ದೇಶದಲ್ಲಿ ಗಣಪತಿ ಹಬ್ಬ ಆದರೆ ಈ ಗ್ರಾಮದಲ್ಲಿ ಗಣೇಶನ ಹಬ್ಬ ಆಚರಿಸಲ್ಲ

 

ವಿಶೇಷ ವರದಿ: ಚಳ್ಳಕೆರೆ ವೀರೇಶ್ 

ಚಳ್ಳಕೆರೆ: (challakere) ನಾಡಿನಾದ್ಯಂತ ಗಣೇಶ ಹಬ್ಬ ಆಚರಣೆ ಸಿದ್ದತೆ ನಡೆಸುತ್ತಿದ್ದರೆ, ಈ ಗ್ರಾಮದಲ್ಲಿ ಮಾತ್ರ ವಿಘ್ನನಿವಾರಕ ಗಣೇಶ ಚತುರ್ಥಿಯನ್ನೇ ಆಚರಿಸುವುದೆ ಇಲ್ಲ.

ತಾಲ್ಲೂಕಿನ ಗಡಿನಾಡು ಆಂಧ್ರಪ್ರದೇಶಕ್ಕೆ ಹೊಂದಿಕೊAಡಿರುವ ಗೌರಸಮುದ್ರ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಗಣೇಶ ಚತುರ್ಥಿಯನ್ನೇ ಆಚರಿಸಲ್ಲ, ಸುತ್ತಮುತ್ತಲ ಗ್ರಾಮ, ನಗರದಲ್ಲಿ ಗಲ್ಲಿಗಲ್ಲಿಯಲ್ಲಿ ಪ್ರತಿಷ್ಠಾನೆಯಾಗುವ ಗಣೇಶ ಈ ಗ್ರಾಮದಲ್ಲಿ ಪ್ರವೇಶವನ್ನೆ ಮಾಡಲ್ಲ. ಕಳೆದ ಹತ್ತಾರು ವರ್ಷಗಳಿಂದ ನಮ್ಮ ಗ್ರಾಮದೇವತೆ, ಜಿಲ್ಲೆಯ ಪ್ರತಿಷ್ಠಿತ ಜಾತ್ರೆಗಳಲ್ಲಿ ಒಂದಾದ ಗೌರಸಮುದ್ರ ಮಾರಮ್ಮ ಮತ್ತು ಗಣೇಶ ಚತುರ್ಥಿ ಎರಡೂ ಹಬ್ಬಗಳು ಭಾದ್ರಪದ ಮಾಸದ ಸೋಮವಾರ ಗಣೇಶ ಹಬ್ಬವಾದರೆ, ಮರು ದಿನ(ಮಂಗಳವಾರ) ಮಾರಮ್ಮದೇವಿ ಜಾತ್ರೆ ನಡೆಯುತ್ತದೆ. ಆದಕಾರಣ ನಮ್ಮ ಗ್ರಾಮದಲ್ಲಿ ಗಣೇಶನ ಎಂಟ್ರಿ ಇಲ್ಲ ಎನ್ನುತ್ತಾರೆ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ.

ಇದನ್ನು ಓದಿ: ಗಣಪತಿಗಳ ವಿಸರ್ಜನೆಗೆ ನಗರಸಭೆಯಿಂದ ಸ್ಥಳಗಳ ನಿಗದಿ, ಯಾವ ಏರಿಯಾ ಗಣಪತಿಗೆ ಎಲ್ಲಿ ಬಿಡಬೇಕು.

