ಗಾಂಧಿ ಮತ್ತು ಶಾಸ್ತ್ರೀಜಿ ದೇಶ ಕಂಡ ಎರಡು ರತ್ನಗಳು:ಓ.ಪ್ರತಾಪ್ ಜೋಗಿ

 

ಚಿತ್ರದುರ್ಗ, ಅ.೦೨
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಈ ದೇಶ ಕಂಡ ಎರಡು ಅನರ್ಘ್ಯ ರತ್ನಗಳು ಎಂದು ಅಲೆಮಾರಿ ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್ ಜೋಗಿ ಸ್ಮರಿಸಿದರು.

ನಗರದ ಹೊರ ವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೧೫೪ನೇ ಮಹಾತ್ಮ ಗಾಂಧಿ ಹಾಗೂ ೧೧೯ನೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ:ವಾಲ್ಮೀಕಿ ಶ್ರೀ ಮತ್ತು ಆ ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿಸೋಣ: ಸತೀಶ್ ಜಾರಕಿಹೊಳಿ ಏಕೆ ಹೀಗೆ ಹೇಳಿದರು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ಮಾಡಿ ಸೆರೆವಾಸ ಅನುಭವಿಸಿದ್ದರು. ಇಂತಹ ಸಂದರ್ಭದಲ್ಲಿ ಕಾರಗೃಹದಲ್ಲಿದ್ದ ಅನೇಕ ಸೆರೆವಾಸಿಗಳ ಮನ ಪರಿವರ್ತನೆ ಮಾಡಿದರು. ಆಗ ಅಲ್ಲಿನ ಸೆರೆವಾಸಿಗಳು ನಾವು ಸಹ ನಿಮ್ಮ ಹೋರಾಟಕ್ಕೆ ಬರುತ್ತೇವೆ ಎಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾದರು. ಇದರಿಂದ ಭಾರತದ ಸ್ವಾತಂತ್ರ್ಯ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡು ಬ್ರಿಟೀಷರು ಭಾರತ ಬಿಟ್ಟು ತೊಲಗುವಂತಾಯಿತು ಎಂದರು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನೀವೇ ಸಾಧಕರನ್ನು ಆಯ್ಕೆ ಮಾಡುವ ಅವಕಾಶ

ಇಂದು ಕೇವಲ ಮಹಾತ್ಮ ಗಾಂಧಿ ಜಯಂತಿ ಮಾತ್ರವಲ್ಲ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯೂ ಆಗಿದೆ. ಭಾರತದ ಎರಡನೆಯ ಪ್ರಧಾನಮಂತ್ರಿಯಾಗಿದ್ದ ಅವರು ಉತ್ತಮ ಆಡಳಿತ ನೀಡಿದರು. ಇದರಿಂದ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ. ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಪರಿವರ್ತನಾ ಕೇಂದ್ರ ನನ್ನ ಅಭಿಪ್ರಾಯ ತಾವುಗಳು ಕಾರಣಾಂತರದಿಂದ ಪರಿಸ್ಥಿತಿಯ ಕೈಗೊಂಬೆಗಳಾಗಿ ತಪ್ಪು ಮಾಡಿರಬಹುದು. ತಪ್ಪು ಮಾಡದವರು ಸಹ ಇಲ್ಲಿದ್ದಾರೆ ಅದನ್ನು ತಿದ್ದಿಕೊಂಡು ಇಲ್ಲಿಂದ ಹೊರಗೆ ಹೋದ ಮೇಲೆ ಹೊಸ ಮನುಷ್ಯರಾಗಿ ಬಾಳಿ. ಈ ನಿಟ್ಟಿನಲ್ಲಿ ಬಂಧಿಖಾನೆ ಸಿಬ್ಬಂದಿ ಇಲ್ಲಿನ ನಿವಾಸಿಗಳೋ ಮನ ಪರಿವರ್ತನೆ ಮಾಡಬೇಕು. ಇಲ್ಲಿನ ಅಧೀಕ್ಷಕರು, ಸಿಬ್ಬಂದಿ ವರ್ಗದವರು ಇಲ್ಲಿನ ನಿವಾಸಿಗಳನ್ನು ಕುಟುಂಬದ ಸದಸ್ಯರಂತೆ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಾರೆ.

ಇದನ್ನೂ ಓದು:ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಆದೇಶ ಬದಲಾವಣೆ

ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಮಹದೇವಿ ಎಂ. ಮಾರುಕಟ್ಟೆ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ಎಂದೆಂದಿಗೂ ಸ್ಮರಣೀಯ. ಇಲ್ಲಿನ ನಿವಾಸಿಗಳು ಉತ್ತಮ ಗುಣ ನಡತೆಯನ್ನು ರೂಢಿಸಿಕೊಂಡು ಸಮಾಜದ ಮುಖ್ಯವಾಹಿನೀ ಗೇ ಬರಬೇಕು. ಆ ಮೂಲಕ ಉತ್ತಮ ಜೀವನ ನಡೆಸಬೇಕೆಂದು ತಿಳಿಸಿದರು.

ಇಂಗಳದಾಳದ ಗ್ರಾ.ಪಂ. ಅಧ್ಯಕ್ಷ ಸಿರುವಲ್ಲಪ್ಪ ಮಾತನಾಡಿ, ಬಂಧಿಖಾನೆ ಶ್ರೀಕೃಷ್ಣನಂತಹ ಶ್ರೇಷ್ಠ ವ್ಯಕ್ತಿ ಹುಟ್ಟಿದ ಸ್ಥಳ. ಅನೇಕ ಮಹಾನ್ ವ್ಯಕ್ತಿಗಳು ಸೆರೆವಾಸ ಅನುಭವಿಸಿದ್ದಾರೆ. ಇಂತಹ ಸ್ಥಳದಲ್ಲಿರುವ ನಿವಾಸಿಗಳು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು. ಆ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕೆಂದು ಸಲಹೆ ಮಾಡಿದರು.

ಇದನ್ನೂ ಓದಿ: ಪ್ರೀತಿಸಿ ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಗ್ರಾಮದಿಂದ ಬಹಿಷ್ಕಾರ
ತಾ.ಪಂ. ಮಾಜಿ ಸದಸ್ಯ ಎಚ್.ಲಿಂಗಬಸಪ್ಪ, ನ್ಯಾವಾದಿ ಜಿ.ರಮೇಶ್, ಜೈಲರ್ ಶ್ರೀಮಂತಗೌಡ ಪಾಟೀಲ್, ಸಹಾಯಕ ಜೈಲರ್ ರಾಮಣ್ಣ ಹರೆಕಲ್, ಮಂಜು, ಪ್ರವೀಣ್, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಧಿಖಾನೆ ನಿವಾಸಿಗಳಿಗೆ ಹಣ್ಣು ವಿತರಿಸಿ ಜಯಂತಿ ಆಚರಿಸಲಾಯಿತು

[t4b-ticker]

You May Also Like

More From Author

+ There are no comments

Add yours