ಕೋಟೆ ನಾಡು ಕೇಸರಿ ನಾಡು.ಹಿಂದೂ ಮಹಾಗಣಪತಿಗೆ ಶೋಭ ಯಾತ್ರೆಯ ಜನ ಸಾಗರದ ವಿಡಿಯೋ ನೋಡಿ

 

ಹಿಂದೂ ಮಹಾಗಣಪತಿ ಮೆರವಣಿಗೆ

ಚಿತ್ರದುರ್ಗ:  ಕೋವಿಡ್‌ 19 ಕಾರಣದಿಂದ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಈ ಬಾರಿ ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ವ್ಯಕ್ತವಾಗಿದೆ. ಮೆರವಣಿಗೆ ಸಾಗುವ ಮೂರುವರೆ ಕಿ.ಮೀ ಮಾರ್ಗ ಸಂಪೂರ್ಣ ಕೇಸರಿಮಯವಾಗಿದೆ. ಇದಕ್ಕಾಗಿ ಹಗಲಿರುಳಿ ನೂರಾರು ಸಂಘಪರಿವಾರದ ಕಾರ್ಯಕರ್ತರು ತೆರೆಯ ಹಿಂದಿದ್ದು ಕೆಲಸ ಮಾಡಿದ್ದಾರೆ.

ಗಣೇಶನ ಹಬ್ಬ ಬಂತು ಎಂದರೆ ಎಲ್ಲರಿಗೂ ನೆನಪಾಗುವುದು ಕೋಟೆ ನಾಡು. ಹೌದು ರಾಜ್ಯದಲ್ಲೇ ಗಣಪತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ ತೋರಿಸಿದ್ದೇ ಬಯಲು ಸೀಮೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ. ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಲಕ್ಷಾಂತರ ಮಂದಿ ಸಮ್ಮುಖದಲ್ಲಿ ಆರಂಭಗೊಂಡಿದೆ.

ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ವಿಎಚ್ ಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಅಂಬರೀಶ್ ಸಿಂಗ್ ಅದ್ದೂರಿ ಚಾಲನೆ ನೀಡಿದರು. ಶೋಭಾ ಅಂಗವಾಗಿ ಗಣಪತಿಗೆ ಪುಷ್ಪಾರ್ಚನೆ ಮಾಡಿ ಅಂಬರೀಶ್ ಸಿಂಗ್ ಅದ್ದೂರಿ ಚಾಲನೆ ನೀಡಿದರು. ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬಂದಿತ್ತು. ಡಿಜೆ ಸದ್ದಿಗೆ ಲಕ್ಷಾಂತರ ಮಂದಿ ಭಕ್ತರು, ಕಾರ್ಯಕರ್ತರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕೋಟೆನಾಡಿ ಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ಮತ್ತು ಶೋಭಾಯಾತ್ರೆ ಅತ್ಯಂತ ಅವಿಸ್ಮರಣೀಯವಾಗಿ ನಡೆಯಿತು. ಶೋಭಾಯಾತ್ರೆ ಅಂಗವಾಗಿ ಚಿತ್ರದುರ್ಗ ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನ ರಜೆ ಘೋಷಣೆ ಮಾಡಲಾಗಿತ್ತು.
ಚಿತ್ರದುರ್ಗ ನಗರದಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಅದ್ಧೂರಿ ಮೆರವಣಿಗೆ, ಡಿಜೆ ಶಬ್ದಕ್ಕೆ 1 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಸಾರ್ವಜನಿಕರುಗಳು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು.
ಈ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆ.17ರಂದು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಚಿತ್ರದುರ್ಗ ಪೊಲೀಸ್ ಅಧೀಕ್ಷಕ ಪರಶುರಾಮ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಹಾಗೂ ಪಿಯು ಡಿಡಿ ಅವರಿಗೆ ಪತ್ರ ಬರೆದು ಕೋರಿದ್ದರು. ಪತ್ರದನ್ವಯ ರಜೆ ಘೋಷಣೆ ಮಾಡಲಾಗಿದೆ.ಇಂದು ನಷ್ಟವಾದ ತರಗತಿಗಳನ್ನು ಮುಂದಿನ ಶನಿವಾರದ ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಕ್ಲಾಸ್ ನಡೆಸಲು ಸೂಚಿಸಲಾಗಿತ್ತು. ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆ ಮತ್ತು ಮೆರವಣಿಗೆ ಹಿನ್ನೆಲೆಯಲ್ಲಿ ಕೋಟೆ ನಗರಿಯ ಬಹುತೇಕ ವೃತ್ತಗಳು, ಮುಖ್ಯ ರಸ್ತೆಯ ಮಧ್ಯದಲ್ಲಿರುವ ಡಿವೈಡರ್, ರಸ್ತೆಯ ಎರಡು ಬದಿಯಲ್ಲಿ ದೊಡ್ಡ ದೊಡ್ಡ ಕೇಸರಿ ಬಾವುಟಗಳನ್ನು ಕಟ್ಟಿದ್ದರಿಂದ ಇಡೀ ನಗರ ಕೇಸರಿಮಯವಾಗಿ ಬದಲಾಗಿತ್ತು.

