ನಾಯಕನಹಟ್ಟಿ ತಿಪ್ಪೇಶನ ಹುಂಡಿಯಲ್ಲಿ ಇದ್ದಿದ್ದು ಎಷ್ಟು ಲಕ್ಷ ಗೊತ್ತೆ.

 

ಗುರು ತಿಪ್ಪೇರುದ್ರಸ್ವಾಮಿ ದೇಗುಲ ಹುಂಡಿ ಎಣಿಕೆ

ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿಯ  ( Nayakanahatti)  ತಿಪ್ಪೇಶನ  ಹೊರಮಠದ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆ ಲಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.(how many lakhs were in Nayakanahatti Tippesa’s Hundi)

ಮಧ್ಯ ಕರ್ನಾಟಕದ ಭಾಗದ ಮೊದಲು ಹೊರಮಠ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6 ಕ್ಕೆ ಮುಕ್ತಾಯವಾಯಿತು. ಹೊರಮಠದಲ್ಲಿ 6,62,132 ಒಳಮಠದಲ್ಲಿ 30,94,200 ದೇವಾಲಯದ ದಾಸೋಹ 2,72,740 ಮಂದಿರದ ಹುಂಡಿಯಲ್ಲಿ ಸಂಗ್ರಹವಾದ ಒಟ್ಟಾರೆ 40,29,072 ಸಂಗ್ರಹವಾಗಿದೆ. ಹೊರಮಠ ಮತ್ತು ಒಳಮಠ ಹುಂಡಿಯಲ್ಲಿ ಕೆಲವು ಬೆಳ್ಳಿ ನಾಣ್ಯಗಳು ಬೆಳ್ಳಿ ತೊಟ್ಟಿಲುಗಳು ಬೆಳ್ಳಿ ಆಭರಣಗಳು ಸಿಕ್ಕಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ನಾಲ್ಕು ರಾಜ್ಯಗಳ ಚುನಾವಣೆ ಸಮೀಕ್ಷೆಗಳು ಬಹಿರಂಗ

ಇನ್ನು ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ ಮಾತನಾಡಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಅವರ ಆದೇಶದ ಮೇರೆಗೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಹುಂಡಿ ಎಣಿಕೆಯನ್ನು ಪ್ರಾರಂಭಿಸಲಾಗಿದೆ, ಎಂದಿನಂತೆ ಅಧಿಕಾರಿಗಳು ಹುಂಡಿ ಎಣಿಕೆ ಮಾಡಿದ್ದು ಇದನ್ನು ಬ್ಯಾಂಕ್ ನಲ್ಲಿ ಇಂದೇ ಜಮಾ ಮಾಡಲಾಗುವುದು ಎಂದು ಮಾಧ್ಯಮದೊಂದಿಗೆ ಮಾತನಾಡಿದರು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯ ನಿರ್ವಾಣ ಅಧಿಕಾರಿ ಎಚ್ ಗಂಗಾಧರಪ್ಪ, ನಾಡಕಚೇರಿ ಉಪ ತಹಶೀಲ್ದಾರ್ ಬಿ.ಶಕುಂತಲಾ, ಸಿರಸ್ತೆದಾರ್ ಸದಾಶಿವಪ್ಪ, ಆರ್‌ಐ.ಚೇತನ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ, ಜಗದೀಶ್, ಶಂಕರ್, ಪುಷ್ಪಲತಾ, ಶರಣಬಸಪ್ಪ ,ಜೈರಾಮ್‌, ವಿ.ಎ.ಪದ್ಮಾಜ, ಲಕ್ಷ್ಮಿ, ಸರಸ್ವಪತಿ, ಮಂಜುಳಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ರಾಮ್ ಮೋಹನ್, ಮತ್ತು ಸಿಬ್ಬಂದಿ, ಗ್ರಾಮ ಸಹಾಯಕರಾದ ಚನ್ನಬಸಪ್ಪ, ಓಬಣ್ಣ, ಹರೀಶ್, ಹೇಮಂತ್ ನಾಯ್ಕ, ಕುಮಾರ್, ನಾಗರಾಜ್, ಇತರರಿದ್ದರು.

[t4b-ticker]

You May Also Like

More From Author

+ There are no comments

Add yours