ಜನಪದ ಗೀತೆಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡುವ ಪುರಾತನ ಕಲೆ

 

ಚಿತ್ರದುರ್ಗ: ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿಕೊಂಡ ಜನಪದ ಗೀತೆಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡುವ ಪುರಾತನ ಕಲೆಯಾಗಿದೆ ಎಂದು ಹಿರಿಯೂರು ತಾಲ್ಲೂಕು ಹಿಂಡಸಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೌನೇಶ್‍ನಾಯ್ಕ ತಿಳಿಸಿದರು.

ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಹಿಂಡಸಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಂಗೀತ ಸಾಂಸ್ಕøತಿಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನಕ್ಷರಸ್ಥರು ಜಾನಪದ ಕಲೆಯನ್ನು ಗಟ್ಟಿಯಾಗಿ ಬೆಳೆಸಿ ಉಳಿಸಿಕೊಂಡು ಬಂದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲೆಗಳು ಅಳಿವಿನಂಚಿಗೆ ತಲುಪುತ್ತಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಪೀಳಿಗೆಗೆ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ. ಇಂದಿನ ಮಕ್ಕಳೆ ಮುಂದಿನ ಸಾಂಸ್ಕøತಿಕ ರಾಯಭಾರಿಗಳು ಎಂದು ಹೇಳಿದರು.
ಆಯಿತೋಳು ಚಂದ್ರಪ್ಪ ಮಾತನಾಡುತ್ತ ಹಳ್ಳಿಗಾಡಿನಲ್ಲಿ ಒಂದು ಕಾಲದಲ್ಲಿ ಜಾನಪದ ಕಲೆಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದವು. ಸಿನಿಮ, ಟಿ.ವಿ.ಹಾಗೂ ಡಿಜೆಗಳ ಹಾವಳಿಯಿಂದಾಗಿ ಜಾನಪದ ಕಲೆಗಳು ನಶಿಸುತ್ತಿವೆ. ದೇಶಿ ಕಲೆ ಗ್ರಾಮೀಣ ಜಾನಪದ ಸೊಗಡನ್ನು ಉಳಿಸಬೇಕಾಗಿದೆ ಎಂದರು.
ಹಿರಿಯ ಕಲಾವಿದ ಪೂಜಾರ್ ಮಸಿಯಪ್ಪ, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಣ್ಣಕರಿಯಪ್ಪ, ಉಪಾಧ್ಯಕ್ಷ ಚನ್ನಕೇಶವ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಪುಷ್ಪಲತ, ಶ್ರೀಮತಿ ವಿಜಯಮ್ಮ, ಸಣ್ಣಕರಿಯಪ್ಪ, ಲೋಕೇಶ್ ವೇದಿಕೆಯಲ್ಲಿದ್ದರು.
ಓ.ಮೂರ್ತಿ ಹಾಗೂ ಸಂಗಡಿಗರು ಸುಗಮ ಸಂಗೀತ ಹಾಡಿದರು. ಮಂಜುನಾಥ್ ಮತ್ತು ಸಂಗಡಿಗರಿಂದ ಕನ್ನಡ ಗೀತೆಗಳ ಗಾಯನ, ಯಶೋಧಮ್ಮ ಮತ್ತು ಸಂಗಡಿಗರು ಸೋಭಾನೆ ಪದಗಳನ್ನು ಹಾಡಿದರು. ತಿಪ್ಪೇಸ್ವಾಮಿ ಮತ್ತು ಸಂಗಡಿಗರಿಂದ ಭಜನೆ ಪದಗಳು, ಕೋಲಾಟ, ಶಾಲಾ ಮಕ್ಕಳಿಂದ ವಿವಿಧ ನೃತ್ಯಗಳು ಪ್ರದರ್ಶನಗೊಂಡವು.

[t4b-ticker]

You May Also Like

More From Author

+ There are no comments

Add yours