ಶ್ರೇಷ್ಠ ಪುಸ್ತಕ ಪ್ರಶಸ್ತಿ ಪ್ರಕಟ

 

ಚಿತ್ರದುರ್ಗ,ಸೆಪ್ಟೆಂಬರ್.14:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿಯು 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಆಕಾಡೆಮಿಗೆ ಸಲ್ಲಿಕೆಯಾದ ಪುಸ್ತಕಗಳನ್ನು ತಜ್ಞರಿಂದ ಮೌಲ್ಯಮಾಪನ ಮಾಡಿಸಿ 2018-2019 ನೇ ಸಾಲಿನ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.
 ಪ್ರಶಸ್ತಿ ವಿಜೇತ ಲೇಖಕರು ಮತ್ತು ಪುಸ್ತಕಗಳ ವಿವರಗಳು ಇಂತಿದೆ: ವಿಜ್ಞಾನ ಕೇತ್ರದಲ್ಲಿ ಲೇಖಕ ಡಾ.ಟಿ.ಎಸ್.ಚನ್ನೇಶ್ ಅವರು ಬರೆದಿರುವ ಅನುರಣನ ವಿಜ್ಞಾನ ಪ್ರಬಂಧಗಳು ಪುಸ್ತಕ, ತಂತ್ರಜ್ಞಾನ ಕ್ಷೇತ್ರದಲ್ಲಿ ಲೇಖಕ ಡಾ.ಉದಯ್ ಶಂಕರ ಪುರಾಣಿಕ ಅವರು ಬರೆದಿರುವ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್-ಹೊಸ ತಂತ್ರಜ್ಞಾನ ಹೊಸ ಅವಕಾಶಗಳು ಹಾಗೂ ಲೇಖಕ ಪ್ರೊ.ಮಹದೇವಯ್ಯ ಅವರು ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ ಪುಸ್ತಕ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಲೇಖಕಿ ಸಿ.ತ್ರಿವೇಣಿ ಅವರು ರಚಿಸಿರುವ ಮಣ್ಣು ಉಸಿರಾಡುವ ಜೀವವಸ್ತು ಪುಸ್ತಕ, ವೈದ್ಯಕೀಯ ಕ್ಷೇತ್ರದಲ್ಲಿ ಲೇಖಕ ಡಾ.ರಣಜಿತ ಬೀರಣ್ಣ ನಾಯಕ ಬರೆದಿರುವ ವೈದ್ಯ ವಿಜ್ಞಾನ ಪುಸ್ತಕ ಮತ್ತು ಡಾ.ಮುರಲೀಮೋಹನ್ ಚೂಂತಾರು ಬರೆದಿರುವ ಸಂಜೀವಿನಿ ಭಾಗ2-ಆರೋಗ್ಯ ಮಾರ್ಗದರ್ಶಿ ಪುಸ್ತಕಕ್ಕೆ ಶ್ರೇಷ್ಠ ಪುಸ್ತಕ ಪ್ರಶಸ್ತಿ ಲಭಿಸಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರ

[t4b-ticker]

You May Also Like

More From Author

+ There are no comments

Add yours