ಶಾಲೆಯ ಕೊಠಡಿ ದಿಢೀರ್ ಕುಸಿದ,ಮಕ್ಕಳಿಗೇನಾಯ್ತು?

 

ಮೌಲಾನಾ ಆಜಾದ್ ಮಾದರಿ ಶಾಲೆಯ ಕೊಠಡಿ ದಿಢೀರ್ ಕುಸಿತ : ತಪ್ಪಿದ ಬಾರಿ ಅನಾಹುತ.

ಚಳ್ಳಕೆರೆ-೦೬ ನಗರದ ಶಾಂತಿನಗರದಲ್ಲಿ ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ನಡೆಯುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಯ ಕೊಠಡಿಯೊಂದು ಮಧ್ಯಾಹ್ನ ನಾಲ್ಕರ ಸಮಯದಲ್ಲಿ ದಿಢೀರನೆ ಕುಸಿದು ಬಿದ್ದಿದೆ.challakere 

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಕಳೆದ ಕೆಲವು ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ಈ ಶಾಲೆಯನ್ನು ನಡೆಸುತ್ತಿದ್ದು, ಶಾಲಾ ಕೊಠಡಿಯ ಮೇಲ್ಭಾಗದಲ್ಲಿದ್ದ ಸೀಟ್ ಹಾಗೂ ಮರದ ರಿಪೀಸ್‌ಗಳು ತುಂಡಾಗಿ ಕೆಳಗೆ ಬಿದ್ದಿವೆ. ಈ ಸಂದರ್ಭದಲ್ಲಿ ತರಗತಿಯಲ್ಲಿದ್ದ ಎಲ್ಲಾ ಮಕ್ಕಳು ಹೊರಗೆ ಹೋಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಕಾಂತರಾಜು, ಬಿಇಒ ಕೆ.ಎಸ್.ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಠಡಿಯನ್ನು ದುರಸ್ಥಿಗೊಳಿಸುವಂತೆ ಸೂಚನೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ, ಪ್ರಸ್ತುತ ಶಾಲೆಯಲ್ಲಿ ೧೦೬ ವಿದ್ಯಾರ್ಥಿಗಳು, ಮೂರು ವಿಭಾಗಗಳಲ್ಲಿ ತರಗತಿಗಳು ನಡೆಯುತ್ತಿವೆ. ಬೋಧನೆ ಮುಗಿಸಿ ಶಿಕ್ಷಕಿ ಮತ್ತು ವಿದ್ಯಾರ್ಥಿಗಳು ಹೊರಬಂದ ಸಂದರ್ಭದಲ್ಲಿ ದಿಢೀರನೆ ಕುಸಿದು ಬಿದ್ದಿದೆ ಎಂದರು.

[t4b-ticker]

You May Also Like

More From Author

+ There are no comments

Add yours