ಮಂಡ್ಯ: ಹಲವು ದಿನಗಳ ಹಿಂದೆ ಸ್ವಾಮೀಜಿ ಒಬ್ಬರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ.ಇದರ ಬೆನ್ನಲೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ( Chief Minister ) ಆಗಲಿದ್ದಾರೆ ಅಂತ ಭವಿಷ್ಯ ನುಡಿದಿದ್ದರು. ಈ ಬೆನ್ನಲ್ಲೇ ಮಂಡ್ಯದಲ್ಲಿ ಶ್ರೀ ಕರಿವೃಷಭ ದೇಶಿ ಕೇಂದ್ರದ ಶಿವ ಯೋಗೇಶ್ವರ ಸ್ವಾಮೀಜಿಯವರು, ಡಿಸಿಎಂ ಆಗಿರುವಂತ ಡಿ.ಕೆ ಶಿವಕುಮಾರ್ ( DK Shivakumar ) ಮುಖ್ಯಮಂತ್ರಿ ಆಗಲಿದ್ದಾರೆ ಅಂತ ಸ್ಪೋಟಕ ಭವಿಷ್ಯವಾಣಿ ನುಡಿದಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ರಾತ್ರೋ ರಾತ್ರಿ ತಲೆ ಎತ್ತಿದ ಮತ್ತೊಂದು ಪ್ರತಿಮೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಶ್ರೀ ಕರಿವೃಷಭ ದೇಶಿ ಕೇಂದ್ರದ ಶಿವ ಯೋಗೇಶ್ವರ ಸ್ವಾಮೀಜಿಯವರು, ಡಿ.ಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರೆ. ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರ ಸಿಎಂ ಆಯ್ಕೆ ಮಾಡುವ ವಿಚಾರದಲ್ಲಿ ಮೀಸಲಾತಿ ಪ್ರಕಟಿಸೋದು ಒಳಿತು. ಆಗ ಎಲ್ಲರಿಗೂ ಮುಖ್ಯಮಂತ್ರಿ ಆಗೋದಕ್ಕೆ ಅವಕಾಶ ದೊರೆತು, ಅನುಕೂಲವಾಗಲಿದೆ. ಎಲ್ಲಾ ಸಮುದಾಯದವರಿಗೂ ಇನ್ನಷಟ್ಟು ರಾಜಕೀಯ ಶಕ್ತಿ ದೊರೆಯಲಿದೆ ಎಂದರು.
ಡಿಕೆ ಶಿವಕುಮಾರ್ ಶ್ರೀಮಠದ ಪರಮ ಭಕ್ತರಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಲಿ ಎಂಬುದು ನಮ್ಮ ಸಂಕಲ್ಪ ಕೂಡ ಆಗಿದೆ. ಆ ನಿಟ್ಟಿನಲ್ಲಿ ಅವಕಾಶ ಒದಗಿ ಬರಲಿದೆ ಅಂತ ಭವಿಷ್ಯವನ್ನು ಶ್ರೀ ಕರಿವೃಷಭ ದೇಶಿ ಕೇಂದ್ರದ ಶಿವ ಯೋಗೇಶ್ವರ ಸ್ವಾಮೀಜಿ ಹೇಳುವ ಮೂಲಕ ಡಿಕೆಶಿ ಮುಖ್ಯಮಂತ್ರಿ ಆಗುವ ಕನಸಿಗೆ ಮತ್ತಷ್ಟು ಪುಷ್ಟಿ ಬಂದಿದೆ.
[t4b-ticker]
+ There are no comments
Add yours