ಈ ಭಾಗದ ಆರಾಧ್ಯ ದೈವ, ಶಕ್ತಿ ದೇವತೆ, ಮಧ್ಯಾಹ್ನ ಮಾರಿ ಎಂದೆ ಕರೆಸಿಕೊಳ್ಳುವ ಗೌರಸಮುದ್ರ ಮಾರಮ್ಮಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಗಣೇಶ ಪ್ರತಿಷ್ಟಾಪನೆ ಸಾಧ್ಯವಾಗದು ಎಂಬ ವಾದ ಒಂದು ಕಡೆಯಾದರೆ ಮತ್ತೊಂದು ವಾದದಲ್ಲಿ ಗಣೇಶ ಪ್ರತಿಷ್ಠಾನೆ ಮಾಡಿದವರು ನೂರಾರು ಸಂಕಟಗಳನ್ನು ಅನುಭವಿಸುತ್ತಾರೆ ಎಂಬ ನಂಬಿಕೆಯೂ ಈ ಗ್ರಾಮದಲ್ಲಿದೆ. ವಿಘ್ನವಿನಾರಕ ಎಂಬ ಉದ್ದೇಶದಿಂದ ಪ್ರತಿ ಮನೆ, ಗಲ್ಲಿಯಲ್ಲಿ ಕುಳಿತು ಜನರ ಕಷ್ಟನಿವಾರಣೆ ಮಾಡುವ ವಿನಾಯಕ ಈ ಗ್ರಾಮವನ್ನು ಮಾತ್ರ ಹಲವಾರು ವರ್ಷಗಳಿಂದ ಪ್ರವೇಶಿಸಿಯೇ ಇಲ್ಲ.

ಈ ವರ್ಷ ಮಳೆ ಕಡಿಮೆಯಾಗಿದ್ದರೂ ಗಣೇಶನ ಹಬ್ಬದ ಆಚರಣೆಗೆ ಎಲ್ಲೆಡೆ ಉತ್ಸಾಹ ತುಂಬಿದೆ. ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವಿಶ್ವಹಿಂದೂಪರಿಷತ್ ಮತ್ತು ಭಜರಂಗದಳ ಸಂಘಟನೆ, ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಓಂಕಾರ ಗಣಪತಿ ಸಂಘದವರು ಗಣೇಶನ ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಪೆಂಡಾಲ್‌ಗಳನ್ನು ನಿರ್ಮಿಸಿದ್ದು ಪೆಂಡಲ್ ಸುತ್ತಮುತ್ತ ವಿವಿಧ ಮನೋರಂಜನೆಯ ಆಟಗಳ ಸಾಮಾಗ್ರಿಗಳು ಬಂದಿಳಿದಿವೆ.
ನಗರದ ಎಲ್ಲಾ ರಸ್ತೆಗಳಲ್ಲೂ ಸುಮಾರು ೬೦ಕ್ಕೂ ಹೆಚ್ಚು ಗಣೇಶನ ವಿಗ್ರಹದ ಮಾರಾಟಗಾರರು ನೂರಾರು ಸಂಖ್ಯೆಯಲ್ಲಿ ಸಿದ್ದಪಡಿಸಿ ಗಣೇಶನ ಮೂರ್ತಿಯನ್ನು ತಂದಿಟ್ಟಿದ್ಧಾರೆ. ಜನರು ಉತ್ಸಾಹದಿಂದ ಮೂರ್ತಿಯನ್ನು ವೀಕ್ಷಿಸಿಸುತ್ತಿದ್ಧಾರೆ. ಆದರೆ, ಈ ಬಾರಿ ಗಣೇಶ ದರ ಭಕ್ತರನ್ನು ದಂಗುಬಡಿಸುತ್ತಿದೆ. ಚಿಕ್ಕ, ಚಿಕ್ಕ ಮೂರ್ತಿಗಳು ಸಹ ೪೦೦ರಿಂದ೫೦೦ರೂ, ದೊಡ್ಡ ಗಣೇಶನಿಗೆ ೩ರಿಂದ೫ ಸಾವಿರ ದರವನ್ನು ಮಾರಾಟಗಾರರು ನಿಗದಿಪಡಿಸಿದ್ದಾರೆ. ಆದರೆ, ಗಣೇಶನನ್ನು ಕೊಳ್ಳಲು ಬಂದ ಬಹುತೇಕ ಜನ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಭಕ್ತರಿಗೆ ಗಣೇಶಮೂರ್ತಿಯ ದರ ಹೆಚ್ಚು ನೋವು ಪಡುವಂತೆ ಮಾಡಿದೆ. ಆದರೂ ವಿಘ್ನನಿವಾರಕ ಶ್ರೀಗಣೇಶನನ್ನು ಪೂಜಿಸಬೇಕಿದೆ.

[t4b-ticker]

You May Also Like

More From Author

+ There are no comments

Add yours