ದೇನೆ  ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಅಂಬೇಡ್ಕರ್ ಬೀದಿಯಲ್ಲಿ 85 ಜನ ಫಲಾನುಭವಿಗಳಿಗೆ ಆಸ್ತಿಯ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಬಡವರ ಮೇಲಿನ ಸಾಲವನ್ನು ಮನ್ನಾ ಮಾಡಿ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರ ಮಾಡುವ ಮೂಲಕ ಬಡವರ ಋಣ ತೀರಿಸುವ ಕೆಲಸ ಮಾಡಿದ್ದೇವೆ. ಹಕ್ಕು ಪತ್ರ ತೆಗೆದುಕೊಂಡ ನಂತರ ಸಹ ನಮಗೆ ಮನೆ ಕಟ್ಟಲು ಶಕ್ತನಾಗಿಲ್ಲ ಎಂದತೆ  ಸರ್ಕಾರವೇ  ನಿಯಮಾನುಸಾರ ವಂತಿಕೆ ಕಟ್ಟಿಸಿಕೊಂಡು  ಮನೆ ಕಟ್ಟಿಕೊಡಲಾಗುತ್ತದೆ.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ  75 ಯುನಿಟ್ ಉಚಿತ ವಿದ್ಯುತ್ ನೀಡಿದ್ದು ಬಡವರಿಗೆ ಸಾಕಷ್ಟು ಸಹಕಾರಿಯಾಗಿದೆ.
ಕೋವಿಡ್ ಸಮಯದಲ್ಲಿ  ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸಾವು ನೋವು ಆಗದಂತೆ ಜಾಗೃತಿ ವಹಿಸಿ ನನ್ನ ಜನರನ್ನು ಕಾಪಡಿಕೊಂಡು ಬಂದಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಎದುರಾದರು ಸಹ ಕೋವಿಡ್ ವ್ಯಾಕ್ಸಿನ್ ಪ್ರತಿ ಬಡಾವಣೆಯಲ್ಲಿ ತೆರಳಿ ಉಚಿತವಾಗಿ ದೇಶಾದ್ಯಂತ 200 ಕೋಟಿ  ಕೋವಿಡ್ ವ್ಯಾಕ್ಸಿನ್ ನೀಡುವ ಕೆಲಸ ನಮ್ಮ ಬಿಜೆಪಿ ಸರ್ಕಾರ ಮಾಡಿದೆ ಎಂದರು.
ದೇಶದ 82 ಕೋಟಿ ಜನರಿಗೆ ಉಚಿತವಾಗಿ ಅಕ್ಕಿಯನ್ನು ನೀಡುವ ಮೂಲಕ ಜನರು ಉಪವಾಸದಿಂದ ನರಳದಂತೆ ನೋಡಿಕೊಂಡಿದ್ದಾರೆ. ಆಯುಷ್ಮಾನ ಭಾರತ್ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ 5 ಲಕ್ಷ ಚಿಕಿತ್ಸೆಗೆ ನೀಡುವುದರಿಂದ ಬಡವರ ರಕ್ಷಣೆ ಮಾಡಿದ್ದೇವೆ.
ಸರ್ಕಾರದಿಂದ ಸಾಕಷ್ಟು ಸೌಲಭ್ಯ ನೀಡಿದ್ದು  ನೀವು ಒಂದು ಒತ್ತು ಉಪವಾಸ ಇದ್ದರು ಪರವಾಗಿಲ್ಲ ಮಕ್ಕಳ ವಿದ್ಯಾಭ್ಯಾಸವನ್ನು ಮಾತ್ರ ಮೊಟಕುಗೊಳಿಸಬೇಡಿ ಎಂದು ಮನವಿ ಮಾಡಿದರು.
ಬೀದಿದೀಪ , ನೀರಿನ ಸರಬರಾಜು ,ರಸ್ತೆ ಸೇರಿ ಯಾವುದು ಬಾಕಿ ಇಲ್ಲದಂತೆ  ಅಂಬೇಡ್ಕರ್ ಬಡಾವಣೆಗೆ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಚಿಕ್ಕ ಪಟ್ಟ ಸಮಸ್ಯೆಗಳು  ಏನೇ ಇದ್ದರು ನಗರಸಭೆ ಸದಸ್ಯರು ಮತ್ತು ನನ್ನ ಗಮನಕ್ಕೆ ತನ್ನಿ ಎಲ್ಲಾ‌ ನಗರಸಭೆ  ಸದಸ್ಯರು ಉತ್ತಮ ಕೆಲಸ ಮಾಡಿತ್ತಿದ್ದಾರೆ.  ಅಂಬೇಡ್ಕರ್ ಸುತ್ತಮೂಲಿನ ದೊಡ್ಡ ರಸ್ತೆಗಳ‌ ಅಭಿವೃದ್ಧಿಗೆ 4 ಕೋಟಿ ಹಣ ನೀಡಿದ್ದು ಹಂತ ಹಂತವಾಗಿ ಎಲ್ಲಾ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ  ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್,ನಗರಸಭೆ ಮಂಜುನಾಥ, ಸುರೇಶ್, ವೆಂಕಟೇಶ್, ದಾವುದ್, ಶ್ರೀದೇವಿ ಚಕ್ರವರ್ತಿ,ತಾರಕೇಶ್ವರಿ,ಮಂಜುನಾಥ,  ಸ್ಲಂ ಬೋರ್ಡ್ ಇಂಜಿನಿಯರ್ ವೀರೇಶ್ ಇದ್ದರು.
[t4b-ticker]

You May Also Like

More From Author

+ There are no comments

Add yours