ಅಪರೇಷನ್ ದಳಕ್ಕೆ ಅಪರೇಷನ್ ಹಸ್ತ ಮಾಡಿ ಟಾಂಗ್, ಬಿಜೆಪಿ ಸೈಲೆಂಟ್ ಹೇಗಿದೆ ಚಳ್ಳಕೆರೆ ಕಣ.

 

ವಿಶೇಷ ವರದಿ:ದರ್ಶನ್ ಇಂಗಳದಾಳ್  
ಚಳ್ಳಕೆರೆ: ಚುನಾವಣೆ ಘೋಷಣೆಯಾಗಿದ್ದು  ಚುನಾವಣಾ ಕಣ ದಿನಕ್ಕೊಂದು ಚಿತ್ರಣ ಪಡೆದುಕೊಳ್ಳುತ್ತಿದೆ.ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದ್ದು ಈ ಬಾರಿ  ಹಾಲಿ ಶಾಸಕ  ಅಭ್ಯರ್ಥಿ ಟಿ.ರಘುಮೂರ್ತಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಜೆಡಿಎಸ್ ಪಕ್ಷದಿಂದ ಕಳೆದ ಬಾರಿ ಸ್ವರ್ಧಿಸಿ ಪರಭಾವಗೊಂಡಿದ್ದ  ರವೀಶ್ ಕುಮಾರ್ ಅಭ್ಯರ್ಥಿ ಆಗಿದ್ದಾರೆ. ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು  ಮಾಜಿ ಸಚಿವ ತಿಪ್ಪೇಸ್ವಾಮಿ ಪುತ್ರ ಕೆ.ಟಿ.ಕುಮಾರಸ್ವಾಮಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.  ಬಿಜೆಪಿ ಪಕ್ಷದಲ್ಲಿ ಅನಿಲ್ ಕುಮಾರ್ , ಎನ್‌. ರಘುಮೂರ್ತಿ, ಜಯರಾಂ, ರಾಮದಾಸ್  ಸೇರಿ  ಅರ್ಧ ಡಜನ್ ಅಭ್ಯರ್ಥಿಗಳಲ್ಲಿ  ಅಭ್ಯರ್ಥಿ ಯಾರು ಎಂಬುದು ಇನ್ನೂ ಬಹಿರಂಗಗೊಳ್ಳದಿರುವುದು ಬಿಜೆಪಿ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.

ಎಣ್ಣೆ ನಗರಿ ಚಳ್ಳಕೆರೆ ಮಾತ್ರ ಎಲ್ಲಾ ಕ್ಷೇತ್ರಗಳಿಗಿಂತ ವಿಶೇಷ ಮತ್ತು ವಿಭಿನ್ನ ಕ್ಷೇತ್ರವಾಗಿದೆ. ಜನರು ಅಭಿವೃದ್ಧಿ ಪರ ಮತ ಚಲಾಯಿಸುತ್ತಾರಾ ಅಥವಾ ಜಾತಿ ರಾಜಕಾರಣ ನಡೆಯುತ್ತಿಯೇ ಎಂಬುದು ಇನ್ನು ಗೊಂದಲದಲ್ಲಿದೆ.

ಸದ್ಯ ಕ್ಷೇತ್ರದಲ್ಲಿ  ಕಾಂಗ್ರೆಸ್ ಹಾಲಿ ಶಾಸಕ ಟಿ.ರಘುಮೂರ್ತಿ ಮತ್ತು ಜೆಡಿಎಸ್ ಅಭ್ಯರ್ಥಿ ರವೀಶ್ , ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆ ಆಗದಿದ್ದರು ಸಹ  ಅನಿಲ್ ಕುಮಾರ್ ಈಗಾಗಲೇ ಕ್ಷೇತ್ರ ಪ್ರಚಾರ ಆರಂಭಿಸಿದ್ದಾರೆ.

