ಶೇಂಗಾ ಬಿತ್ತನೆ ಬೀಜದ ಸಬ್ಸಿಡಿ ಹೆಚ್ಚಿಸಿ ದರ ಕಡಿಮೆ ಮಾಡಿ ರೈತರಿಗೆ ಸರ್ಕಾರ ನೆರವಾಗಬೇಕು:ಶಾಸಕ ಟಿ.ರಘುಮೂರ್ತಿ ಮನವಿ

 

ಚಿತ್ರದುರ್ಗ:ಶೇಂಗಾ ಬಿತ್ತನೆ ಬೀಜವನ್ನು  ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ಕೃಷಿ ಇಲಾಖೆ   ನಿಗದಿ ಮಾಡಿದ್ದು  ರೈತರು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿ ಮಾಡುತ್ತಿದ್ದು  ಶೇಂಗಾ ಬಿತ್ತನೆ ಬೀಜದಲ್ಲಿ ಸರ್ಕಾರದಿಂದ ಮರು ಪರಿಶೀಲನೆ ನಡೆಸಿ  ಕೃಷಿ ಇಲಾಖೆಯಿಂದ  ಸಬ್ಸಿಡಿ ನೀಡುವ ಮೂಲಕ ರೈತರ ನೆರವಿಗೆ ಸರ್ಕಾರ ದಾವಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ವಿಧಾನಸಭೆ ಕಲಾಪದ ವೇಳೆ ಕೃಷಿ ಸಚಿವರಾದ ಚಲುವರಾಯಸ್ವಾಮಿ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.
ಬಜೆಟ್ ಅಧಿವೇಶನ ಮೇಲೆ ನಡೆಯುತ್ತಿರುವ ಚರ್ಚೆ ವೇಳೆ ಗಮನ ಸೆಳೆಯವ ಪ್ರಶ್ನೋತ್ತರ ವೇಳೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಸೇರಿ ಮೊಳಕಾಲ್ಮುರು, ಹಿರಿಯೂರು, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ತಾಲೂಕುಗಳು ಅಲ್ಲದೇ ತುಮಕೂರು ಜಿಲ್ಲೆ ರೈತರಿಗೆ ಸಹ ಸಬ್ಸಿಡಿ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ‌.
ರೈತರು ಕಷ್ಟದಲ್ಲಿದ್ದು ಶೇಂಗಾ  ಬಿತ್ತನೆಗೆ  ಸರ್ಕಾರ ಸಬ್ಸಿಡಿ ನೀಡಬೇಕು. ಕೃಷಿ ಸಚಿವರ ಮಾಹಿತಿಯಂತೆ ಮೂರು ವಿಧದ ಬಿತ್ತನೆ ಬೀಜಗಳಾದ  ಟಿಎಂವಿ-2, ಕದಿರಿ ಲೇಪಾನಿಲ್ಲಬೇಕು. 6 ಆದರೆ ನಮ್ಮ ಭಾಗದಲ್ಲಿ  ಟಿಎಂವಿ-2 ಶೇಂಗಾ  ಬೀಜವನ್ನು  ಹೆಚ್ಚಿದಾಗಿ ಉಪಯೊ ಬಿತ್ತನೆ ಮಾಡುತ್ತಾರೆ. ಸರ್ಕಾರ  ಒಂಬತ್ತು ಸಾವಿರ  ಬೆಲೆ ನಿಗದಿ ಮಾಡಿ ಜನರಲ್ ಅವರಿಗೆ  1400 ಸಬ್ಸಿಡಿ ನೀಡಿ 7600 ರೂ  ಮತ್ತು  ಎಸ್ಸಿ ಎಸ್ಟಿ ಅವರಿಗೆ 2100 ಸಬ್ಸಿಡಿ ನೀಡಿ 6900 ಕ್ಕೆ ಬಿತ್ತನೆ ಬೀಜ ನೀಡಲಾಗುತ್ತದೆ‌. ನಮ್ಮ  ಕ್ಷೇತ್ರದ ಹೆಚ್ಚು ಶೇಂಗಾ ಬೆಳೆಗಾರರಿದ್ದು ಗ್ರಾಮೀಣ ಭಾಗದಲ್ಲಿ 5900 ರೂಗೆ ಬಿತ್ತನೆ ಬೀಜ ನೀಡುವ ಮೂಲಕ  ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲಿ ಬಿತ್ತನೆ ಬೀಜ‌ ಮಾರಟ ಮಾಡುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
2019 -20 ಸಾಲಿನ ಬಜೆಟ್ ನಲ್ಲಿ  ಮೊಳಕಾಲ್ಮುರು, ಚಳ್ಳಕೆರೆ, ಶಿರಾ, ಮಧುಗಿರಿ, ಪಾವಗಡ ಕ್ಷೇತ್ರಕ್ಕೆ 50 ಕೋಟಿ ಹಣವನ್ನು  ವಿಶೇಷವಾಗಿ ಈ ಐದು ತಾಲೂಕಿನ  ಶೇಂಗಾ ಬೆಳೆ ಪ್ರೋತ್ಸಾಹ ನೀಡಲು  ರೈತರಿಗೆ ನೆರವು ಆಗಬೇಕು ಹಣ ಮೀಸಲಿಡಲಾಗಿತ್ತು. ಆದ್ದರಿಂದ ನಮ್ಮ ಭಾಗದಲ್ಲಿ ಹೆಚ್ಚು ಟಿಎಂವಿ-2 ಶೇಂಗಾ ಬಿತ್ತನೆ ಮಾಡುತ್ತಾರೆ. ಕದರಿ ಲೇಪಾಕ್ಷಿ ಬೀಜ ನೀರಾವರಿಗೆ ಹೆಚ್ಚು ಬಳಕೆಯಾಗುತ್ತದೆ. ಪ್ರತಿ ಬಾರಿ ಸಹ ಶೇಂಗಾ ಬೆಲೆ ನಿಗದಿಯಾದ ನಂತರ ಸಾಕಷ್ಟು ಬಾರಿ ಸಬ್ಸಿಡಿ ರೂಪದಲ್ಲಿ ಅಥವಾ ಖರೀದಿಯಲ್ಲಿ ರೈತರಿಗೆ ನೆರವು ನೀಡಿ  ಬೆಲೆಯನ್ನು  ಕಡಿಮೆ  ಮಾಡಿದ್ದು ಈ ಬಾರಿ ಸಬ್ಸಿಡಿ ನೀಡಿ ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲಬೇಕು.ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈತರು ಸಭೆ ನಡೆಸಿ ಬೆಲೆ ಕಡಿಮೆ ಮಾಡುವಂತೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದ್ದು ಬೆಲೆ ನಿಗದಿ ಪರಿಶೀಲಿಸಿ  ಎಂದು ಸಚಿವರಿಗೆ ಮನವಿ ಮಾಡಿದರು‌.
ಕೃಷಿ ಸಚಿವರಾದ ಚಲುವರಾಯಸ್ವಾಮಿ ಮಾತನಾಡಿ ಶಾಸಕರಾದ ಟಿ‌.ರಘುಮೂರ್ತಿ ಅವರು ಹೇಳಿರುವುದು ಉತ್ತಮ ಸಲಹೆಯಾಗಿದೆ.ಈಗಾಗಲೇ ಅರ್ಧದಷ್ಟು ಬೀಜ ಮಾರಟವಾಗಿದೆ. ಬೆಲೆ ನಿಗದಿಗೆ ಒಂದು ಸಮಿತಿ ಇದ್ದು ಎಲ್ಲಾವನ್ನು ಅಧ್ಯಯನ ಮಾಡಿ ಮಾಡಿರುತ್ತಾರೆ‌. ಈಗ ಬೆಲೆ ಕಡಿಮೆ ಮಾಡುವುದು ಸೂಕ್ತವಲ್ಲ ಎಂದಾಗ ಶಾಸಕ ಟಿ.ರಘುಮೂರ್ತಿ ಮಧ್ಯ ಪ್ರವೇಶಿಸಿ ಕಳೆದ 11 ವರ್ಷಗಳಿಂದ ಶಾಸಕನಾಗಿದ್ದು  ಎಲ್ಲಾ ಸರ್ಕಾರಗಳಲ್ಲಿ ಸರ್ಕಾರ ಬೆಲೆ ನಿಗದಿ ಮಾಡಿ ನಂತರ ಪರಿಶೀಲಿಸಿ ಸಬ್ಸಿಡಿ ಹೆಚ್ಚಿಸಿ ನೆರವಾಗಿದ್ದು ದಯಮಾಡಿ ಪರಿಶೀಲಿಸಿ ಅನುಕೂಲ ಮಾಡಿಕೊಡಬೇಕು ಎಂದಾಗ ಸಚಿವರ ಪರಿಶೀಲಿಸುತ್ತೇನೆ ಎಂದು ಉತ್ತರ ನೀಡಿದರು.
ಬಾಕ್ಸ್
ನಮ್ಮ ಜಿಲ್ಲೆಯ ರೈತರಿಗೆ ಶೇಂಗಾ ಬಿತ್ತನೆ ಬೀಜದ ಬೆಲೆಯಲ್ಲಿ ಸಬ್ಸಿಡಿ ಹೆಚ್ಚಿಸಲು ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ. ಸಚಿವರು ಸಹ ಪರಿಶೀಲಿಸುತ್ತೇನೆ‌ ಎಂದಿದ್ದು ಬೆಲೆ ಕಡಿಮೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ.
ಟಿ.ರಘುಮೂರ್ತಿ.
ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
[t4b-ticker]

You May Also Like

More From Author

+ There are no comments

Add yours