LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಎಷ್ಟು ಗೊತ್ತೆ.

 

ನವದೆಹಲಿ, ಜೂನ್‌ .01:ಈ ಹಿಂದೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ 1,000 ರೂಪಾಯಿ ಗಡಿ ದಾಟಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್‌ ನಾಯಕರು ಆಗಿನ ಆಡಳಿತ ಸರ್ಕಾರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 500 ರೂಪಾಯಿ ಇಳಿಕೆ ಮಾಡುತ್ತೇವೆಂದು ಹೇಳಿದ್ದರು.

ಆದರೆ ಇದೀಗ ಇಂದಿನಿಂದಲೇ ಅಂದರೆ ಜೂನ್‌ 1ರಿಂದ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹಾಗಾದರೆ ಎಷ್ಟು ಕಡಿತವಾಗಿದೆ ಎಂದು ಇಲ್ಲಿ ತಿಳಿಯಿರಿ

2023ರ ಜೂ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ತೈಲ ಕಂಪನಿಗಳು ಜೂನ್ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಡಿತ ಮಾಡಿವೆ ಎನ್ನುವ ಮಾಹಿರಿ ಲಭ್ಯವಾಗಿದೆ. ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂಪಾಯಿನಷ್ಟು ಇಳಿಕೆಯಾಗಿದೆ ಎಂದು ದಿ ಎಕನಾಮಿಕ್ಸ್‌ ಟೈಮ್ಸ್ ವರದಿ ಮಾಡಿದೆ.

19 ಕೆಜಿ ವಾಣಿಜ್ಯ  LPG ಸಿಲಿಂಡರ್‌ಗೆ ಈಗ 1773 ರೂಪಾಯಿ ಆಗಿದೆ. ಈ ಮೊದಲು ಸಿಲಿಂಡರ್ ಬೆಲೆ 1856.50 ರೂಪಾಯಿ ಇತ್ತು. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗುದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಪರಿಹಾರ ನೀಡುವುದಲ್ಲದೆ, ಜೆಟ್ ಇಂಧನ ಬೆಲೆಯನ್ನು ತೈಲ ಕಂಪನಿಗಳು ಕಡಿತಗೊಳಿಸಿವೆ.

[t4b-ticker]

You May Also Like

More From Author

+ There are no comments

Add yours