ಶಾಸಕ ಟಿ.ರಘುಮೂರ್ತಿ ಅವರ ಈಗಾಗಲೇ ಭಾರತ್ ಜೋಡೋ , ಪ್ರಜಾಧ್ವನಿ ಯಾತ್ರೆಯ ಮೂಲಕ ಬಲ ಹೆಚ್ಚಿಸಿಕೊಂಡಿದ್ದು ಕಾರ್ಯಕರ್ತರಲ್ಲಿ ಉತ್ಸಾಹ ಹಿಮ್ಮಡಿಗೊಳಿಸಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎರಡ್ಮೂರು ಸುತ್ತಿನ ಪ್ರಚಾರ ನಡೆಸಿದ್ದು ಒಂದಿಷ್ಟು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳುವ ಕೆಲಸ ಮಾಡಿದ್ದಾರೆ.ಇದರ ಜೊತೆಗೆ  ಇದೇ ಮೊದಲ ಬಾರಿಗೆ ಪ್ರತಿ ಹಳ್ಳಿಯಲ್ಲಿ ಪ್ರತಿ ಗುಂಪುಗಳ ಜೊತೆ ಚರ್ಚೆ ನಡೆಸಿ ಕೆಲವು ಸಮಸ್ಯೆಗೆ ಸ್ಥಳದಲೇ ಪರಿಹಾರ ಇನ್ನು ಕೇಲವು ಪಟ್ಟಿ ಮಾಡಿಕೊಂಡು ವಿಶ್ವಾಸ ಗಳಿಸುತ್ತ ಪ್ರಚಾರದಲ್ಲಿ ತೊಡಗಿದ್ದು ಪ್ರತಿ ಹಳ್ಳಿಯಲ್ಲಿ ಶಾಸಕರ ಬೆಂಬಲಿಗರು ಇರುವುದ ಇವರಿಗೆ ಪ್ಲಸ್ ಪಾಯಿಂಟ್ ಮತ್ತು ಕಳೆದ ಬಾರಿ ಎಲ್ಲಿ ಲೀಡ್ ಕಡಿಮೆ ಆಗಿತ್ತೋ ಅಲ್ಲಿ ಹೆಚ್ಚಿನ ಗಮನ ಹರಿಸುವ ವಿಶೇಷವಾಗಿ ಪರಶುರಾಂಪುರ ಹೋಬಳಿಯಲ್ಲಿ ವೇದಾವತಿ ನೀರು ಹರಿಸಿದ ಕಾರಣಕ್ಕೆ  ಈ ಬಾರಿ ರಘುಮೂರ್ತಿ ಪರ ಪಕ್ಷಾತೀತವಾಗಿ ಅಭಯ ನೀಡುತ್ತಿರುವುದು ಬಲ ಹೆಚ್ಚಿಸಿದೆ.

ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಸಹ ಪ್ರತಿ ಹಳ್ಳಿಯಲ್ಲಿ ತನ್ನದೇ ಆದ ಪಡೆ ಕಟ್ಟಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಕುಮಾರಸ್ವಾಮಿ ಸರ್ಕಾರದ ಸಾಧನೆ ಪಂಚರತ್ನ ಯಾತ್ರೆ ಮೂಲಕ ಕ್ಯಾಂಪೇನ್ ಮಾಡುತ್ತಿದ್ದಾರೆ. led ವ್ಯಾನ್ ಸಹ ಪ್ರಚಾರದಲ್ಲಿ ತೊಡಗಿದೆ. ರವೀಶ್ ತುರುವನೂರು ಹೋಬಳಿಯಲ್ಲಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಆದರೆ ನಿರೀಕ್ಷೆಯಷ್ಟು ಫಲ ನೀಡುತ್ತಿಲ್ಲ.‌ಪರಶುರಾಂಪುರ ಭಾಗದ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಒಲವಿದೆ.ಆದರೆ ಶತಯಗಾತಯ ಈ ಬಾರಿ ಕಾಂಗ್ರೆಸ್ ಅರ್ಧಮತಗಳನ್ನು ಪಡೆಯಲು ಎಲ್ಲಾ ತಂತ್ರ ನಡೆಸಿದೆ. ಕುಮಾರಸ್ವಾಮಿ ಅವರು ಏ 9 ರಂದು ಬರುತ್ತಿದ್ದು ಬದಲಾವಣೆ ಗಾಳಿ ಬೀಸಲಿದೆ ಎಂಬ ನಿರೀಕ್ಷೆಯಲ್ಲಿ ರವೀಶ್ ಇದ್ದಾರೆ. ಇವರಿಗೆ ಸ್ಥಳೀಯ ಮುಖಂಡರ ಕೊರತೆ ಇವರ ಮೈನಸ್ ಪಾಯಿಂಟ್ ಆದರೆ ಕಳೆದ ಬಾರಿಯ ಸೋಲಿನ ಅನುಕಂಪ ಕೈ ಹಿಡಿಯುತ್ತದೆ ಎಂಬುದು ಕಾದು ನೋಡಬೇಕು.

