ಕ್ಷೇತ್ರದ ಮತದಾರರ, ರೈತರ ಕಷ್ಟ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ: ಶಾಸಕ ಎಂ.ಚಂದ್ರಪ್ಪ

 

ಚಿತ್ರದುರ್ಗ: ಕ್ಷೇತ್ರದ ಮತದಾರರ, ರೈತರ ಕಷ್ಟ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ನಾನು ಮಾಡಿದ ಕೆಲಸ ಮಾತ್ರ ಎಲ್ಲರ ನೆನಪಿನಲ್ಲಿ ಉಳಿಯಬೇಕು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಚಿಕ್ಕಎಮ್ಮಿಗನೂರು ಗ್ರಾಮದಲ್ಲಿ ಮಳೆಯಿಂದಾಗಿ ಕೋಡಿ ಬಿದ್ದಿರುವ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ನೂತನವಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರಜ್ ಉದ್ಘಾಟಿಸಿ ಮಾತನಾಡಿದರು.

ಮಳೆ ನೀರು ಹರಿದು ವ್ಯರ್ಥವಾಗಿ ಹರಿದು ಹೋಗುತ್ತಿದ್ದುದನ್ನು ಗಮನಿಸಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಚಿಕ್ಕಜಾಜೂರಿನಿಂದ ಚಿಕ್ಕಎಮ್ಮಿಗನೂರು ಕೆರೆಗೆ ಮೂವತ್ತು ಕೋಟಿ ರೂ.ಗಳ ಪೈಪ್‍ಲೈನ್ ಮೂಲಕ ನೀರು ತುಂಬಿಸಿದ್ದೇನೆ. ಹೊಳಲ್ಕೆರೆ ಹಾಗೂ ಚಿಕ್ಕಜಾಜೂರಿನಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ಬರುವ 493 ಹಳ್ಳಿಗಳ ಜನರಿಗೆ ಏನು ಅಗತ್ಯವಿದೆ ಎನ್ನುವುದನ್ನು ಅರಿತು ಕೆಲಸ ಮಾಡಿದ್ದೇನೆ. ಎಲ್ಲಾ ಕಡೆ ಟಾರ್ ರಸ್ತೆಗಳಾಗಿವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಇನ್ನು 25 ವರ್ಷಗಳವರೆಗೆ ರೈತರಿಗೆ ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆಯಾಗಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಂದು ಹೋಗುತ್ತವೆ. ಹುಟ್ಟು-ಸಾವಿನ ನಡುವೆ ಪರೋಪಕಾರದ ಕೆಲಸ ಮಾಡಬೇಕು. ಒಂದು ಲಕ್ಷ ಎಂಟು ಸಾವಿರ ಜನ ಮತ ಹಾಕಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕೆಲಸ ಮಾಡದಿದ್ದರೆ ಇದು ಸಾಧ್ಯವಾಗುತ್ತಿತ್ತ ಎಂದು ಮತದಾರರನ್ನೇ ಪ್ರಶ್ನಿಸಿದರು.
ಕ್ಷೇತ್ರದ ಜನರಿಂದ ಛೀ ಥೂ ಅನ್ನಿಸಿಕೊಳ್ಳಲು ನನಗೆ ಇಷ್ಟವಿಲ್ಲ. ತಲೆ ಮೇಲೆ ಟವಲ್ ಹಾಕಿಕೊಂಡು ಓಡಿ ಹೋಗಲು ಆಗುತ್ತ. ಮತದಾರರಿಗೆ ಏನು ಬೇಕು ಎನ್ನುವ ಅರಿವಿಟ್ಟುಕೊಂಡು ಕೆಲಸ ಮಾಡುವ ಜಾಯಮಾನ ನನ್ನದು. ಮತಕ್ಕೆ ಎಷ್ಟು ಬೆಲೆ ಬಂದಿದೆ ಎನ್ನುವುದನ್ನು ನೀವುಗಳು ಮೊದಲು ತಿಳಿದುಕೊಳ್ಳಿ. ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ನೀಡಿದ್ದೇನೆ. ಸರ್ಕಾರಿ ಶಾಲೆಯ ಬಡ ಮಕ್ಕಳು ಶಿಕ್ಷಣವಂತರಾಗಲಿ ಎನ್ನುವ ಕಾರಣಕ್ಕಾಗಿ ನನ್ನ ಅನುದಾನದಲ್ಲಿ ಬಸ್‍ಗಳನ್ನು ಕೊಡಿಸಿದ್ದೇನೆ. ಮುನ್ನೂರಕ್ಕಿಂತ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದೇನೆ. 450 ಕೋಟಿ ರೂ.ವೆಚ್ಚದಲ್ಲಿ ಟಾರ್ ರಸ್ತೆಗಳಾಗಿದೆ. ಕ್ಷೇತ್ರದ ಜನ ಕೇಳಲಿ ಬಿಡಲಿ ಎಲ್ಲವನ್ನು ಕೊಟ್ಟಿದ್ದೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ, ಡಿ.ಸಿ.ಮೋಹನ್, ಯೋಗೇಶ್, ಹಾಲೇಶಪ್ಪ, ಮಲ್ಲಿಕಾರ್ಜುನ್, ಉಮೇಶ್, ಗಿರೀಶ್, ರಾಜಣ್ಣ, ಬಸವಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಸುತ್ತಮುತ್ತಲಿನ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours