ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ, ಚಿತ್ರದುರ್ಗದಲ್ಲಿ ಬಂಗಾರದ ಬೆಲೆ ಎಷ್ಟಿದೆ

 

ಭಾರತದಲ್ಲಿ ಚಿನ್ನದ ( gold rates) ಬೆಲೆ ಎಷ್ಟಿದೆ?

ಭಾರತದಲ್ಲಿ, ರಿಟೇಲ್ ಸ್ಟೋರ್‌ಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆಯು ಮಂಗಳವಾರದಂದು 10 ಗ್ರಾಂಗೆ 1,090 ರೂಪಾಯಿಯಷ್ಟು ಇಳಿಕೆಯಾಗಿ, 63,110 ರೂಪಾಯಿಗೆ ಕುಸಿತ ಕಂಡಿದೆ. ಈ ಹಿಂದೆ 24 ಕ್ಯಾರೆಟ್‌ನ ಚಿನ್ನವು ಸಾರ್ವಕಾಲಿಕವಾಗಿ 64,200 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಲೆಯು 10,900 ರೂಪಾಯಿ ಇಳಿದಿದೆ.

ಇದಲ್ಲದೆ, 22 ಕ್ಯಾರೆಟ್‌ನ ಚಿನ್ನದ ದರವು ಭಾರತದಲ್ಲಿ 10 ಗ್ರಾಂಗೆ 1,000 ರೂಪಾಯಿಯಷ್ಟು ಇಳಿಕೆಯಾಗಿ, 57,850 ರೂಪಾಯಿಗೆ ಕುಸಿದಿದೆ. 22 ಕ್ಯಾರೆಟ್‌ನ ಚಿನ್ನದ ಗರಿಷ್ಠ ಮಟ್ಟ 10 ಗ್ರಾಂಗೆ 58,850 ರೂಪಾಯಿ ಆಗಿತ್ತು. 100 ಗ್ರಾಂ ಹಳದಿ ಲೋಹವು 10,000 ರೂಪಾಯಿ ಕುಸಿದಿದೆ.

ಇದಲ್ಲದೆ, ಈ ಹಿಂದೆ 10 ಗ್ರಾಂನ 18 ಕ್ಯಾರೆಟ್ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ ಇಂದು 10 ಗ್ರಾಂ ಚಿನ್ನದ ಬೆಲೆ 820 ರೂಪಾಯಿ ಇಳಿದು, 47,330 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನವು 8,200 ರೂಪಾಯಿಯಷ್ಟು ಕುಸಿದಿದೆ. ಒಂದು ಗ್ರಾಂ ಬೆಲೆ 82 ರೂಪಾಯಿ ಇಳಿದಿದೆ.

ಭಾರತದಾದ್ಯಂತ ರಿಟೇಲ್ ಸ್ಟೋರ್‌ನಲ್ಲಿ ಬೆಳ್ಳಿ ಬೆಲೆಯು ಕೂಡಾ ಇಂದು ಇಳಿಕೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಲೋಹವು ಕೂಡಾ ಅಗ್ಗವಾಗಿದೆ. ಡಿಸೆಂಬರ್ 3 ರಂದು 1 ಕೆಜಿ ಬೆಳ್ಳಿ ದರವು 80,500 ರೂಪಾಯಿ ಆಗಿದೆ. ಆದರೆ ಡಿಸೆಂಬರ್ 4 ರಂದು 1 ಕೆಜಿ ಬೆಳ್ಳಿ ದರವು 2,000 ರೂಪಾಯಿಯಷ್ಟು ಇಳಿದು, 78,500 ರೂಪಾಯಿಗೆ ತಲುಪಿದೆ.

ಬೆಲೆ ಇಳಿಕೆಗೆ ಕಾರಣವೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ತಾ ಈಕ್ವಿಟೀಸ್‌ನ ಕಮೋಡಿಟೀಸ್ ವಿಪಿ ರಾಹುಲ್ ಕಲಂತ್ರಿ, “ಏಷ್ಯನ್ ಸೆಷನ್‌ನಲ್ಲಿ ಸೋಮವಾರ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿದೆ. ಚಿನ್ನವು 2,150 ಡಾಲರ್‌ನ ಹೊಸ ದಾಖಲೆಯನ್ನು ತಲುಪಿದೆ. ಳ್ಳಿಯ ಬೆಲೆಗಳು ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ,” ಎಂದು ತಿಳಿಸಿದರು.

ಚಿತ್ರದುರ್ಗದಲ್ಲಿ 24 ಕ್ಯಾರೆಟ್ ಚಿನ್ನದ ದರ (ಇಂದು ಮತ್ತು ನಿನ್ನೆ)

ಗ್ರಾಂ ಇಂದು ನಿನ್ನೆ ಬೆಲೆ ಬದಲಾವಣೆ
1 ಗ್ರಾಂ ₹ 6,190 ₹ 6,295 ₹ 105 
8 ಗ್ರಾಂ ₹ 49,520 ₹ 50,360 ₹ 840 
10 ಗ್ರಾಂ ₹ 61,900 ₹ 62,950 ₹ 1,050

 

[t4b-ticker]

You May Also Like

More From Author

+ There are no comments

Add yours