ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಕಾಡುಗೊಲ್ಲ ಸರ್ಟಿಫಿಕೇಟ್ ನೀಡಿ: ಟಿ.ರಘುಮೂರ್ತಿ

 

ನಿರಂತರ ಹೋರಾಟದ ಫಲವಾಗಿ  ಕಾಡುಗೊಲ್ಲ ಸಮುದಾಯಕ್ಕೆ ಜಾತಿಪ್ರಮಾಣ ನೀಡಲು ಸರ್ಕಾರ ತಿರ್ಮಾನ

ಕಾಡುಗೊಲ್ಲ  ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ ಶಾಸಕ ಟಿ.ರಘುಮೂರ್ತಿ ಮತ್ತು ಎನ್.ವೈ.ಗೋಪಾಲಕೃಷ್ಣ

ಚಳ್ಳಕೆರೆ: ಕಳೆದ ಕೆಲವು ತಿಂಗಳುಗಳ ಹೋರಾಟದ ನಂತರ ಸರ್ಕಾರ ಕಾಡುಗೊಲ್ಲ  ( kadugolla)  ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಸ್ವಷ್ಟನಿರ್ಧಾರ ಕೈಗೊಂಡಿದ್ದು, ಅರ್ಜಿ ಸಲ್ಲಿಸಿದವರಿಗೆ ಪರಿಶೀಲನೆ ನಡೆಸಿ ಕಾಡುಗೊಲ್ಲಜಾತಿಪ್ರಮಾಣ ಪತ್ರ ನೀಡಲು ಸರ್ಕಾರ ಸೂಚನೆ ನೀಡಿದ್ದು, ತಾಲ್ಲೂಕಿನ ಸಮಸ್ತ ಕಾಡುಗೊಲ್ಲ ಸಮುದಾಯ ಅಗತ್ಯದಾಖಲಾತಿ ಒದಗಿಸಿ ಪ್ರಮಾಣಪತ್ರ ಪಡೆಯುವಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಅವರು, ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಟಿ.ರಘುಮೂರ್ತಿಯವರೊಂದಿಗೆ ಕಾಡುಗೊಲ್ಲ ಜಾತಿಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರದ ನಿರ್ಧಾರವನ್ನು ಸಮುದಾಯದ ಮುಖಂಡರಿಗೆ ತಿಳಿಸಿ  ತಾಲ್ಲೂಕು ಆಡಳಿತವೂ ಸಹ ತ್ವರಿತಗತಿಯಲ್ಲಿ ಪರಿಶೀಲನೆ ನಡೆಸಿ ದಾಖಲಾತಿ ನೀಡಲು ನಿರ್ದೇಶನ ನೀಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ  ಕಾಡುಗೊಲ್ಲ ಜನಾಂಗದ ನಿರಂತರ ಹೋರಾಟ ಸಹ ತ್ವರಿತಗತಿಯಲ್ಲಿ ಜಾತಿಪ್ರಮಾಣ ಪತ್ರ ಪಡೆಯಲು ಸಹಾಯಕವಾಗಿವೆ. ನಾನು ಮತ್ತು ಶಾಸಕರಾದ ಗೋಪಾಲಕೃಷ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಗೊಲ್ಲ ಸಮುದಾಯದವಿದ್ದು ಸೌಲಭ್ಯ ಪಡೆಯಲು ಪ್ರಮಾಣ ಪತ್ರ ಅವಶ್ಯಕತೆ ಇದೆ. ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಕೂಡಲೇ ಕ್ರೋಢೀಕರಿಸಿ ಪ್ರಮಾಣ ಪತ್ರ ನೀಡಿ. ವಿಳಂಬ ಮಾಡಿದರೆ ಮತ್ತೆ ಸಮಸ್ಯೆ ಉದ್ಭವವಾಗಲಿದ್ದು, ಸರ್ಕಾರದ ಸೂಚನೆಯಂತೆ ಅವರುಗಳಿಗೆ ಜಾತಿಪ್ರಮಾಣ ಪತ್ರ ನೀಡಬೇಕು ಎಂದರು. ಕಾಡುಗೊಲ್ಲ ಸಮುದಾಯ ತಮ್ಮ ದಾಖಲಾತಿಗಳಲ್ಲಿ ಕಾಡುಗೊಲ್ಲರು ಎಂದು ನಮೂದಿಸಬೇಕಾದರೆ ನಿಮ್ಮಲ್ಲಿಗೆ ಸಮೀಕ್ಷೆಗೆ ಬಂದಾಗಲೂ ಕಾಡುಗೊಲ್ಲರು ಎಂದು ಬರೆಸುವಂತೆ ಶಾಸಕ ರಘುಮೂರ್ತಿ ಸಲಹೆ ನೀಡಿದರು..
ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಜಾತಿಪ್ರಮಾಣಪತ್ರ ನೀಡುವಕುರಿತು ಶಾಸಕದ್ವಯರು ಇಂದು ಸಭೆ ನಡೆಸಿ ಪ್ರಾಯೋಗಿಕವಾಗಿ ೯ ಜನರಿಗೆ ಕಾಡುಗೊಲ್ಲ ಜಾತಿಪ್ರಮಾಣ ಪತ್ರ ವಿತರಿಸಿದ್ದು, ಇದು ಕಾಡುಗೊಲ್ಲ ಸಮುದಾಯಕ್ಕೆ ಹೆಚ್ಚು ಸಂತಸ ತಂದಿದೆ. ಜನಾಂಗದ ಪರವಾಗಿ ಇಬ್ಬರೂ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರಲ್ಲದೆ, ಕರ್ನಾಟಕದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಜನಾಂಗ ಹೆಚ್ಚಾಗಿದೆ. ೪೫ ತಾಲ್ಲೂಕುಗಳಲ್ಲಿ ಸುಮಾರು ೧೦ಲಕ್ಷಕ್ಕೂ ಹೆಚ್ಚು ಕಾಡುಗೊಲ್ಲ ಜನರು ರಾಜ್ಯದಲ್ಲಿ ಇದ್ಧಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕಾಡುಗೊಲ್ಲ ಸಂಘ ಅಧಿಕವಾಗಿದ್ದು ತಾಲ್ಲೂಕು ಆಡಳಿತ ವಿಳಂ¨ಮಾಡದೆ ಅರ್ಜಿ ಪಡೆಯಲು ಜಾತಿಪ್ರಮಾಣ ಪತ್ರ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ಧಾರ್ ರೇಹಾನ್ ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಲರಾಜು, ರವಿಕುಮಾರ್, ಮುಖಂಡರಾದ ಬಿ.ವಿ.ಸಿರಿಯಣ್ಣ, ಮಂಜುನಾಥ, ಮೂಡಲಗಿರಿಯಪ್ಪ, ಶ್ರೀಕಂಠಪ್ಪ, ಶ್ರೀಕಾಂತ್, ಶಶಿಧರ, ಅಜ್ಜಣ್ಣ, ರಂಗಸ್ವಾಮಿ, ಭಾನುವೀರೇಶ್, ಆಂಜಿನಪ್ಪ, ಎಂ.ಜೆ.ರಾಘವೇಂದ್ರ, ಎನ್.ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್ 
ಕಾಡುಗೊಲ್ಲ ಸಮುದಾಯಕ್ಕೆ ಪ್ರಮಾಣ ಪತ್ರ ನೀಡಲು ಸರ್ಕಾರ ನಿರ್ಧಾರ ಮಾಡಿರುವುದು ಆ ಸಮಾಜಕ್ಕೆ ಹೆಚ್ಚು ಅನುಕೂಲವಾಗಲಿದೆ.ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಡುಗೊಲ್ಲ ಸಮುದಾಯವಿದ್ದು ಸೌಲಭ್ಯ ಪಡೆಯಲು ಪ್ರಮಾಣ ಪತ್ರ ನೆರವಾಗಲಿದೆ. 
ಟಿ.ರಘುಮೂರ್ತಿ 
ಶಾಸಕರು ಚಳ್ಳಕೆರೆ 
[t4b-ticker]

You May Also Like

More From Author

+ There are no comments

Add yours