ಹೆಣ್ಣು ಮಕ್ಕಳಿಂದ ಎಲ್ಲಾ ರಂಗದಲ್ಲಿ ಉತ್ತಮ‌ ಸಾಧನೆ: ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಹೆಣ್ಣು ಮಕ್ಕಳು ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿ  ಸಮಾಜದಲ್ಲಿ  ಸಾಕಷ್ಟು ಬದಲಾವಣೆ ಮಾಡಿ ಮಾದರಿಯಾಗಿದ್ದಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ  ಪೂರ್ವ  ಕಾಲೇಜಿನಲ್ಲಿ  ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ  ಬಾಲಕಿಯರ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು ನಾನಾ ಹುದ್ದೆಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರು ಕಲೆ , ಸಾಂಸ್ಕೃತಿಕ,  ಕ್ರೀಡೆ ಸೇರಿ ಎಲ್ಲಾ ಕ್ಷೇತ್ರದ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಅನೇಕ ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಕೇಲವು ಉದ್ಯೋಗ ಮತ್ತು ಮನೆ ಕೆಲಸಕ್ಕೆ ಮಾತ್ರ  ಸಿಮೀತವಾಗಿದ್ದರು. ಆದರೆ ಅಧುನಿಕ ಯುಗದಲ್ಲಿ ಎಲ್ಲಾ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.  ಶಾಲಾ ಕಾಲೇಜು ಜೀವನದಲ್ಲಿ ಅಧ್ಯಯಮ ಚನ್ನಾಗಿ ಮಾಡಿದರೆ ಮಹಿಳೆಯರಿಗೆ ಸಾಕಷ್ಟು ಅವಕಾಶ ಇವೆ ಎಂದರು.
ನಮ್ಮ ಜಿಲ್ಲೆಯಲ್ಲಿ  ನಗರದ  ಸರ್ಕಾರಿ  ಬಾಲಕಿಯರ ಪದವಿ ಪೂರ್ವ   ಕಾಲೇಜಿನಲ್ಲಿ ಮಾತ್ರ  ಗಣಕ ಯಂತ್ರ ವಿಭಾಗ ಇದ್ದು 230 ವಿದ್ಯಾರ್ಥಿನಿಯರು  ದಾಖಲಾಗಿದ್ದಾರೆ. ಕೊಠಡಿಗಳ ಹಳೆಯದಾದ ಕಾರಣ ಹಂತ ಹಂತವಾಗಿ ಹೊಸ ಕೊಠಡಿಯನ್ನು ವಿವಿಧ ಯೋಜನೆಯಲ್ಲಿ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ. ಕೆಎಂಆರ್ಸಿ ಮೂಲಕ ನೂತನವಾಗಿ 20 ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣ ಮಾಡಲು ಅನುದಾನ  ಮಂಜೂರಾಗಿದೆ. ವಿವೇಕ ಯೋಜನೆಯಡಿ 4 ಕೊಠಡಿ ನಿರ್ಮಾಣ ಮಾಡಲು ಹಣ ನೀಡಿದ್ದು ಒಟ್ಟು 24  ನೂತನ  ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಶಾಸಕರ ಅನುದಾನದಲ್ಲಿ ಶೌಚಾಲಯ  ನಿರ್ಮಾಣ ಮಾಡಲಾಗಿದೆ ಎಂದರು.
ರೋಟರಿ ಕ್ಲಬ್ ವತಿಯಿಂದ  ನೂರು ಡೆಸ್ಕ್  ದಾನವಾಗಿ ನೀಡಿರುವುದು ತುಂಬಾ ಉತ್ತಮ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.
ದಯಮಾಡಿ ಕೈ ಮುಗಿದು ಹೇಳುತ್ತೇನೆ  ಪೋಷಕರನ್ನು ಚನ್ನಾಗಿ ನೋಡಿಕೊಳ್ಳಿ. ಅವರ ಮುಪ್ಪಿನ ವಯಸ್ಸಿನಲ್ಲಿ ಅವರನ್ನು ಬೀದಿಗೆ ತಳ್ಳಬೇಡಿ. ತಮ್ಮ  ಬೆಳವಣಿಗೆಗೆ ಪೋಷಕರು ಉಪವಾಸ ವನವಾಸ ಮಾಡಿ ನಿಮಗೆ ಶಿಕ್ಷಣ ಸೇರಿ ಎಲ್ಲಾವನ್ನು ನೀಡಿದ್ದಾರೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಗಾಯಿತ್ರಿ ಶಿವರಾಮ್, ಪಿಜಿಡಿ ಆರ್ಐಡಿ ಮಧು ಪ್ರಸಾದ್,  ಪ್ರಾಚಾರ್ಯರಾದ ಹೆಚ್.ನಾಗರಾಜ್, ಪರಶುರಾಂಪುರ ಪ್ರಾಂಶುಪಾಲ ಬ್ಯಾಲಹಾಳ್ ನಾಗರಾಜ್, ಜಿಲ್ಲಾ  ಉಪನ್ಯಾಸಕ ಸಂಘದ ಅಧ್ಯಕ್ಷ ಮಲ್ಲೇಶಪ್ಪ ,  ಉಪನ್ಯಾಸಕರಾದ ಹೆಚ್.ಶ್ರೀನಿವಾಸ್ ,  ಬುಡೇನ್ ಸಾಬ್ , ಚಂದ್ರಿಕಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours