ಸರಕಾರ ಕೆರೆಗಳ ಸಂರಕ್ಷಣೆ ಸಂಪೂರ್ಣ ನಿರ್ಲಕ್ಷ್ಯ: ನಾಗರಾಜಯ್ಯ ಅಕ್ರೋಶ

 

ವರದಿ: ಎಸ್.ವೇದಮೂರ್ತಿ 
ಹೊಳಲ್ಕೆರೆ : ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಪಕ್ಷಿಗಳು ಹಾಗೂ ದೈನಂದಿನ ಬಳಕೆಗೆ ನೀರಿನ ಅಗತ್ಯ ಮನಗಂಡು ಹಿಂದಿನ ಕಾಲದಲ್ಲಿ ತಗ್ಗಿನ ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರೇ ಸರಕಾರ ಮಾತ್ರ ಕೆರೆಗಳ ಸಂರಕ್ಷಣೆ ಸಂಪೂರ್ಣ ನಿರ್ಲಷ್ಯಿಸಿದೆ ಎಂದು ಜಿಲ್ಲಾ ಕೆರೆ ಬಳಕೆದಾರರ ಸಂಘದ  ಪ್ರಧಾನ ಕಾರ್ಯಧರ್ಶಿ ನಾಗರಾಜಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕೆರೆಬಳಕೆದಾರರ ಒಕ್ಕೂಟ ರಚನೆ ಸಭೆಯಲ್ಲಿ ಮಾತನಾಡಿದರು.
ಕೆರೆಗಳ ರಚನೆ ಜತೆ ಸಂರಕ್ಷಣೆ ಪ್ರಮುಖವಾಗಿದೆ. ಕೆರೆಯ ಅಚ್ಚುಕಟ್ಟುದಾರರು ಕೆರೆಗಳ ಸಂರಕ್ಷಣೆ ಕೆರೆ ಬಳಕೆಗಾರರ ಸಮಿತಿ ಮಾಡಿಕೊಂಡಿದ್ದರೂ, ಸರಕಾರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಕೆರೆಗಳ ಹೆಸರಲ್ಲಿ ಲೋಟಿ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿದೆ. ಕೆರೆಗಳ ಅಭಿವೃದ್ಧಿ ಹಾಗೂ ಅವುಗಳ ಸಂರಕ್ಷಣೆ ಹಿತ ದೃಷ್ಟಿಯಿಂದ ಕೆÀರೆ ಬಳಕೆದಾರರ ಸಂಘಗಳು ಪ್ರತಿಯೊಂದು ಗ್ರಾಮದಲ್ಲಿ ರಚನೆ ಮಾಡಬೇಕು. ಆಗ ಜಲಮೂಲ ಉಳಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಎಲ್ಲಾ ಗ್ರಾಮಗಳಲ್ಲಿ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ಜಿ.ಪಂ.ಮಾಜಿ ಸದಸ್ಯರಾದ ಕುನುಗಲಿ ಷಣ್ಮುಖಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆರೆಗಳ ಸಂರಕ್ಷಣೆ ಪ್ರಮುಖ ಉದ್ದೇಶವಾಗಿದೆ. ಕೆರೆಗಳು ನೀರಿನಿಂದ ತುಂಭಿವೆ. ಅವುಗಳನ್ನು ಉಳಿಸಿಕೊಳ್ಳಲು ಬೇಕಾದ ಕೆರೆ ಸಂರಕ್ಷಣಾ ಕಾನೂನುಗಳನ್ನು ಪಾಲನೆ ಮಾಡುವುದರ ಮೂಲಕ ಅಭಿವೃದ್ಧಿ ಸಾಧಿಸಬೇಕೆಂದರು.
ಇಂದು ಸರಕಾರ ಸಾಕಷ್ಟು ಅನುದಾನವನ್ನು ಕೆರೆಗಳ ಅಭಿವೃದ್ಧಿಗೆ ನೀಡುತ್ತಿದೆ. ಅದೇಲ್ಲ ಸರಕಾರಿ ಆಧಿಕಾರಿಗಳ ಕೈಯಲ್ಲಿ ಖಾಲಿಯಾಗುತ್ತಿದೆ. ಅಭಿವೃದ್ಧಿಗೆ ಗ್ರಾಮ ಹಾಗೂ ಕೆರೆ ಬಳಕೆದಾರರ ಗಮನಕ್ಕೆ ತರುತ್ತಿಲ್ಲ. ಸ್ಥಳಿಯ ರೈತರ ಹಾಗೂ ಜನರ ಗಮನಕ್ಕೆ ಬರುತ್ತಿಲ್ಲ. ಅದರೂ ಕೋಟ್ಯಾಂತರ ಅನುದಾನ ಕೆರೆಗಳ ಅಭವೃದ್ಧಿ ವ್ಯಯಿಸಲಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಸರಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೆರೆಬಳಕೆದಾರರ ಸಂಘ ರಚಿಸಿಕೊಳ್ಳಬೇಕು. ಆಮೂಲಕ ಜಲಮೂಲಗಳನ್ನು ಸಂರಕ್ಷಣೆ ಒತ್ತು ನೀಡಬೇಕೆಂದರು.
ತಾಲೂಕು ಕೆರೆ ಬಳಕೆ ಸಂಘದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ನಾಡಿಗ್ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲಾ ಕೆರೆಗಳ ಅಚ್ಚುಕಟ್ಟುದಾರರ ಸಂಘಟನೆ ಮೂಲಕ ತಾಲೂಕಿನಲ್ಲಿ ಪ್ರಭಲವಾಗಿರುವ ಕೆರೆ ಬಳಕೆದಾರರ ಸಂಘವನ್ನು ರಚಸಿ ಕೆರೆ ಸಂರಕ್ಷಣೆ ಬೇಕಾದ ಎಲ್ಲಾರೀತಿಯ ಕ್ರಯಮಗಳನ್ನು ಕೈಗೊಳ್ಳಲಾಗುತ್ತದೆ ಎಂಧರು.
ಕಾರ್ಯದರ್ಶಿಯಾಗಿ ತಾಳ್ಯ ಗ್ರಾ.ಪಂ.ಮಾಜಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷರಾಗಿ ಕುಡಿನೀರುಕಟ್ಟೆ ಲಂಬಾಣಿಹಟ್ಟಿ ಜಯಾನಾಯ್ಕ, ಖಂಜಾಚಿಯಾಗಿ ಲೋಕದೊಳಲು ಶೈಲಜಾ, ನಿರ್ದೇಶಕರಾಗಿ ಚಿಕ್ಕಎಮ್ಮಿಗನೂರು ಎಸ್.ಹೆಚ್.ಗಿರೀಶ್, ತಾಳಿಕಟ್ಟೆ ಟಿ.ಕೆ.ನಿಂಗಪ್ಪ, ಟಿ.ವಡೆರಹಳ್ಳಿ ಟಿ.ಓಂಕಾರಪ್ಪ, ಹೆಚ್.ಕೆ.ಬಸವರಾಜ್ ಹನುಮಲಿ, ಎನ್.ರಘನಂದನ್ ಅರಸನಘಟ್ಟ, ಆಯ್ಕೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಪ್ರಮುಖರಾದ ಗುಂಡೇರಿ ಚಂದ್ರಶೇಖರ್, ಲೋಕದೊಳಲು ರಂಗಸ್ವಾಮಿ, ಹಾಗೂ ಹೊಳಲ್ಕೆರೆ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಇಂದ್ರಪ್ಪ, ಕುಡಿನೀರಕಟ್ಟೆ ಕೆ.ಹೆಚ್.ಲಿಂಗರಾಜ್, ಬಿದುರ್ಗ ಬಿ.ಆರ್.ರುದ್ರೇಗೌಡ, ಗುಂಜಗನೂರು ಲವಕುಮಾರ್, ಹನುಮಲಿ ಹೆಚ್.ಎಸ್.ಜಗದೀಶ್, ಉಪ್ಪರಿಗೆನಹಳ್ಳಿ ಚಂದ್ರಪ್ಪ, ಅಂದನೂರು ಲೋಹಿತಾಶ್ವ, ಕೇಶವಾಪುರದ ಮೋಹನ್ ಕುಮಾರ್, ಕಾಗಳಗೆರೆ ರಾಜಪ್ಪ, ಗಿಲಿಕೆನಹಳ್ಳಿ ರಾಜಪ್ಪ, ಅಪ್ಪರಸನಹಳ್ಳಿ ಜಿ.ಎಸ್.ಶಶಿಧರ್, ಅರಸನಘಟ್ಟದ ಎ.ಎಸ್.ಸುರೇಶ್, ಮುಖಂಡರಾದ ಕುಬೇಂದ್ರಪ್ಪ, ಚಿದಾನಂದ, ದೇವರಮನೆ ಈಶ್ವರಪ್ಪ ಸೇರಿದಂತೆ ಹಲವಾರು ಕರೆ ಬಳಕೆದಾರರ ಸಂಘದ ಅಧ್ಯಕ್ಷರ ಸದಸ್ಯರು ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours