ಮೊಳಕಾಲ್ಮುರಿನ ನೇರಲಹಳ್ಳಿಯನ್ನು ಸಮಸ್ಯೆ ಮುಕ್ತ ಗ್ರಾಮ ಮಾಡಲು ಪಣ: ತಹಶೀಲ್ದಾರ್ ಎನ್.ರಘುಮೂರ್ತಿ

 

ಮೊಳಕಾಲ್ಮೂರು: ತಾಲೂಕಿನ ನೇರಲಳ್ಳಿ ಗ್ರಾಮ ಪಂಚಾಯಿತಿಯನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ಎಂದು  ಸಾರಿಗೆ ಸಚಿವರ ಆಸೆಯಂತೆ ಮತ್ತು ನಿರ್ದೇಶನದಂತೆ ಘೋಷಣೆ ಮಾಡಬೇಕಾಗಿದೆ.  ಜಿಲ್ಲಾಧಿಕಾರಿಗಳು ಕೂಡ ಗಡಿ ಭಾಗದಲ್ಲಿರುವಂತಹ ಈ ಗ್ರಾಮವನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡುವಂತೆ ತಿಳಿಸಿದ್ದಾರೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಪಂಚಾಯಿತಿಯ ವ್ಯಾಪ್ತಿಯಲ್ಲಿರುವಂತ ಗ್ರಾಮಗಳಾದ ನೇರಲಳ್ಳಿ, ಮರಳಹಳ್ಳಿ ಮತ್ತು ಗುಂಡೂರು ಗ್ರಾಮಗಳಲ್ಲಿ ಇರುವಂತಹ ಪೌತಿ  ಖಾತೆಗಳು ಸಾಮಾಜಿಕ ಭದ್ರತಾ ಪಿಂಚಣಿಗಳು ಮತ್ತು ಸ್ಮಶಾನದ ಸಮಸ್ಯೆಗಳು ಮತ್ತು ದಾರಿ ಸಮಸ್ಯೆಗಳು ಈ ಎಲ್ಲವನ್ನೂ ಕೂಡ ಎರಡು ದಿನಗಳ ಒಳಹೆ   ಪರಿಶೀಲನೆ ಮಾಡಿ ಪೂರ್ಣ ಪ್ರಮಾಣದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಆಡಳಿತ ಬದ್ದವಾಗಿದ್ದು  ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು   ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ನೇರ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮತದಾರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿ ಎಲ್ ಓ ಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಪರಿಶೀಲನೆ ಮಾಡಿ ಹೊಸದಾಗಿ ಸೇರ್ಪಡೆಗೊಂಡಂತ ಮತ್ತು ಸ್ಥಳಾಂತರಗೊಂಡಂತ ಪ್ರಕರಣಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು.

ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದರು. ತದನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಈ ಪಂಚಾಯತಿಯಲ್ಲಿ 60 ಪೌತಿ ಖಾತೆ ಪ್ರಕರಣಗಳು ಬಾಕಿ ಇದ್ದು ಇವುಗಳನ್ನು ತ್ವರಿತವಾಗಿ ಎರಡು ದಿನಗಳಲ್ಲಿ ಆನ್ಲೈನ್ ನಲ್ಲಿ ಅರ್ಜಿಗಳನ್ನು ನೋಂದಣಿ ಮಾಡುವಂತೆ ರಾಜಸ್ವ ನಿರೀಕ್ಷಕರಿಗೆ ಸೂಚಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಓಡಿ ಪ್ರಕರಣಗಳು ದಾರಿ ಪ್ರಕರಣಗಳು ಸ್ಮಶಾನ ಪ್ರಕರಣಗಳು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸೂಚನೆ ನೀಡಿದರು.

ಇನ್ನೂ ಈ ಗ್ರಾಮಗಳಲ್ಲಿ ನೈರ್ಮಲಿಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಪಿಡಿಓ ರವರಿಗೆ ಸೂಚಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ ಉಪಾಧ್ಯಕ್ಷರಾದಂತ ಗಂಗಣ್ಣ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರುಗಳು ರಾಜಸ್ವನಿರೀಕ್ಷಕರಾದ ಪ್ರಾಣೇಶ್ ಗ್ರಾಮ ಲೆಕ್ಕಾಧಿಕಾರಿ ವೀಣಾ ಪಿಡಿಒ ಅಬ್ದುಲ್ ಮಲಿಕ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours