ಮದಕರಿ ಉತ್ಸವಕ್ಕೆ ಭರ್ಜರಿ ಸಿದ್ದತೆ

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ( chithradurga)  ನಗರದ ಹೃದಯ ಭಾಗದಲ್ಲಿರುವ ಮದಕರಿನಾಯಕ ( madakarinayaka)ಪುತ್ಥಳಿಗೆ ಲೈಟಿಂಗ್ ಟ್ರೆಸ್ , ಪುಷ್ಪ ಅಲಂಕಾರದ ಕುರಿತು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಅಲಂಕಾರದ ಪರಿಶೀಲನೆ ನಡೆಸಿದರು.

ರಾಜವೀರ ಮದಕರಿನಾಯಕ ಪುತ್ಥಳಿ ಬಳಿಯಲ್ಲಿ ಸಿನಿಮಾ ಶೈಲಿಯಲ್ಲಿ ಡ್ರೆಟ್ ಸೆಟಪ್ ನ್ನು ಕುರಿಸಲಾಗಿದೆ. ಮದಕರಿನಾಯಕ ಸುತ್ತ ೨೦ ಅಡಿಯ ಎತ್ತರದ ಲೈಟ್ ಪೋಲ್ ಗಳು ಶೂಟಿಂಗ್ ಲೈಟ್ ರೀತಿ ಕಲರ್ ಫುಲ್ ಲೈಟ್ ಗಳು ಹಾಕಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಿAದ ಹೂವಗಳನ್ನು ತರಿಸಿದ್ದ ವಿಶೇಷ ಅಲಂಕಾರಕ್ಕಾಗಿ ಬೆಂಗಳೂರಿನಿAದ ತಂಡ ಆಗಮಿಸಿದ್ದು ಅಂತಿಮ ಹಂತದ ಸಿದ್ದತೆ ಮಾಡಲಾಗುತ್ತಿದೆ. ಸರ್ಕಲ್ ಸುತ್ತಲೂ ಪಿಂಕ್ ಬಣ್ಣದ ಬಟ್ಟೆಯಲ್ಲಿ ಅಲಂಕಾಮಾಡಲಾಗುತ್ತದೆ. .

ನಗರದ ಚಳ್ಳಕೆರೆ ಗೇಟ್ ನಿಂದ ಕನಕ ವೃತ್ತದವರೆಗೆ ಮದಕರಿನಾಯಕರ ರಾಜ ಆಳ್ವಿಕೆಯ ರಾಜ ಲಾಂಛನದ ಬಾವುಟಗಳು ಕಟ್ಟಲಾಗಿದೆ. ಸಂಗೊಳ್ಳಿ ರಾಯಣ್ಣ, ಓನಕೆ ಒಬವ್ವ, ಕನಕದಾಸರ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ನಗರದ ಮುಖ್ಯ ರಸ್ತೆಯಲ್ಲಿ ಪೂರ್ತಿ ಲೈಟ್ ಅಲಂಕಾರ ಮಾಡಲಾಗಿದೆ.ನೂತನ ವಾಲ್ಮೀಕಿ ಭವನಕ್ಕೆ ಲೈಟ್ ಸರಗಳು ಹಾಕಲಾಗಿದೆ. ಗಾಂಧಿ ಸರ್ಕಲ್ ಸುತ್ತಲೂ ಮದಕರಿನಾಯಕರ ಭಾವಚಿತ್ರದಲ್ಲಿ ಸರ್ಕಲ್ ನಿರ್ಮಿಸಲಾಗಿದೆ. ನಗರದಲ್ಲಿ ಮದಕರಿ ಜಯಂತಿಯ ಬ್ಯಾನರ್ ಗಳು ರಾರಜಿಸುತ್ತಿವೆ.

ಇದನ್ನೂ ಓದಿ:ಎರಡು ನಿಗಮಗಳಿಂದ ಸಾಲ ಸೌಲಭ್ಯಕ್ಕೆ ಅರ್ಜಿ

ಈ ಸಂದರ್ಭದಲ್ಲಿ ಬಿ.ಕಾಂತರಾಜ್ ಮಾತನಾಡಿ ನಾಳೆ ಬೆಳಗ್ಗೆ ಉಚ್ಚೆಂಗಿಯಲ್ಲಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮದಕರಿನಾಯಕ ಭರಮಸಾಗರದ ಹತ್ತಿರ ಇರುವ ನೀರ್ತಡಿ ರಂಗನಾಥ್ ಸ್ವಾಮಿ ಮದಕರಿನಾಯಕರ ಮನೆ ದೇವರು ಅಲ್ಲಿ ಸಹ ಪೂಜೆ ಸಲ್ಲಿಸಲಾಗುತ್ತದೆ. ಸುಮಾರು ೧೧ ರಿಂದ ೧೨ ಗಂಟೆಗೆ ಮದಕರಿನಾಯಕರಿಗೆ ಮಾಲರ್ಪಣೆ ಮಾಡಲಾಗುತ್ತದೆ. ಎರಡು ಡಿಜೆಯನ್ನೂ ಪುಣೆಯಿಂದ ತರಿಸಲಾಗಿದೆ. ಅದ್ಭುತವಾಗಿ ಬರುತ್ತಿದ್ದು ಜಿಲ್ಲೆ ಮತ್ತು ರಾಜ್ಯದಿಂದ ಎಲ್ಲಾ ಸಮಾಜದ ಬಂಧುಗಳು ಆಗಮಿಸಲು ಅದ್ದೂರಿ ಮೆರವಣಿಗೆಗೆ ನೀವು ಸಾಕ್ಷಿಯಾಗಿ ಎಂದು ಮನವಿ ಮಾಡಿತ್ತೇನೆ.

ಬಾಕ್ಸ್
ಮದಕರಿ ಉತ್ಸವ ನಿಮ್ಮ ಕಾರ್ಯಕ್ರಮ, ಮಾಧ್ಯಮದ ಮೂಲಕ ನಿಮ್ಮೆಗೆಲ್ಲರಿಗೂ ಮನವಿ ಮಾಡುತ್ತಿದ್ದು ಎಲ್ಲಾರೂ ಸಹ ಇದನ್ನು ನನ್ನ ಅಮಂತ್ರಣ ಎಂದು ತಿಳಿದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಾತ್ಯಾತೀತವಾಗಿ ಎಲ್ಲಾ ನನ್ನ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಿ.

ಬಿ.ಕಾಂತರಾಜ್
ಅಧ್ಯಕ್ಷರು
ತಾಲೂಕು ನಾಯಕ ಸಮಾಜ

[t4b-ticker]

You May Also Like

More From Author

+ There are no comments

Add yours