ನನ್ನ ಕ್ಷೇತ್ರಕ್ಕೆ ನಾನು 2636 ಮನೆಗಳನ್ನು  ತಂದಿದ್ದೇನೆ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಫೆ:14: ನನ್ನ ಕ್ಷೇತ್ರಕ್ಕೆ ನಾನು 2636 ಮನೆಗಳನ್ನು  ತಂದಿದ್ದು  ಬಹುತೇಕ ಎಲ್ಲಾ ಜನಾಂಗದವರಿಗೆ ಗ್ರಾಮಸಭೆ ಮೂಲಕ ನಾನೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ  ಅವರು 94(c) ರಡಿ ಸೊಲ್ಲಾಪುರ ನಾಯಕರಹಟ್ಟಿಯ 42 ಫಲಾನುಭವಿಗಳಿಗೆ ಹಾಗೂ ಜೆ.ಎನ್ ಕೋಟೆ ಗ್ರಾಮದ 41 ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ 94(c) ಅಡಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಜೆ.ಎನ್.ಕೋಟೆ ಗ್ರಾಮದ 70 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದೇನೆ. ಸರ್ಕಾರ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಆಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಮನೆಗೆ ಯಾವುದೇ ದಾಖಲೆ ಇರಲಿಲ್ಲ. ಆದರೆ ಅಂತಹ ಬಡವರಿಗೆ ದಾಖಲೆ ನೀಡಿ ಮನೆಯ ಮೇಲೆ ಹಕ್ಕು ನೀಡಬೇಕು ಎಂದು ಅಂತಹ ಕುಟುಂಬಗಳನ್ನು ಗುರುತಿಸಿ ಹಕ್ಕು ಪತ್ರ ನೀಲಾಗುತ್ತಿದೆ. ಇಂದು ಸಹ ಜೆ.ಎನ್.‌ಕೋಟೆ ಗ್ರಾಮದ 40 , ನಾಯಕರ ಸೊಲ್ಲಪುರ ಗ್ರಾಮದ 52 ಫಲಾನುಭವಿಗಳಿಗೆ ಮನೆ ಹಕ್ಕು ಪತ್ರ ನೀಡಲಾಗಿದ್ದು ಇಂದನಿಂದ ಅವರ ಆಸ್ತಿಯಾಗುತ್ತದೆ ಎಂದರು.
ಪ್ರತಿಯೊಂದು ಕುಟುಂಬಕ್ಕೆ  ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬುದು ಕನಸಾಗಿರುತ್ತದೆ. ನನ್ನ ಕ್ಷೇತ್ರಕ್ಕೆ ವಿಶೇಷವಾಗಿ 2636 ಮನೆಗಳನ್ನು  ಸಿಎಂ ಮತ್ತು ಸಚಿವರ ಬಳಿ ಮನವಿ ಮಾಡಿ ತಂದಿದ್ದೇನೆ. ಇಷ್ಟು ಮನೆಗಳನ್ನು ನನಗೆ ನೀಡಿದ ಸಿಎಂ ಮತ್ತು ಸಚಿವರಿಗೆ ಕ್ಷೇತ್ರದ ಜನರ ಪರವಾಗಿ  ಅಭಿನಂದನೆ ಸಲ್ಲಿಸುತ್ತೇನೆ . ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ  ಆವಾಜ್  ಯೋಜನೆಯಡಿ 430 ಮನೆಗಳು ಬಂದಿದ್ದು  ಈ ಎಲ್ಲಾ ಸೇರಿ ಒಟ್ಟು 3 ಸಾವಿರಕ್ಕೂ ಹೆಚ್ಚು ಮನೆಗಳು ಆಗುತ್ತವೆ. ನನ್ನ ಕ್ಷೇತ್ರದಲ್ಲಿ ಬಹುತೇಕ  ಎಲ್ಲಾ ಜನಾಂಗದವರಿಗೆ  ಮನೆ ಸಿಕ್ಕಾಂತಾಗುತ್ತದೆ ಎಂದರು.
ಗ್ರಾಮಸಭೆಯಲ್ಲಿ ಆಯ್ಕೆಗೊಂಡ ಎಲ್ಲಾರೂ ಕಡ್ಡಾಯವಾಗಿ ಮನೆ ಕಟ್ಟಿಕೊಳ್ಳಬೇಕು. ಒಮ್ಮೆ ಅರ್ಜಿ ಹಾಕಿ ಕಟ್ಟಿಕೊಳ್ಳದಿದ್ದರೆ ಮತ್ತೆ ಮನೆ ಸಿಗುವುದಿಲ್ಲ. ಆ ದೃಷ್ಟಿಯಿಂದ ಸುಮ್ಮನೆ ಹೆಸರು ನೊಂದಯಿಸಬೇಡಿ.  ಎಲ್ಲಾರಿಗೂ ಮನೆ ನೀಡುತ್ತೇನೆ ಎಂದು ಭರವಸೆ ನೀಡಿದರು‌.
ತಹಶೀಲ್ದಾರ್  ನಾಗವೇಣಿ ಮಾತನಾಡಿ  ಸರ್ಕಾರದ ಯೋಜನೆಯಾದ ಆಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮ ಮಾಡಿ ಹಕ್ಕು ಪತ್ರ ನೀಡುವ ಕಾರ್ಯ ಮಾಡಲಾಗುತ್ತಿದೆ. ಶಾಸಕ ಸೂಚನೆಯಂತೆ   ಮೊದಲನೇ ಹಂತದಲ್ಲಿ ಸೊಲ್ಲಪುರ 52, ಜೆ.ಎನ್.ಕೋಟೆ 40 ಕುಟುಂಬಗಳಿಗೆ  ಮನೆಯ ಹಕ್ಕು ಪತ್ರ ನೀಡಲಾಗಿದೆ. ಇನ್ನು 37 ಅರ್ಜಿಗಳು ಬಾಕಿ ಇದ್ದಯ ದಾಖಲೆ ಪರಿಶೀಲನೆ ಮಾಡಿ ಶೀಫ್ರವಾಗಿ ಶಾಸಕ ಸೂಸಚನೆಯಂತೆ ಪೂರ್ಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾನಕೊಂಡ ಪಂಚಾಯಿತಿ ಅಧ್ಯಕ್ಷೆ ಚಿಂತಾಮಣಿ, ಉಪಾಧ್ಯಕ್ಷ ರಾಮಲಿಂಗಪ್ಪ , ಗ್ರಾಮ ಪಂಚಾಯತಿ ಸದಸ್ಯರಾದ ಮಲೇಶ್, ಶಿವಣ್ಣ, ಜೆ.ಎನ್.ಕೋಟೆ ಪಿಡಿಓ ನಿರ್ಮಲ, ಶಿರಸ್ತೇದಾರ್ ವಿನೂತಾ, ಗ್ರಾಮ ಆಡಳಿತ ಅಧಿಕಾರುಗಳಾದ ಪಾಂಡು ರಂಗಪ್ಪ, ಅಣ್ಣೇಶ್  ಮತ್ತು ಫಲಾನುಭವಿಗಳು ಇದ್ದರು..
[t4b-ticker]

You May Also Like

More From Author

+ There are no comments

Add yours