ನಾಯಕನಹಟ್ಟಿ ತಿಪ್ಪೇಶನ ಹುಂಡಿಯ ಇದ್ದಿದ್ದು ಎಷ್ಟು ಲಕ್ಷ ಗೊತ್ತೆ!

 

ನಾಯಕನಹಟ್ಟಿ : ಗುರು ತಿಪ್ಪೇರುದ್ರಸ್ವಾಮಿ ಹೊರಮಠ  ಮತ್ತು  ಒಳಮಠ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯವನ್ನು  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇವರ ಆದೇಶದಂತೆ ಇಂದು ತಹಶೀಲ್ದಾರ್ ಎನ್.ರಘುಮೂರ್ತಿ ಹಾಗೂ  ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರಪ್ಪ ಹಾಗೂ ಕಂದಾಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಹುಂಡಿ ಬೀಗ ತೆಗೆದು ಹಣ ಏಣಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಬೆಳಗ್ಗೆ 9.30 ಕ್ಕೆ  ಹುಂಡಿ ಏಣಿಕೆ ಕಾರ್ಯ ಆರಂಭವಾಯಿತು ಹೊರಮಠದಲ್ಲಿ    16,24,583 ಲಕ್ಷ ಹುಂಡಿಯಲ್ಲಿತ್ತು.  ನಂತರ ಒಳಮಠದ ದೇವಸ್ಥಾನದಲ್ಲಿ ಇದ್ದ ಎಲ್ಲಾ ಹುಂಡಿಗಳನ್ನು ತೆರವು ಮಾಡಿ ಹುಂಡಿಗಳನ್ನು ಏಣಿಕೆ ಕಾರ್ಯ  ಆರಂಭಿಸಿ ಸುಮಾರು ರಾತ್ರಿ 9 ಗಂಟೆ  ಸುಮಾರಿಗೆ ಒಳ ಮಠದ ಏಣಿಕೆ ಕಾರ್ಯ ಮುಗಿಯಿತು ಇದರಲ್ಲಿ 51,40,500 ಲಕ್ಷ ರೂ ಇತ್ತು ಒಟ್ಟು 67,65,083 ಲಕ್ಷ ಹುಂಡಿಯ ಹಣ ಇದೆ . ಇಂದು ದೇವಸ್ಥಾದಲ್ಲಿ ವಿಶೇಷ ಸಿ.ಸಿ ಕ್ಯಾಮರಾ ಹಾಗೂ ವಿಡಿಯೋ ಚಿತ್ರೀಕರಣದ ಮೂಲಕ ಹುಂಡಿ ಹಣ ತೆರೆಯಲಾಯಿತು. .ಹಿರಿಯೂರು ದೇವಸ್ಥಾನದಲ್ಲಿ ಹುಂಡಿ ಹಣ ಕಳ್ಳತನಾದ ಹಿನ್ನೆಲೆಯಲ್ಲಿ ನಾಯಕಹಟ್ಟಿಯಲ್ಲಿ ಜಾತ್ರೆಯಾಗಿ ಇಲ್ಲಿಯವರಿಗೆ ಪೋಲೀಸ್ ಬಂದೂಬಸ್ತ್  ಏರ್ಪಡಿಸಲಾಗಿತ್ತು. ಕಾಣಿಕೆ ಹುಂಡಿಯಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ  ಪತ್ರಗಳ ಬರೆದು ಪತ್ರಗಳನ್ನು ಹಾಕಲಾಗಿತ್ತು. ಇದರ ಜೊತೆಗೆ ಬೆಳ್ಳಿ ಪಾದಕ್ಕೆ ತೊಟ್ಟಿಲು ಇತರೆ ಬೆಳ್ಳಿ ವಸ್ತುಗಳನ್ನು ಹುಂಡಿಯೊಳಗೆ ಹಾಕಿದ್ದರು. ಪಾಪಿಯಿಂದ ಪಾಮರರ ಅಭಿಷ್ಟ ಗಳನ್ನು ಈಡೇರಿಸುವಂತಹ ಮಹಾದೈವ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ನೀಡುವಂತಹ ಕರುಣಾಮಯಿ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ತಮ್ಮ ಅಭಿಷ್ಟ ಗಳನ್ನು ಹೊತ್ತತಂಹ ಅನೇಕ ಮನವಿಗಳು ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ ಹಲವಾರು ಭಕ್ತರು ಮದುವೆ ನೌಕರಿ, ಆರ್ಥಿಕ ಸಂಕಷ್ಟ ಸಂತಾನ ಆರೋಗ್ಯ ಮುಂತಾದಂತಹ ಹಲವಾರು ಮನವಿಗಳನ್ನು ಕಾಣಿಕೆ ಹುಂಡಿಗೆ ಸಲ್ಲಿಸಿದ್ದಾರೆ. ಇವರೆಲ್ಲರ ಅಭಿಷ್ಟ ಗಳನ್ನು ಈ ಮಹಾದೇವ ಈಡೇರಿಸುವನೆಂಬ ಆಶಾಭಾವನೆ ಭಕ್ತರಲ್ಲಿದೆ ಎಂಬ ಮಾಹಿತಿಯನ್ನು ತಹಶೀಲ್ದಾರ್ ರಘುಮೂರ್ತಿ ಮಾಹಿತಿ ನೀಡಿದರು.

[t4b-ticker]

You May Also Like

More From Author

+ There are no comments

Add yours