ಬಡವರಿಗೆ ನೀಡಿದ ಮನೆಗಳನ್ನು ಮಾರಟ ಮಾಡಬೇಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:  ಕಷ್ಟ ಪಟ್ಟು ಬಡವರಿಗೆ ನೀಡಿದ ಮನೆಗಳನ್ನು ಯಾರು ಮಾರಟ ಮಾಡಿಕೊಳ್ಳಬೇಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಮಹಿಳಾ ಹಮಾಲರಿಗೆ ನಿರ್ಮಿಸಿರುವ  ವಸತಿ ಗೃಹಗಳು  ಮತ್ತು ಬೆಳಕು ಯೋಜನೆಯಡಿ  ವಿದ್ಯುತ್ ಸಂಪರ್ಕ ಕಲ್ಪಿಸಿರುವ ಮನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮೊದಲ ಬಾರಿಗೆ ಚಿತ್ರದುರ್ಗ ನಗರದಲ್ಲಿ  ಮಹಿಳಾ ಹಮಾಲರಿಗೆ  ಜಾಗ ಮತ್ತು ಮನೆಯನ್ನು ನಿರ್ಮಿಸಿಕೊಡುವ ಕೆಲಸ ಮಾಡಿದ್ದೇನೆ. ಎಪಿಎಂಸಿ ಯಲ್ಲಿ ಕಷ್ಟ ಪಟ್ಟು ದುಡಿಯುತ್ತಾರೆ. ನಗರದಲ್ಲಿ ಬಾಡಿಗೆ ಹೆಚ್ಚಿದೆ. ದುಡಿಮೆಯಲ್ಲಿ ಬಾಡಿಗೆ ಕಟ್ಟಲು ಕಷ್ಟವಾಗುತ್ತದೆ.  ಬಡವರಿಗೆ  ಮನೆ ನಿರ್ಮಿಸಿದರೆ ಹೆಚ್ಚು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪುರುಷ ಹಮಾಲರಿಗೆ  150 ಮನೆಗಳು ನೀಡಲಾಗಿತ್ತು. ವಿಶೇಷವಾಗಿ   ಮಹಿಳಾ ಹಮಾಲರಿಗೆ  ನೀಡಬೇಕೆಂದು ಜಾಗ ಗುರುತಿಸಿ ಉತ್ತಮವಾದ ಜಾಗ ಗುರುತಿಸಿ133 ಮನೆಗಳನ್ನು ನಿರ್ಮಿಸಲಾಗಿದೆ.  ಕಳೆದ ಏಳು ವರ್ಷಗಳ ಕಾಲ ಸರ್ಕಾರದೊಂದಿಗೆ ಸಂಪರ್ಕ ನಡೆಸಿ ಜಾಗ ಮತ್ತು ಮನೆ ನೀಡಲು ಶ್ರಮಿಸಿದ್ದೇನೆ.
 ಬೆಳಕು ಯೋಜನೆ ನೀಡಲು  ಸರ್ಕಾರದ ಹಂತದಲ್ಲಿ  ವಿಶೇಷ  ಆದೇಶ ಮುಖಾಂತರ  ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಬಡವರಿಗೆ ಕಟ್ಟಲು ಆಗಲ್ಲ ಎಂಬ  ಉದ್ದದ ಮಹಿಳಾ ಹಮಾಲರ 133  ಮನೆಗಳಿಗೆ ಉಚಿತವಾಗಿ ವೈರಿಂಗ್, ಮೀಟರ್, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ‌. ಇದಕ್ಕೆ ಮುಖ್ಯಮಂತ್ರಿಗಳು, ವಿದ್ಯುತ್ ಸಚಿವರು ಸಹಕಾರದಿಂದ ಇಂದು ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದ್ದೇನೆ ಎಂದರು.
ಈಗ ಪೂರ್ಣಗೊಂಡ  54 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದ್ದು ಉಳಿದ ಎಲ್ಲಾ ಮನೆ ಪೂರ್ಣವಾದ ನಂತರ ವಿದ್ಯುತ್ ಸಂಪರ್ಕ ನೀಡುಲಾಗುತ್ತದೆ.
ಹಮಾಲರಿಗೆ ನಿರ್ದಿಷ್ಟ ಪ್ರದೇಶ ಎಂದು ಸಿಮೀತ ಮಾಡದೇ  ನಗರದಲ್ಲಿ ಅವಕಾಶ ಇರುವ ಎಲ್ಲಾ ಕಡೆ  ಮನೆಗಳನ್ನು ನೀಡಿದ್ದೇನೆ. ನಿರ್ಮಿತಿ ಕೇಂದ್ರದ ಮೂಲಕ ಮನೆ ನಿರ್ಮಿಸಿದ್ದು  ಉಳಿದ ಮನೆಗಳ ಕಾಮಗಾರಿ ಅದಷ್ಟು ಬೇಗ ಪೂರ್ಣಗೊಳಿಸಲಾಗುತ್ತದೆ. ಫಲಾನುಭವಿಗಳು  ಸಹ  ಸ್ವಲ್ಪ ಹಣ ಹಾಕಿ ಉತ್ತಮವಾದ ಮನೆ ನಿರ್ಮಿಸಿಕೊಂಡರೆ  ಸುಂದರವಾಗಿ ಮನೆ ನಿರ್ಮಿಸಿಕೊಳ್ಳಬಹುದು  ಎಂದರು.