ಬಿಜೆಪಿ ಪಕ್ಷದಲ್ಲಿ ಟಿಕೆಟ್ ಫೈನಲ್ ಆಗಿಲ್ಲ ಆದರು ಸಹ  ಅನಿಲ್ ಕುಮಾರ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಕೇಲವು ಗ್ರಾಮ ಪಂಚಾಯತಿಗಳನ್ನು ಗ್ರಾಮ ಪಂಚಾಯತಿ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಸಂಘಟನೆ ಮಾಡುತ್ತಿದ್ದು ಇವರ ಜೊತೆಗೆ ನಿವೃತ್ತ ತಹಶಿಲ್ದಾರ ಎನ್‌.ರಘುಮೂರ್ತಿ ಸಹ ಕ್ಷೇತ್ರದಲ್ಲಿ ನನಗೆ ಟಿಕೆಟ್ ಎಂದು ಹೇಳುತ್ತಿದ್ದಾರೆ. ಟಿಕೆಟ್ ಕೊಡುವಷ್ಟರಲ್ಲಿ ಕಾರ್ಯಕರ್ತರು ಯಾವ ಪಕ್ಷದ ಜೊತೆ ಹೋಗುತ್ತಾರೆ ಎಂಬುದು ಇಲ್ಲಿ ದೊಡ್ಡ ಸಮಸ್ಯೆ ಆಗಿದೆ.

ಅಪರೇಷನ್ ಜೆಡಿಎಸ್ ಗೆ ರೀ ಅಪರೇಷನ್ ಹಸ್ತ ಮಾಡಿದ ಶಾಸಕ ಟಿ.ರಘುಮೂರ್ತಿ.

ತುರುವನೂರು ಭಾಗದಲ್ಲಿ ಶಾಸಕ ಟಿ.ರಘುಮೂರ್ತಿ ಅವರಿಗೆ ಟಕ್ಕರ್ ಕೊಡಲು ಜೆಡಿಎಸ್ ಅಭ್ಯರ್ಥಿ ರವೀಶ್ ಕಾಂಗ್ರೆಸ್ ಪಕ್ಷದಿಂದ ಹಲವು ಜನರನ್ನು ಜೆಡಿಎಸ್ ಸೇರ್ಪಡೆಯನ್ನು ನಿರಂತವಾಗಿ ಜನವರಿ ಮತ್ತು ಫ್ರೆಬ್ರವರಿ ತಿಂಗಳಲ್ಲಿ ಮಾಡಿಕೊಂಡಿದ್ದನ್ನು ಗಮನಿಸಿದ್ದ ಶಾಸಕ ಟಿ.ರಘುಮೂರ್ತಿ ನೇರವಾಗಿ ಫೀಲ್ಡ್ ಗಿಳಿದು ಈ ಬಾರಿ ಬೆಂಬಲಿಸಿ ತಪ್ಪುಗಳನ್ನು ಸರಿಪಡಿಸಿಕೊಂಡು ಜೊತೆಯಾಗಿ ಹೋಗೋಣ ಎಂಬ ಅಭಯದಿಂದ ಇಡೀ ತುರುವನೂರು ಹೋಬಳಿಯಲ್ಲಿ ಜೆಡಿಎಸ್ ಬಿಜೆಪಿ ಸೇರ್ಪಡೆ ಆದವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಮೂಲಕ ವಿರೋಧಿಗಳಿಗೆ  ಟಾಂಗ್ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗೆಗಳ ನಡುವೆ ಮುಂದಿನ ದಿ‌ನದಲ್ಲಿ ಯಾವ ರೀತಿ ರಾಜಕೀಯ  ಬದಲಾವಣೆಗಳು ನಡೆಯಲಿದೆ ಎಂಬುದು ಪೂರ್ಣ ಚಿತ್ರಣ ತಿಳಿಯಲು ಬಿಜೆಪಿ ಅಭ್ಯರ್ಥಿ ಘೋಷಣೆ ಆದರೆ ಎಲ್ಲಾ ಲೆಕ್ಕಚಾರಗಳು ಪಕ್ಕಾ ಆಗಲಿದೆ.

[t4b-ticker]

You May Also Like

More From Author

+ There are no comments

Add yours