ಸ್ವಾಮಿ ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಿ

 

 

ಹಿರಿಯೂರು :ಜ.13- ಬಡತನ ಜಾತಿ ವ್ಯವಸ್ಥೆ ಮೇಲು-ಕೀಳು ಮನೋಭಾವನೆ ಮೌಡ್ಯತೆ ತೊಲಗಿಸಿ ಸರಿ ಸಮಾನತೆಯ ಸಮಾಜ ನಿರ್ಮಾಣ ಮಾಡುವಂಥ ಸ್ವಾಮಿ ವಿವೇಕಾನಂದರ ಆದರ್ಶಗಳು ತುಂಬಾ ವಿಶೇಷತೆಯಾಗಿದ್ದು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ತುಂಬಾ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಾದ ಬಿ.ಪಿ ತಿಪ್ಪೇಸ್ವಾಮಿ ಹೇಳಿದರು. ಹಿರಿಯೂರಿನ ಎಎಂಎಸ್ ಕಂಪ್ಯೂಟರ್ ಸೆಂಟರ್ ನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಚಾರ್ಯರಾದ ಡಾ. ಡಿ. ಧರಣೇಂದ್ರಯ್ಯ ಮಾತನಾಡಿ ಸ್ವಾಮಿ ವಿವೇಕಾನಂದರು ಜಗತ್ತಿನ ಶಕ್ತಿ ಜಗತ್ತಿನ ಆಸ್ತಿ ಭಾರತದ ಯುವ ಜನಾಂಗದ ಶಕ್ತಿ ಎಂದು ಹೇಳಿದರು ಯುವಕರು ಎಚ್ಚೆತ್ತುಕೊಂಡು ದೇಶದ ಪ್ರಗತಿಯತ್ತ ತಮ್ಮ ಚಿತ್ತಹರಿಸಬೇಕು ಎಂದರು,

ಇದನ್ನೂ ಓದಿ: ಮೈನ್ಸ್ ಲಾರಿ ಚಾಲಕನಿಗೆ ವಾಹನ ಡಿಕ್ಕಿ

ಪೊಲೀಸ್ ಇಲಾಖೆ ಶ್ರೀಮತಿ ರೇಖಾ, ಬಿಇಡಿ ಕಾಲೇಜು ಪ್ರಾಚಾರ್ಯರಾದ ಡಾ. ಶಾಂತ ಮೂರ್ತಿ ಎಬಿವಿಪಿ ಸಂಘಟಕರಾದ ಯೋಗೇಶ್ ಕರ್ನಾಟಕ ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ್, ಡಾ.ಶಾಂತ ಕುಮಾರ್, ಜೀವದಾತೆ ಸಂಸ್ಥೆಯ ಸಂಸ್ಥಾಪಕರಾದ ಅಭಿನಂದನ್ ಮತ್ತಿತರರು ಮಾತನಾಡಿದರು. ಉಪನ್ಯಾಸಕರಾದ ರಾಮಲಿಂಗಪ್ಪ ಎ.ಎಂ.ಎಸ್ ಸಂಸ್ಥೆಯ ಮುಖ್ಯಸ್ಥರಾದ ಮುರಳಿಧರ್, ಶಿಕ್ಷಕಿ ರೋಹಿಣಿ, ಕರಿಯಮ್ಮ ಗೋವಿಂದರಾಜ್, ರಂಗಸ್ವಾಮಿ, ಕಿರಣ್ ಮಿರಜ್ಕರ್, ಬಬ್ಬೂರು ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

[t4b-ticker]

You May Also Like

More From Author

+ There are no comments

Add yours