ಗಾಂಧಿ ನಗರದಲ್ಲಿ ಉಚಿತವಾಗಿ ಮನೆಗಳನ್ನು ನೀಡಿದ್ದೆ ಆದರೆ ಬಡವರು  ಕಡಿಮೆ ಬೆಲೆಗೆ ಮಾರಟ ಮಾಡಿದ್ದು ನೋವಿನ ಸಂಗತಿಯಾಗಿದೆ. ಬಡವರಿಗಾಗಿ ನಾನು ಕಷ್ಟ ಪಟ್ಟು  ಸ್ಥಳ ಹುಡುಕಿ ಮನೆ ನಿರ್ಮಿಸಿ ಕೊಟ್ಟಿದ್ದೇನೆ ಆದರೆ ಮನೆಗಳು ಮಾರಟ ಮಾಡಿದರೆ ಮನೆಗಳನ್ನು ನೀಡಲು ಆಗಲ್ಲ  ದಯಮಾಡಿ ಮನೆಗಳನ್ನು  ಮಾರಟ ಮಾಡಬೇಡಿ ಎಂದರು.
ಕಾರ್ಮಿಕರು ತಮಗೆ ಏನೇ ಸಮಸ್ಯೆಗಳು ಇದ್ದರು ಸಹ  ಮಕ್ಕಳಿಗೆ ವಿದ್ಯಾಭ್ಯಾಸವನ್ನು  ಕಡ್ಡಾಯವಾಗಿ  ಕೊಡಿಸಬೇಕು. ನಿಮ್ಮ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಅದು ನನ್ನ ಆಸೆಯಾಗಿದೆ.  ಮುಂದಿನ ದಿನದಲ್ಲಿ  ರಸ್ತೆಗೆ ಸಹ ಹಣ ನೀಡುತ್ತೇನೆ ಈಗಾಗಲೇ  ಕುಡಿಯುವ ನೀರಿನ ಸಂಪರ್ಕ ನೀಡಿದ್ದು ಒಂದು ಬೊರವೆಲ್ ಸಹ ಹಾಕಿದ್ದು ಪಂಪರ್ ಮೋಟರ್ ವ್ಯವಸ್ಥೆ ಮಾಡಲಾಗುತ್ತದೆ.  ಎಲ್ಲಾ ಸಂದರ್ಭದಲ್ಲಿ ಹಮಾಲತರ ಸಂಘದ ಜೊತೆಯಲ್ಲಿ ನಾನು ಇರುತ್ತೇನೆ . ಇನ್ನು 700 ರಿಂದ 800 ಹಮಾಲರಿಗೆ ಜಾಗ ನೀಡಲು ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದು ಜಾಗ ನೋಡಿಕೊಂಡು ಎಲ್ಲಾರಿಗೂ ಸೌಲಭ್ಯ ಒದಗಿಸಲು ಪ್ರಯತ್ನ ಮಾಡುತ್ತೇನೆ  ಎಂದು ಹೇಳಿದರು.
ಕೆಇಬಿ ಎಕ್ಸ್ಯೂಟಿವ್ ಇಂಜಿನಿಯರ್  ಜಯ್ಯಣ್ಣ ಮಾತನಾಡಿ  ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರದ  ಹಂತದಲ್ಲಿ ವಿಶೇಷ ಹಣ ಬಿಡುಗಡೆ ಮಾಡಿಸಲು ಶ್ರಮಿಸಿದ್ದಾರೆ. ಎಲ್ಲಾ ಬಡವರು ಆಗಿದ್ದು ಉಚಿತವಾಗಿ  ವಿದ್ಯುತ್ ಸಂಪರ್ಕ ಕೊಡಿಸಬೇಕು ಎಂದು ಕಳೆದ ಹಲವು ತಿಂಗಳಿಂದ ಸರ್ಕಾರ ಮತ್ತು ವಿದ್ಯುತ್  ಸಚಿವ ಜೊತೆ  ಸಂಪರ್ಕ ಸಾಧಿಸಿ ಅತಿ ಕಡಿಮೆ ಅವಧಿಯಲ್ಲಿ  ವಿದ್ಯುತ್ ಸಂಪರ್ಕ ನೀಡಲು ಸಹಕಾರ ನೀಡಿದ್ದು ಜನರು ಎಂದು ಮರೆಯಬಾರದು ಎಂದರು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಳಿಗೆ ಕೇಂದ್ರ ಸರ್ಕಾರದ ದಿನ್ ದಯಾಳ್ ಉಪಾಧ್ಯ ಯೋಜನೆ ಮತ್ತು ಬೆಳಕು ಯೋಜರನೆಯ ಮೂಲಕ‌ ಮೊದಲನೇ ಹಂತದಲ್ಲಿ 54 ಮನೆಗಳಿಗೆ ನೀಡಿದ್ದು ಉಳಿದ ಮನೆಗಳಿಗೆ ಮೆನ ಪೂರ್ಣವಾದ ನಂತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ  ಎಡಬ್ಲೀ  ನಾಗರಾಜ್
ಎಪಿಎಂಸಿ ಮ್ಯಾನೇಜರ್  ದೊರೆಸ್ವಾಮಿ, ಹಮಾಲರ ಸಂಘದ ಅಧ್ಯಕ್ಷ ಬಸವರಾಜ್, ಸದಸ್ಯ ಜಯರಾಮರೆಡ್ಡಿ ಮತ್ತು ನೂರಾರು ಹಮಾಲರು ಇದ್ದರು.
[t4b-ticker]

You May Also Like

More From Author

+ There are no comments

Add yours