ಕಾಂತಾರ ಎಫೆಕ್ಟ್:ಭೂತಾರಾಧನೆಯ ದೈವ ನರ್ತಕರಿಗೆ 2 ಸಾವಿರ ಮಾಸಿಕ ಭತ್ಯೆ ಘೋಷಿಸಿದ ಸರ್ಕಾರ

 

ಬೆಂಗಳೂರು ಅಕ್ಟೋಬರ್ 20: ರಾಜ್ಯದಲ್ಲಿ  ಐತಿಹಾಸಿಕ ಸಿನಿಮಾವಾಗಿ ಮುನ್ನುಗುತ್ತಿರುವ  ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ತೆರೆ ಕಂಡ ಬಳಿಕ ಕರಾವಳಿಯ ಭೂತಾರಾಧನೆಯ ಖ್ಯಾತಿ ಭಾರತದಾದ್ಯಂತ ಪಸರಿಸಿದೆ. ಜೊತೆಗೆ ದೈವ ನರ್ತಕರ ಮೇಲಿನ ಗೌರವ ಕೂಡ ಇಮ್ಮಡಿಯಾಗಿದೆ. ಇದೀಗ ರಾಜ್ಯ  ಸರ್ಕಾರ ಕೂಡ ದೈವ ನರ್ತಕರಿಗೆ ಸಿಹಿ ಸುದ್ದಿ ನೀಡಿದೆ.

60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ರಾಜ್ಯ ಕರ್ನಾಟಕ ಸರ್ಕಾರ ಘೋಷಿಸಿದೆ. ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು. ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ” ಎಂದು ಸುನೀಲ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours