SC ST ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಕಾಮಗಾರಿ ಮೊತ್ತ ಹೆಚ್ಚಳ

 

ಬೆಂಗಳೂರು: ಇಂದು ಸಚಿವ ಹೆಚ್ ಕೆ ಪಾಟೀಲ್ ಅವರು 2023ನೇ ಸಾಲಿನ ಸಾರ್ವಜನಿಕ ಸಂಗ್ರಹಣೆ, ಪಾರದರ್ಶಕತೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಬಗ್ಗೆ ವಿಪಕ್ಷ, ಆಡಳಿತ ಪಕ್ಷಗಳ ಸದಸ್ಯರ ಚರ್ಚೆಯ ಬಳಿಕ, ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದೆ.

ಹೀಗಾಗಿ ಇನ್ಮುಂದೆ ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುವಂತ ನಿರ್ಮಾಣ ಕಾಮಗಾರಿಯ ಮೊತ್ತವನ್ನು 50 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡಿ, ಗುಡ್ ನ್ಯೂಸ್ ನೀಡಲಾಗಿದೆ.

ಸದನದಲ್ಲಿ ಮಂಡಿಸಿ ಮಾತನಾಡಿದಂತ ಅವರು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮಗಳನ್ನು ( KTTP Act 2023 ) ಮತ್ತಷ್ಟು ಹೆಚ್ಚಿಸಬೇಕು. ಅದನ್ನು ಪರಿಣಾಮಕಾರಿಯಾಗಿ ಮಾಡಬೇಕು ಎನ್ನುವ ಉದ್ದೇಶದಿಂದ 2016ರಲ್ಲಿ ನಾವು ಇದರ ಬಗ್ಗೆ ತಿದ್ದುಪಡಿ ಮಾಡಿದ ಮೇಲೆ, 2018ರಲ್ಲಿ ಘೋಷಣೆ ಮಾಡಿದ ಮೇಲೆ, ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ಹಣ ಹೆಚ್ಚಳಕ್ಕೆ ಚಿಂತನೆ ಮಾಡಿದ್ದರು ಎಂದರು.

ಎಸ್ಸಿ, ಎಸ್ಟಿ ವ್ಯಕ್ತಿಗಳು ಕೈಗೊಳ್ಳುವಂತ ನಿರ್ಮಾಣ ಕಾಮಗಾರಿಯ ಮೊತ್ತವನ್ನು 50 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡುವುದಕ್ಕಾಗಿ ಈ ತಿದ್ದುಪಡಿ ವಿಧೇಯಕವನ್ನು ತರಲಾಗುತ್ತಿದೆ. ಇದು ಇವತ್ತಿನ ಧಾರಣಿ, ಎಸ್ ಆರ್ ರೇಟ್, ಕಾಂಟ್ರ್ಯಾಕ್ಟ್ ವ್ಯಾಲ್ಯೂ ಗಮನದಲ್ಲಿ ಇಟ್ಟುಕೊಂಡು ಎಸ್ಸಿ, ಎಸ್ಟಿಗಳಿಗೆ 50 ಲಕ್ಷಕ್ಕೆ ಬದಲಾಗಿ 1 ಕೋಟಿ ರೂಪಾಯಿ ಎಂಬ ಪದಗಳನ್ನು ಬದಲಾವಮಣೆ ಮಾಡಲಾಗುತ್ತಿದೆ ಎಂದರು.

[t4b-ticker]

You May Also Like

More From Author

+ There are no comments

Add yours