ಗೌರವ ಡಾಕ್ಟರೇಟ್ ಪಡೆದರು “ಡಾ”ಎಂದು ಹಾಕಿಕೊಳ್ಳವಂತಿಲ್ಲ

 

ವಿಧಾನಪರಿಷತ್ತು: ಗೌರವ ಡಾಕ್ಟರೇಟ್ ಪಡೆದಿದ್ದರೂ ಅವರು ತಮ್ಮ ಹೆಸರಿನ  ಮುಂದೆ ‘ಡಾ.’ ಎಂದು ಬಳಸಿಕೊಳ್ಳತ್ತಿದ್ದರು, ಆದರೆ  ಹಾಗೇ ಬಳಸಿಕೊಳ್ಳವಂತಿಲ್ಲ   ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕ‌ರ್ ತಿಳಿಸಿದರು.ಪ್ರಶೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೌರವ ಡಾಕ್ಟರೇಟ್ ಕೊಡುವುದಕ್ಕೂ ನಿಯಮ ಇದೆ.

ಗೌರವ ಡಾಕ್ಟರೇಟ್ ಪಡೆದವರು ಹೆಸರಿನಿಂದಲೇ ಮೊದಲು ‘ಡಾ.’ ಎಂದು ಹಾಕಿಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರಿಂ ಕೋರ್ಟ್‌ ಆದೇಶವೇ ಇದೆ ಎಂದು ಖಚಿತಪಡಿಸಿದರು.

ಇದನ್ನೂ ಓದಿ: ಬಾಲಕನ ಮೇಲೆ ಟ್ರಾಕ್ಟರ್ ಹತ್ತಿ ಸಾವು, ಮಗು ಮತ್ತು ಟ್ರಾಕ್ಟರ್ ನಡುವೆ ಅಪಘಾತ ಆಗಿದ್ದೇಗೆ

ಇತ್ತೀಚಿನ ದಿನಗಳಲ್ಲಿ ಯಾವ್ಯಾವುದೋ ವಿವಿಗಳು ಅರ್ಹರಲ್ಲದವರಿಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇದರಿಂದಾಗಿ ಗೌರವ ಡಾಕ್ಟರೇಟ್ ನೀಡಲು ಸರ್ಕಾರಿ, ಖಾಸಗಿ ವಿವಿಗಳಿಗೆ ಏಕರೂಪ ನಿಯಮ ಜಾರಿಗೆ ತರಲಾಗುವುದು. ಈ ಕುರಿತಂತೆ ಕರ್ನಾಕಟ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours