ಸಿರಿಧಾನ್ಯಗಳ ಉತ್ಪಾದನೆಗೆ ಸರ್ಕಾರವು ಹೆಚ್ಚಿನ ಪ್ರೋತ್ಸಾಹ: ಜಿಲ್ಲಾಧಿಕಾರಿ ದಿವ್ಯ ಪ್ರಭು

 

ಚಿತ್ರದುರ್ಗ:(chitrdaurga )ಸಿರಿಧಾನ್ಯಗಳ ಉತ್ಪಾದನೆಗೆ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಜನಸಾಮಾನ್ಯರಲ್ಲಿ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜಿ. ತಿಳಿಸಿದರು.

ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಸೌರಸಿರಿ ಸೌರಶಕ್ತಿ ಚಾಲಿತ ಸಿರಿಧಾನ್ಯ ಸಂಸ್ಕರಣಾ ತಂತ್ರಜ್ಞಾನಗಳು ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯಗಳ ಸೇವನೆಯಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳಬಹುದು. ಆದರೆ ಬಹಳಷ್ಟು ಮಂದಿಗೆ ಸಿರಿಧಾನ್ಯಗಳ ಮಹತ್ವ ಗೊತ್ತಿಲ್ಲ. ರೈತರು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವಂತಾಗಬೇಕು. ಅದಕ್ಕೆ ಸರ್ಕಾರದಿಂದ ಸಾಕಷ್ಟು ಉತ್ತೇಜನವಿದೆ ಎಂದು ಹೇಳಿದರು.
ನಬಾರ್ಡ್‍ನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಕವಿತಾ ಶಶಿಧರ್ ಮಾತನಾಡಿ ಸಿರಿಧಾನ್ಯಗಳಿಂದ ಆಹಾರ ಸಿದ್ದಪಡಿಸಿ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಮುಟ್ಟಿಸಬೇಕು. ಆರೋಗ್ಯಪೂರ್ಣ ಸಿರಿಧಾನ್ಯಗಳನ್ನು ರೈತರು ಬೆಳೆಸಿದರೆ ಸಂಸ್ಕøಣ ಘಟಕಗಳು ಬರುತ್ತಿವೆ. ಇದರಿಂದ ರೈತರು ಮಧ್ಯವರ್ತಿಗಳಿಗೆ ನೀಡುವ ಹಣ ಸೌರಶಕ್ತಿ ಚಾಲಿತ ಸಿರಿಧಾನ್ಯ ಸಂಸ್ಕರಣಾ ಘಟಕಗಳಿಗೆ ಸಿಗಲಿ. ಫಿಜಾ, ಬರ್ಗರ್, ರೆಡಿಫುಡ್‍ಗಳಿಗೆ ಇಂದಿನ ಪೀಳಿಗೆ ಮಾರು ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಸಿರಿಧಾನ್ಯಗಳ ಮಹತ್ವ ಎಲ್ಲರಿಗೂ ತಿಳಿಸಬೇಕಿದೆ. ನಮ್ಮ ಜಿಲ್ಲೆಗೆ ಬರುವ ಪ್ರವಾಸಿಗರಿಗೆ, ರೈಲು ನಿಲ್ದಾಣಗಳಲ್ಲಿ ಸಿರಿಧಾನ್ಯಗಳಿಂದ ತಯಾರಾದ ಆಹಾರ ಸಿಗುವಂತಾಗಬೇಕು ಎಂದರು.

