ಚಿತ್ರದುರ್ಗ (ಕರ್ನಾಟಕ ವಾರ್ತೆ)ಏ.05:
ಚಿತ್ರದುರ್ಗ ನಗರದ ಕೆ.ಬಿ.ಬಡಾವಣೆಯ ಕಿಂಟೋ ಕಾನ್ವೆಂಟ್ ಕಿರಿಯ ಪ್ರಾಥಮಿಕ ಶಾಲೆ, ಕೋಟೆ ರಸ್ತೆಯ ಮಿನರ್ವ ಕಾನ್ವೆಂಟ್ ಪ್ರಾಥಮಿಕ ಶಾಲೆ, ಜೈನ್ ಕಾಲೋನಿಯ ಮಾಡಲ್ ಸೈನಿಕ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಳಪ್ಪನಹಟ್ಟಿಯ ಗುಡ್ ಷಫರ್ಡ್ ಶಾಲೆಗಳು ಮಾನ್ಯತೆ ಪಡೆಯದೇ ಅನಧಿಕೃತವಾಗಿ ಶಾಲೆ ಸ್ಥಳಾಂತರಿಸಿ ನಡೆಸುತ್ತಿವೆ. ಈ ಶಾಲೆಗಳಿಗೆ ಪ್ರಸಕ್ತ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಾರದು.
ಇದನ್ನೂ ಓದಿ: ಮಾಡದಕೆರೆ ಬಳಿ ಲಾರಿ ಪಟ್ಟಿಯಾಗಿ ಚಾಲಕ ಸಾವು
ಯಾವುದೇ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮುನ್ನ ಶಾಲೆ ಮಾನ್ಯತೆ, ನವೀಕರಣ ಹಾಗೂ ಮಂಜೂರಾತಿ ಪಡೆದ ಸ್ಥಳದಲ್ಲಿಯೇ ನಡೆಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದರೆ ಪೋಷಕರೇ ಹೊಣೆಗಾರರು ಎಂದು ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಸಿದ್ದಾರೆ
[t4b-ticker]
+ There are no comments
Add yours