ಬ್ರಿಟೀಷರ ಮನ ಪರಿವರ್ತಿಸಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಪುರುಷ ಗಾಂಧೀಜಿ:ಶಾಸಕ ಟಿ.ರಘುಮೂರ್ತಿ

 

.

ಚಳ್ಳಕೆರೆ-೦೨ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಚಿಂತನೆಗಳು ಮತ್ತು ಆದರ್ಶಗಳು ರಾಷ್ಟçವನ್ನು ಅಭಿವೃದ್ದಿಪಥದತ್ತ ಕೊಂಡೊಯಲು ಸಾಧ್ಯವಾಯಿತು. ವಿಶ್ವದಲ್ಲಿ ಪ್ರಬಲವಾದ ಪ್ರಜಾಸತಾತ್ಮಕ ರಾಷ್ಟçವಾದ ಭಾರತದಲ್ಲಿ ಗಾಂಧೀಜಿಯವರ ಹೋರಾಟಗಳು ಸರ್ವಕಾಲಕ್ಕೂ ಚಿರಸ್ತಾಯಿಯಾಗಿ ಉಳಿಯಲಿವೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ೧೫೪ನೇ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçಯವರ ಹುಟ್ಟುಹಬ್ಬ ಆಚರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವಾರು ವರ್ಷಗಳ ಬ್ರಿಟೀಷ್‌ಶಾಹಿ ಆಡಳಿತ ನಮ್ಮನ್ನು ನಿರಂತರ ಶೋಷಣೆಗೆ ಗುರಿಮಾಡುತ್ತಿದ್ದು, ಬ್ರಿಟೀಷರ ಆಡಳಿತದಿಂದ ಭಾರತೀಯರು ಪ್ರತಿಹಂತದಲ್ಲೂ ತಲೆತಗ್ಗಿಸುವಂತಾಗಿತ್ತು. ಬ್ರಿಟೀಷರನ್ನು ಕಂಡರೆ ಎಲ್ಲರೂ ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು, ಇಂತಹ ಸಂದರ್ಭದಲ್ಲಿ ಕೇವಲ ಅಹಿಂಸಾ ಮಾರ್ಗದ ಮೂಲಕ ಬ್ರಿಟೀಷರ ಮನಪರಿವರ್ತಿಸಿ ನಮಗೆ ಸ್ವಾತಂತ್ರ್ಯವನ್ನು  ತಂದುಕೊಟ್ಟ ಮಹಾನ್ ಪುರುಷ ಮಹಾತ್ಮಗಾಂಧೀಜಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ಧಾರ್ ರೇಹಾನ್ ಪಾಷ, ರಾಜ್ಯ ಸರ್ಕಾರ ಆಚರಿಸುವ ಹಲವಾರು ಮೌಲ್ಯಯುತ ಕಾರ್ಯಕ್ರಮಗಳಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಎಲ್ಲರನ್ನೂ ವಿಶೇಷವಾಗಿ ಆಕರ್ಷಿಸುತ್ತದೆ. ಗಾಂಧೀಜಿಯವರು ನಡೆದುಕೊಂಡ ರೀತಿ, ನೀತಿ ಅವರು ಸಮಾಜದ ಉದ್ದಾರಕ್ಕಾಗಿ ಹಾಕಿಕೊಟ್ಟ ಸನ್ಮಾರ್ಗ ನಮಗೆ ಎಂದಿಗೂ ಸ್ಪೂರ್ತಿ ಎಂದರು.

ಡಿವೈಎಸ್ಪಿ ರಾಜಣ್ಣ, ಪಶುವೈದ್ಯಾಧಿಕಾರಿ ರೇವಣ್ಣ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಕೃಷಿ ಅಧಿಕಾರಿ ಅಶೋಕ್ ಬಿಇಒ ಸುರೇಶ್, ಬಿಸಿಎಂ ಅಧಿಕಾರಿ ದಿವಾಕರ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಪೌರಾಯುಕ್ತ ಸಿ.ಚಂದ್ರಪ್ಪ, ನಿವೃತ್ತ ಪ್ರಾಧ್ಯಾಪಕ ನಾಗರಾಜು, ನಗರಸಭಾ ಸದಸ್ಯೆ ಸುಜಾತಪಾಲಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours