ಆಟೋ ಚಾಲಕರಿಗೆ ಸಿಕ್ತಿಲ್ಲ ಸಿಎನ್‌ಜಿ, ಬಂಕ್ ವಿರುದ್ದ ಆಟೋ ಚಾಲಕರು ಪ್ರತಿಭಟನೆ

 

ಚಳ್ಳಕೆರೆ🙁challakere) ನಗರದ ಬಳ್ಳಾರಿ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಆಟೋ ಚಾಲಕರಿಗೆ ಸಿಎನ್ ಜಿ ಸಿಗದೆ ಚಾಲಕರು ಪರದಾಡುವಂತೆ ಆಗಿದೆ ನಗರದಲ್ಲಿ ಸಿಎನ್‌ಸಿ ಪೆಟ್ರೋಲ್ ಬಂಕ್ ಒಂದೇ ಇರುವ ಕಾರಣ ಸಿ ಎನ್ ಜಿ ಸ್ಟಾಕ್ ಬಗ್ಗೆ ಕಡಿಮೆ ಬರುತ್ತಿದೆ ಇದರಿಂದ ಆಟೋ ಚಾಲಕರಿಗೆ ಸಿ ಎನ್ ಜಿ ಸಿಗದೆ ಆಟೋ ಚಾಲನೆ ಮಾಡುವುದು ಕಷ್ಟಕರವಾಗಿದೆ

ಆಟೋ ಚಾಲಕರು ಫೈನಾನ್ಸ್ ಬ್ಯಾಂಕ್ ಇನ್ನಿತರ ಕಡೆ ಸಾಲ ಮಾಡಿ ಆಟೋಗಳನ್ನು ತೆಗೆದುಕೊಂಡಿದ್ದಾರೆ ನಗರದಲ್ಲಿ 15 ರಿಂದ 20 ದಿನಗಳಿಂದ ಸಿ ಎನ್ ಜಿ ಸಿಗದ ಕಾರಣ ಆಟೋ ಚಾಲನೆ ಮಾಡಲು ಆಗುತ್ತಿಲ್ಲ ಇದರಿಂದ ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಸಿ ಎನ್ ಜಿ ಸಿಗದ ಕಾರಣ ವಿದ್ಯಾರ್ಥಿಗಳನ್ನು ಶಾಲೆಗೆ ಸರಿಯಾದ ಸಮಯಕ್ಕೆ ಬಿಡಲು ಆಗುತ್ತಿಲ್ಲ ಎಂದು ಆಟೋ ಚಾಲಕರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ ಪೆಟ್ರೋಲ್ ಬಂಕ್ ನಲ್ಲಿ cng ಹಾಕಿಸಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕು ಆದರೂ ಸಹ ಸಿಎಂಜಿ ಸಿಗುತ್ತಿಲ್ಲ ಎಂದು ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದ.

ಚಳ್ಳಕೆರೆ ನಗರದಲ್ಲಿ ಒಂದೇ ಸಿ ಎನ್ ಜೆ ಪಾಯಿಂಟ್ ಇರುವ ಕಾರಣ ಈ ಸಮಸ್ಯೆ ಆಗುತ್ತಿದೆ ಇನ್ನು ಬೇರೆ ಪೆಟ್ರೋಲ್ ಬಂಕ್ ಸಿ ಎನ್ ಜಿ ಬಂಕ್ ಆಗಲು ಸರ್ಕಾರ ಅನುಮತಿ ನೀಡಬೇಕು ಎಂದು ಆಟೋ ಚಾಲಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಾಳೆದಿಂಡಿನಿಂದ ನಾರು ಸಂಸ್ಕರಣೆ ತರಬೇತಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಆಟೋ ಚಾಲಕರದ ಮಂಜುನಾಥ್ ವೆಂಕಟೇಶ್ ತಿಪ್ಪೇಸ್ವಾಮಿ ಕೊಟ್ರೇಶ್ ವೀರೇಶ್ ಹಾಗೂ ಸಾರ್ವಜನಿಕರಾದ ಪ್ರಶಾಂತ್ ನಾಯಕ್ ಮತ್ತು ಇತರರು ಸ್ಥಳದಲ್ಲಿದ್ದರು

[t4b-ticker]

You May Also Like

More From Author

+ There are no comments

Add yours