ಬಿಜೆಪಿ ಪಕ್ಷದಿಂದ ಡಿ.ಟಿ.ಶ್ರೀನಿವಾಸ್ ಉಚ್ಚಾಟನೆ ಆದೇಶ ವಾಪಸ್

 

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ನಾಯಕರು ಪ್ರಚಾರದ ಬೇಟೆಗೆ ಇಳಿದಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಪಣ ತೊಟ್ಟಿದೆ.

ಹಾಗಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಬಂದು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.

ಇದಕ್ಕೆ ಪುರಕವೆಂಬಂತೆ ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ಮುಖಂಡ, ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ ಎಂದು ರಾಜ್ಯ ಬಿಜೆಪಿ‌ ಶಿಸ್ತು ಸಮಿತಿ ಅದ್ಯಕ್ಷ ಲಿಂಗರಾಜ್ ಪಾಟೀಲ್ ತಿಳಿಸಿದ್ದಾರೆ. ಪಕ್ಷದ ಬಗ್ಗೆ ತಾವು ತೋರಿದ ಬದ್ದತೆ,ನಡವಳಿಕೆ ಹಾಗೂ ಉಚ್ಚಾಟನೆ ಆದೇಶದ‌ ಕುರಿತು ತಾವು ನೀಡಿದ ಉತ್ತರ ಗಮನಿಸಿ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ. ಇದೀಗ ಹಿಂದುಳಿದ ಸಮುದಾಯದ ಮುಖಂಡ ಹಾಗೂ ಕಾಡುಗೊಲ್ಲ ಸಮುದಾಯದ ಪ್ರಭಾವಿ ನಾಯಕ ಶ್ರೀನಿವಾಸ್​ಗೆ ಮಣೆ ಹಾಕಿದೆ.

ಕಳೆದ ಎರಡು ವರ್ಸಗಳ ಹಿಂದೆ ಅವರು ಪಕ್ಷದ ಸೂಚನೆ ಕಡೆಗಣಿಸಿದ್ದರು. ನಂತರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಡಿ.ಟಿ.ಶ್ರೀನಿವಾಸ್ ಅವರನ್ನು 2020 ರಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀನಿವಾಸ್ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ತಿಳಿಸಿದ್ದರೂ ಪಕ್ಷದ ಸೂಚನೆ ಕಡೆಗಣಿಸಿದ್ದರು. ಆದ್ದರಿಂದ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿತ್ತು.

ಆದರೆ ಇದೀಗ ಆದ್ರೆ, ಇದೀಗ ಶಿಸ್ತು ಸಮಿತಿ ತನ್ನ ಆದೇಶ ವಾಪಸ್ ಪಡೆದಿದೆ.

[t4b-ticker]

You May Also Like

More From Author

+ There are no comments

Add yours