ಕೈಚಳಕದಲ್ಲರಳುವ ರಂಗೋಲಿಗೆ ಮಾರುಕಟ್ಟೆಯಲ್ಲಿ ಬಣ್ಣದ ಕಾರುಬಾರು.

 

ವಿಶೇಷ  ವರದಿ: ಮಹದೇವಪುರ ಶಿವಮೂರ್ತಿ.

ಪರಶುರಾಂಪುರ :ಡಿಸೆಂಬರ್ ಕಳಿಯಿತೆಂದರೇ ಸಾಕು ನೂತನ ವರ್ಷದ ಮೊದಲ ಹಬ್ಬವೆಂದರೇ ಮಕರ ಸಂಕ್ರಾಂತಿಯ ಸಡಗರದ ಮಾತುಗಳೇ ಬಹುತೇಕವಾಗಿ ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿನ ಮಾತೆಯರಿಂದ ಬೆಳಗ್ಗೆ ರಂಗೋಲಿ ಜತೆಗೆ ಬಣ್ಣ ತುಂಬುವ ಮಾತುಕೆತೆ.
ಆಧುನಿಕ ಶೈಲಿಗೆ ಬದಲಾದ ಹಬ್ಬ ಈಗ ರೈತರು ಬೆಳೆದು ಹಂಚಿ ಆಚರಣೆ ಇಲ್ಲದಾಗಿ ಈಗ ಎಲ್ಲವನ್ನು ಕೊಂಡು ಆಚರಿಸುವ ಹಬ್ಬವಾಗಿದೆ ಕಾರಣ ಇಳೆಗೆ ಮುತ್ತಿಕ್ಕದ ಮಳೆ ಹನಿಗಳು ಇಲ್ಲದಾಗಿ ಜನಪದರ ಹಬ್ಬಗಳ ಜತೆ ಗ್ರಾಮೀಣ ಸೊಗಡನ್ನ ತಂತ್ರಜ್ಞಾನದಲ್ಲಿನ ಎಡಿಟಿಂಗ್ ದೃಶ್ಯಗಳಾಗಿವೆ.ಮನೆ ಒಡತಿ ಕೈ ಚಳಕದ ರಂಗೋಲಿ ಜಾಗದಲ್ಲಿ ರೆಡಿಮೇಡ್ ರಂಗೋಲಿ ಹೆಜ್ಜೆಯಿಟ್ಟು ಮಾರುಕಟ್ಟೆಯಲ್ಲಿ ಬಣ್ಣಗಳ ಕಾರುಬಾರು ಜೋರಾಗಿದೆ.

ಇದನ್ನೂ ಓದಿ: ರಾಜ್ಯ ಎಲ್ಲಾ ಜಿಲ್ಲೆಗಳಿಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ,ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು ಸಂಪೂರ್ಣ ಮಾಹಿತಿ

ಸಂಕ್ರಾಂತಿ , ಯುಗಾದಿ , ಕೃಷ್ಣ ಜನ್ಮಾಷ್ಠಾಮಿ ಹಾಗೂ ದಿನನಿತ್ಯ ಬಳಕೆಗೆ ಯಾರಾದರೂ ಬೋರ್‌ವೆಲ್ ಹಾಕಿಸಿದರೆ ಸಾಕು ಅಲ್ಲಿಗೆ ಗ್ರಾಮೀಣ ಮಹಿಳೆಯರು ಅಲ್ಲಿನ ಮಣ್ಣನ್ನ ತಂದು ಒಣಗಿಸಿ ಜರಡಿಯಲ್ಲಿ ಸೊಸಿ ಇಟ್ಟುಕೊಳ್ಳುವ ಕಾಲ ಹೋಗಿ ಎಲ್ಲವು ಮಾರುಕಟ್ಟೆಯಲ್ಲಿ ಲಭ್ಯವಾಗಿ ಇವುಗಳ ಬಳಕೆಯಿಂದ ಹಬ್ಬವೂ ಬದಲಾವಣೆ ಕಂಡರೂ ರಂಗೋಲೆ ಮಾತ್ರ ಜೀವಂತ.

ಬಣ್ಣಗಳ ಮಾಯಾ ಲೋಕ.

ಮಾರುಕಟ್ಟೆ ಮತ್ತು ಗ್ರಾಮ ಅಂಗಡಿಗಳಲ್ಲೂ ಪ್ಯಾಕೇಟ್‌ನಲ್ಲಿ ಇಲ್ಲವೇ ವಿವಿದ ಬಣ್ಣಗಳ ಪುಡಿಯನ್ನ ರಾಶಿ ಹಾಗು ರಂಗೋಲಿಯ ಡಿಸೈನ್ ಪೇಪರ್ ಕಟಿಂಗ್ ಜೊತೆಗೆ ಮಾದರಿ ಸಿಕ್ಕರೆ ಸದ್ಯ ಪ್ರತಿಯೊಬ್ಬರ ಅಂಗೈಗೆ ಲಗ್ಗೆ ಇಟ್ಟ ಮೋಬೈಲ್ ಮೊರೆಯಿಂದ ನೆಚ್ಚಿನ ಹೆಣ್ಣು ಮಕ್ಕಳಿಗೆ ರಂಗು ರಂಗಿನ ರಂಗೋಲೆಯನ್ನಾ ಹುಡುಕಿ ಹಬ್ಬಕ್ಕೆ ಕಾದಿರಿಸಿ ಬಿಡಿಸಿ ಬಣ್ಣು ತುಂಬುಲು ಸಿದ್ದರಾಗಿದ್ದಾರೆ .

ಗೋಮಾಯದ ಅಂಗಳ ಕಣ್ಮರೆ.

ನುಸುಕಿನ ವೇಳೆಯಲ್ಲಿ ಮಹಿಳೆಯರು ಎದ್ದು ಮನೆಯ ಅಂಗಳವನ್ನಾ ಗೋಮಾಯದಿಂದ ಸಾರಿಸಿ ತೇವ ಇರುವಾಗಲೆ ತಮಗಿಷ್ಟವಾದ ರಂಗೋಲೆಯನ್ನಾ ಹಾಕುತಿದ್ದೆವು ಈಗ ಆಧುನಿಕತೆಯ ಸಿಮೇಂಟ್ ಲೇಪನದಂಗಳದಿಂದ ನೀರಾಕಿ ಗುಡಿಸುವುದರಿಂದ ಬೆರಳೆಣಿಕೆಯಾಗಿವೆ . ಅದಕ್ಕೆ ಅಂತ ಜನಪದರು ಇನ್ನಿಲ್ಲವಾಗಿ ಈಗಲೂ ನೋಡಬೇಕೆಂದರೆ ಸದ್ಯ ಗ್ರಾಮೀಣರು ಸಿಗದೇ ಇಲ್ಲವಂತಾಗುವ ದಿನಗಳು ಹತ್ತಿರದಲ್ಲಿವೆ ಎಂದು ಗೃಹಿಣಿ ಪುಟ್ಟಮ್ಮ ಹೇಳುವರು .
ಮಾರುಕಟ್ಟೆಯಲ್ಲಿ ತಂದು ಆಚರಿಸುವ ಹಬ್ಬ ಸಂಕ್ರಾಂತಿ.
ರೈತರು ಈ ದಿನಕ್ಕೆ ತಮ್ಮ ಹೊಲಗಳ ಕೆಲಸವನ್ನಾ ಆದಾಷ್ಟು ಮುಗಿಸಿ,ತಾವು ಬೆಳೆದ ಅವರೆ,ಹಲಸಂದೆ,ಕಬ್ಬು,ಕುAಬಳ ಕಾಯಿ,ಸಜ್ಜೆ,ಗೆಣಸು,ಎಳ್ಳು ಬೆಲ್ಲಾ ಇತರೆ ಆಹಾರ ಧಾನ್ಯ ಪದಾರ್ಥಗಳನ್ನಾ ಹಂಚಿಕೆ ಮಾಡಿಕೊಂಡು ಸಂಭ್ರಮದಿಂದ ಆಚರಣೆ ಮಾಡುವ ಖುಷಿಯೇ ಇದರ ವಿಶೇಷವಾದರೇ ಆಧುನಿಕತೆಯ ಭರಾಟೆಯಲ್ಲಿ ಬರಗಾಲ ಪೀಡಿತ ಪ್ರದೇಶವಾಗಿ ಇಲ್ಲಿ ಎಲ್ಲವೂ ಮಾರುಕಟ್ಟೆಯಲ್ಲಿ ತಂದು ಹಂಚಿ ಆಚರಿಸುವ ಹಬ್ಬವಾಗಿದೆ. ಜನಪದರ ಸೊಗಡಿನ ದೃಶ್ಯಗಳಿಗೆ ಅಂತರ್ಜಾಲ ಮೊರೆಹೋಗುವ ಭಾಗ್ಯ ಕೈಗೆಟುಕುತ್ತಿದೆ ಎಂದು ಗ್ರಾಮೀಣ ಜನತೆ ಮಾತನಾಡಿಕೋಳ್ಳುವಂತಾಗಿದೆ.

ಸಜ್ಜೆ ರೊಟ್ಟಿ,ಕುಂಬಳಕಾಯಿ ಪಾಯಸ ಕಣ್ಮರೆ.

ಕುಂಬಳ ಕಾಯಿ ಪಾಯಸ ತಿನ್ನುವ ದಿನ ಬಂದೇ ಬಿಟ್ಟಿತು. ಬೇಲಿ , ಚಪ್ಪರದ ಮೇಲೆ ಬಿಡುತಿದ್ದಾ ಕುಂಬಳ ಈಗ ವಾಣಿಜ್ಯ ಬೆಳೆಯಾಗಿ ಮಾರುಕಟ್ಟೆಯಲ್ಲಿ ಕೋಳ್ಳುವ ದಿನಗಳೀಗ ಮತ್ತೇ ಅಜ್ಜಿ ಮೆಣಸಿನ ಬೀಜ ಹಾಕಿ ಸುಟ್ಟ ಸಜ್ಜೆ ರೊಟ್ಟಿ ನೆನೆದರೆ ಎಂತರ ಬಾಯಲ್ಲಿ ನೀರು ಬರದೆ ಇರಲು ಸಾಧ್ಯವಿಲ್ಲ ಹಿಗೇಲ್ಲಾ ಸುಗ್ಗಿಯ ಸುದಿನಗಳು ಈಗ ಕೆಲವನ್ನ ಸಮೂಹ ಮಾಧ್ಯಮಗಳಲ್ಲಿ ಕಾಣಬಹುದಾಗಿದೆ .

ಇದನ್ನೂ ಓದಿ: ಚಿತ್ರದುರ್ಗ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎ.ಮುರುಳಿ ಪುನರಾಯ್ಕೆ

[t4b-ticker]

You May Also Like

More From Author

+ There are no comments

Add yours