 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ. ಮಾತನಾಡುತ್ತ ಕಳೆದ ಇಪ್ಪತ್ತು ವರ್ಷಗಳಿಂದಲೂ ಸೌರಸಿರಿ ಸೌರಶಕ್ತಿ ಚಾಲಿತ ಸಿರಿಧಾನ್ಯ ಸಂಸ್ಕರಣಾ ತಂತ್ರಜ್ಞಾನಗಳೊಂದಿಗೆ ಅನ್ಯೋನ್ಯತೆಯಿಟ್ಟುಕೊಂಡಿದ್ದೇವೆ. ತಂತ್ರಜ್ಞಾನಗಳಲ್ಲಿ ಬರುತ್ತಿರುವ ಯಂತ್ರೋಪಕರಣಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಸೌರಶಕ್ತಿ ಬಳಕೆ ಮಾಡಿಕೊಂಡು ದೈನಂದಿನ ಜೀವನದಲ್ಲಿ ಬೇರೆ ಬೇರೆ ಉದ್ಯೋಗಗಳನ್ನು ಪರಿಚಯಿಸಬೇಕಿದೆ. ಭೂಮಿ ಸೃಷ್ಠಿಯಾದಾಗಲೆ ಸೌರಶಕ್ತಿಯಿತ್ತು. ಪ್ರತಿ ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಮುನ್ನೂರು ಕುಟುಂಬಗಳಿಗೆ ಸೌರಶಕ್ತಿಯಿಂದ ಬೆಳಕು ನೀಡುತ್ತಿದ್ದೇವೆಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳ ಮಹಿಳೆಯರು ಪಡೆಯುವ ಸಾಲ ಮರುಪಾವತಿ ಮಾಡುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 75 ರೊಟ್ಟಿ ಯಂತ್ರಗಳನ್ನು ನೀಡಲಾಗಿದೆ. ಮೂವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಜಿಲ್ಲೆಯಲ್ಲಿ ಸ್ವಉದ್ಯೋಗ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲ್ಕೋ ಸೋಲಾರ್ ಯಂತ್ರೋಪಕರಣಗಳು ಸರಳವಾಗಿವೆ. ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಐದು ಪಟ್ಟು ಹೆಚ್ಚು ವಿಟಮಿನ್ ಖನಿಜ, ನಾರಿನಂಶವಿರುತ್ತದೆ. ಬರಗಾಲದ ಮಿತ್ರ ಎಂತಲೂ ಸಿರಿಧಾನ್ಯವನ್ನು ಕರೆಯಲಾಗುವುದು. ಸಿರಿಧಾನ್ಯಗಳನ್ನು ರೈತರಿಂದ ಖರೀಧಿಸಲು ನಮ್ಮ ಸಂಸ್ಥೆ ಸಿದ್ದವಿದ್ದು, ಗೋಬಿ, ಪಿಜ್ಜಾ, ಬರ್ಗರ್‍ಗಳನ್ನು ಮೀರಿಸುವಂತ ಶಕ್ತಿ ಸಿರಿಧಾನ್ಯಕ್ಕಿದೆ. ಆದರೆ ಸಿರಿಧಾನ್ಯಗಳನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸಬೇಕು ಸಿರಿಧಾನ್ಯಗಳಲ್ಲಿ ವಿವಿಧ ರೀತಿಯ ಆಹಾರಗಳನ್ನು ತಯಾರಿಸುವುದನ್ನು ಮಹಿಳೆಯರು ಕಲಿಯಬೇಕು ಎಂದು ಹೇಳಿದರು.

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‍ನ ಉಪ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಹೆಗಡೆ ಮಾತನಾಡಿ ಸಿರಿಧಾನ್ಯ, ಸ್ಥಳೀಯ, ಪ್ರಾದೇಶಿಕ, ದೇಶದ ಬೆಳೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಿರಿಧಾನ್ಯ ಹೆಸರು ಪಡೆದಿದೆ. ನಮ್ಮದೆ ಬೆಳೆ ಸಿರಿಧಾನ್ಯದ ಬಗ್ಗೆ ನಮಗೆ ಗೊತ್ತಿಲ್ಲದಿರುವುದು ನೋವಿನ ಸಂಗತಿ. ಫಾಸ್ಟ್ ಫುಡ್ ಸಂಸ್ಕøತಿ ನಮ್ಮದಾಗಿರುವುದರಿಂದ ಸಿರಿಧಾನ್ಯಗಳ ಹೋಟೆಲ್‍ಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿರಿಧಾನ್ಯವಿಲ್ಲದೆ ಆರೋಗ್ಯವನ್ನು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ. ಮನುಷ್ಯನ ಆರೋಗ್ಯಕ್ಕೆ ಸಂಚಕಾರ ಬಂದಿದೆ. ರೈತರಿಗೆ ಸಿರಿಧಾನ್ಯ ಅನುಕೂಲ ಮಾಡಿಕೊಡುತ್ತಿದೆ. ಆರೋಗ್ಯ ಹಾಳು ಮಾಡುವ ಜಾಗದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಊಟ ಸಿಗುವಂತಾಗಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡುವ ಸಾಮಥ್ರ್ಯ ಸಿರಿಧಾನ್ಯಕ್ಕಿದೆ. ಸೌರಶಕ್ತಿಯಿಂದ ಡಿಜಿಟಲ್ ಎಜುಕೇಷನ್, ಸ್ಮಾರ್ಟ್‍ಕ್ಲಾಸ್, ಆರೋಗ್ಯ ಶಿಕ್ಷಣ ಕೊಡಬಹುದು. ಉದ್ಯೋಗದ ಅವಕಾಶಗಳು ಸಾಕಷ್ಟಿವೆ. ನಲವತ್ತುಕ್ಕೂ ಹೆಚ್ಚು ಉತ್ಪನ್ನಗಳನ್ನು ಸೌರಶಕ್ತಿಯಿಂದ ಬಿಡುಗಡೆ ಮಾಡಿದ್ದೇವೆಂದು ತಿಳಿಸಿದರು.

ಸೆಲ್ಕೋ ಫೌಂಡೇಷನ್ ಮುಖ್ಯ ಹಣಕಾಸು ಅಧಿಕಾರಿ ವಿ.ಕೆ.ಜೋಬಿ ವೇದಿಕೆಯಲ್ಲಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours