ಜೋಗಿಮಟ್ಟಿ ಅರಣ್ಯದಲ್ಲಿ ಶ್ರೀಗಂಧ ಮರಗಳ್ಳರ ಕಾಟ?

 

chitradurga :ಶಾಂತಿಯ ನಾಡು ಶ್ರೀಗಂಧದ ಬೀಡು ಎಂಬ ಖ್ಯಾತಿಯ ಜೊತೆಗೆ ಕವಿಗಳು  ಕರ್ನಾಟಕವನ್ನು ಗಂಧದ ನಾಡು ಚೆಂದದ ಬೀಡು ಎಂದೆಲ್ಲಾ ಕವಿಗಳು ವರ್ಣಿಸಿದ್ದಾರೆ. ಆದರೆ ಈ ಗಂಧದ ಬೀಡಿನಲ್ಲಿ ಶ್ರೀಗಂಧದ ಮರಗಳಿಗೆ ರಕ್ಷಣೆ ಇಲ್ಲದಾಗಿದೆ. ರಾಜ್ಯದ ಅರಣ್ಯಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು ವಿವಿಧ ಜಿಲ್ಲೆಗಳಲ್ಲಿ ಒಟ್ಟು 907 ಕಳ್ಳತನ ಪ್ರಕರಣಗಳು ಕಳೆದ ವರ್ಷಗಳಿಂದ  ದಾಖಲಾಗಿದ್ದು ಕೋಟೆ ನಾಡಿನ ಅತಿ ಎತ್ತರದಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಕ್ಕೆ ಕೊಡಲಿ ಪೆಟ್ಟು ಬೀಳುತ್ತಿದ್ದು ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳತನ ಮಾಡುತ್ತಿರುವ ಘಟನೆ ನಡೆಯುತ್ತಿದ್ದು ಮರ ಕಡಿತವಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಎಂಪಿ ಚುನಾವಣೆ ಗೆಲುವಿಗೆ ಶ್ರಮಿಸಲು ಸಿದ್ದರಾಗಿ: ಟಿ.ರಘುಮೂರ್ತಿ

ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಶ್ರೀಗಂಧ ಬೆಳೆಯುವಲ್ಲಿ ಉನ್ನತ ಸ್ಥಾನದಲ್ಲಿತ್ತು. ಆದರೆ ಕಳ್ಳರ ಕಾಟ ಶ್ರೀಗಂಧದ ನಾಡಿಗೆ ಬಹುದೊಡ್ಡ ಕಂಠಕವಾಗುತ್ತಿವೆ. ಅರಣ್ಯ ಇಲಾಖೆಯ ಗಸ್ತು ಕಣ್ತಪ್ಪಿಸಿ ಗಂಧ ಚೋರರು ನಿರಂತರವಾಗಿ ಮರಗಳನ್ನು ಕಡಿದು ಹೊರ ರಾಜ್ಯಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಹ ಹೊರ ರಾಜ್ಯವಾದ ತಮಿಳುನಾಡಿನಿಂದ ಬಂದ ಕಳ್ಳರು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು  ಅಲ್ಲೇ ಶೇಡ್ ಮಾಡಿಕೊಂಡಿದ್ದ ಕಳ್ಳರನ್ನು ಸೆರೆ ಹಿಡಿಯಲಾಗಿತ್ತು. ಆದರೆ ಈಗ ಮತ್ತೆ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ  ಮತ್ತಷ್ಟು ಬೀಗಿ ಭದ್ರತೆ ಒದಗಿದಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶ್ರೀಗಂಧದ ಮರಗಳ ಮರಣಹೋಮ‌ ನಡೆಯುತ್ತದೆ ಜೊತೆ ಮತ್ತೆ ತಮಿಳು ನಾಡು ಮೂಲದ ಕಳ್ಖರು ಜೋಗಿಮಟ್ಟಿ ಅರಣ್ಯಕ್ಕೆ ಮರಳಿ ಲಗ್ಗೆ ಇಟ್ಟಿರುವ ಶಂಕೆ ಇದ್ದು ಅಧಿಕಾರಿಗಳು  ಎಚ್ಚರಿಕೆ ವಹಿಸಬೇಕಾಗಿದೆ.

[t4b-ticker]

You May Also Like

More From Author

+ There are no comments

Add yours