ಬಂದೋಬಸ್ತ್ ವ್ಯವಸ್ಥೆ-
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪಥಸಂಚಲನ ನಡೆಸಿ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ನಗರದಲ್ಲಿ 8 ಕೆಎಸ್‍ಆರ್‌ಪಿ ತುಕಡಿಗಳು, 8 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜೊತೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿದ್ದರು. ಇನ್ನು ಒಳ ಬರುವ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂಬೂಗಳಿಂದ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ವಾಚಿಂಗ್ ಟವರ್ ನಿರ್ಮಾಣ ಮಾಡಲಾಗಿತ್ತು.
ಶೋಭಾಯಾತ್ರೆ ಆರಂಭಃ
ಸೆ.17ರಂದು ಶನಿವಾರ ಬೆಳಿಗ್ಗೆ ಜೈನ್‌ಧಾಮದ ಆವರಣದಲ್ಲಿ ಹಿಂದೂ ಮಹಾ ಗಣಪತಿಯ ವಿಸರ್ಜನೆ ಹಾಗೂ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷತ್‌ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಂಬರೀಶ್‌ ಸಿಂಗ್‌ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ವಿಜ್ಞಾನ ಕಾಲೇಜ್‌ ಮುಂಭಾಗದಿಂದ ಆರಂಭವಾಗುವ ಮಹಾ ಗಣಪತಿ ಮೆರವಣಿಗೆ ಚಂದ್ರವಳ್ಳಿ ಕೆರೆ ತನಕ ಅಂದರೆ ಸುಮಾರು ಮೂರೂವರೆ ಕಿಲೋಮೀಟರ್ ಶೋಭಾಯಾತ್ರೆ ನಡೆಯಲಿದೆ. ಶೋಭಯಾತ್ರೆ ನಂತರ ಚಂದ್ರವಳ್ಳಿ ಕೆರೆಯಲ್ಲಿ ಮಹಾ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ. ಈ ಸಂಭ್ರಮದ ಕ್ಷಣಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾಗಿದ್ದರು. ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು. ಎತ್ತ ತಿರುಗಿ ನೋಡಿದರು ಜನವೋ, ಜನ. ಗಣಪತಿ ಮೆರವಣಿಗೆಗೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನ ಸ್ಥಳದಿಂದ ಮೆರವಣಿಗೆ ಹೊರಟು ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದದ ಮೂಲಕ ಶೋಭಾಯಾತ್ರೆ ಸಾಗಲಿದೆ.
ಪೊಲೀಸರ ಸರ್ಪಗಾವಲು ಮಧ್ಯೆಯೂ ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾಗಿದ್ದರು. ಇನ್ನೂ ಶೋಭಾಯಾತ್ರೆ ಸಾಗುವ ಮಾರ್ಗದ ರಸ್ತೆ ಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಎತ್ತನೋಡಿದರೂ ಕೇಸರಿ ಬಾವುಟಕ್ಕೆ ಹಾರಾಟ ಗಣೇಶನ ಬೃಹತ್ ಶೋಭಾಯಾತ್ರೆಗೆ ಚಿತ್ರದುರ್ಗ ನಗರ ಕೇಸರಿ ಬಣ್ಣದ ಮಾಯಾವಾಗಿದೆ. ಎತ್ತ ನೋಡಿದರೂ ಕೇಸರಿ ಬಾವುಟಗಳ ಹಾರಾಟ ಕಾಣುತ್ತಿತ್ತು. ನಗರದ ವೃತ್ತಗಳಿಗೆ ಬಣ್ಣ ಬಣ್ಣದ ಅಲಂಕಾರ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಮದಕರಿನಾಯಕ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ, ಕನಕ ಸರ್ಕಲ್ ಸೇರಿದಂತೆ ಮತ್ತಿತರರ ವೃತ್ತಗಳಿಗೆ ಭಾರಿ ಅಲಂಕಾರ ಮಾಡಲಾಗಿತ್ತು. ಹಿಂದೂ ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ನಗರದೆಲ್ಲೆಡೆ ವಿಜೃಂಭಣೆಯಿಂದ ನಡೆಯಿತು.

[t4b-ticker]

You May Also Like

More From Author

+ There are no comments

Add yours