ತಳ ಸಮುದಾಯದ ಆಭಿವೃದ್ದಿಗೆ ಮುನ್ನುಡಿ ಬರೆದ ದೇವರಾಜ ಅರಸು: ಶಾಸಕ ಟಿ.ರಘುಮೂರ್ತಿ

 

ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ದಿಯ ಹರಿಕಾರ ಡಿ.ದೇವರಾಜ ಅರಸುರವರು : ಶಾಸಕ ರಘುಮೂರ್ತಿ.

ಚಳ್ಳಕೆರೆ-೨೦ ಕರ್ನಾಟಕ ರಾಜ್ಯದಲ್ಲಿ ಯಾವುದೇ ಸೌಲಭ್ಯ ದೊರೆಯದೆ ವಂಚಿತರಾಗಿ ಅಲಕ್ಷೆಗೊಂಡ ಹಿಂದುಳಿದ ಸಮುದಾಯವನ್ನು ಗುರುತಿಸಿ ಆ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಮುನ್ನುಡಿ ಬರೆದ ಮಹಾನ್ ಪುರುಷ ದಿ. ದೇವರಾಜ ಅರಸುರವರು. ಅರಸುರವರ ಸಂಕಲ್ಪ ಇಂದು ಹಿಂದುಳಿದ ಸಮುದಾಯದ ಶ್ರೇಯೋಭಿವೃದ್ದಿಗೆ ರಕ್ಷಾ ಕವಚವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ಪಾವಗಡ ರಸ್ತೆಯ ಅರಸು ಭವನದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸುರವರ ೧೦೮ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಡಿ.ದೇವರಾಜ ಅರಸುರವರು ಹಿಂದುಳಿದ ವರ್ಗಗಳ ಅಭಿವೃದ್ದಿ ಹರಿಕಾರ ಎಂಬ ಕೀರ್ತಿಗೆ ಪಾತ್ರರಾದರು. ಬೇರೆ ಎಲ್ಲಾ ಸಮುದಾಯಗಳಂತೆ ಹಿಂದುಳಿದ ಸಮುದಾಯವೂ ಸಹ ಸಮಾನತೆಯ ಬಾಳು ಬಾಳಬೇಕೆಂಬ ದಿವ್ಯದೃಷ್ಠಿ ಅವರದ್ದು. ಶೈಕ್ಷಣಿಕ, ಉದ್ಯೋಗ ಹಾಗೂ ವಾಣಿಜ್ಯೋದ್ಯಮ ಕ್ಷೇತ್ರದಲ್ಲೂ ಸಹ ಹಿಂದುಳಿದ ವರ್ಗ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಅವರು ಸಫಲರಾದರು ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದ ತಾಲ್ಲೂಕು ಹಿಂದುಳಿದ ವರ್ಗಗಳ ಅಧಿಕಾರಿ ದಿವಾಕರ, ರಾಜ್ಯದ ಹಿಂದುಳಿದ ಸಮುದಾಯದ ಆರಾಧ್ಯ ದೈವವಾಗಿ ಡಿ.ದೇವರಾಜ ಅರಸುರವರು ಇಂದು ಮಾನ್ಯತೆ ಪಡೆದಿದ್ದಾರೆ. ಅಂದು ಅವರು ಈ ಸಮುದಾಯಗಳ ಬಗ್ಗೆ ನಿರ್ಲಕ್ಷೆö್ಯ ವಹಿಸಿದ್ದರೆ ಈ ಸಮುದಾಯ ಅನೇಕ ಕಷ್ಟಕಾರ್ಪಣ್ಯಗಳಿಗೆ ಈಡಾಗುತ್ತಿತ್ತು. ಈ ಸಮುದಾಯದ ಲಕ್ಷಾಂತರ ಯುವಕರು, ಯುವತಿಯರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಇಡೀ ಹಿಂದುಳಿದ ಸಮುದಾಯವೇ ಸಂಕಷ್ಟಲ್ಲಿರುತ್ತಿತ್ತು. ಇಂತಹ ಬಹುದೊಡ್ಡ ಅಪಾಯವನ್ನು ತಪ್ಪಿಸಿ ಹಿಂದುಳಿದ ಸಮುದಾಯಕ್ಕೆ ಆಶಾಕಿರಣವಾಗಿ ಪ್ರಜ್ವಲಿಸಿದವರು ಡಿ.ದೇವರಾಜ ಅರಸುರವರು ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ರಾಜ್ಯದಲ್ಲಿ ಹಲವಾರು ಸಮುದಾಯಗಳು ವಿವಿಧ ಸೌಲಭ್ಯವನ್ನು ಪಡೆಯುತ್ತಿವೆ. ಅದೇ ರೀತಿ ಸರ್ಕಾರದ ನಿಯಮದಂತೆ ಹಿಂದುಳಿದ ಸಮುದಾಯವೂ ಸಹ ಇಂದು ಅನೇಕ ಸೌಲಭ್ಯಗಳನ್ನು ಪಡೆದು ಸಮಾಜದ ಅಭಿವೃದ್ದಿಯಲ್ಲಿ ಮುಂಚೂಣಿ ಪಾತ್ರ ವಹಿಸಿದೆ. ಹಿಂದುಳಿದ ಸಮುದಾಯಕ್ಕಾಗಿ ವಿದ್ಯಾರ್ಥಿನಿಲಯ, ಶಾಲಾ ಕಾಲೇಜುಗಳು ಆರಂಭಿಸಿ ಸಮುದಾಯದ ಮಕ್ಕಳು ನೆಮ್ಮದಿಯಿಂದ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳುವ ಅವಕಾಶವನ್ನು ಸರ್ಕಾರ ನಿರ್ಮಾಣ ಮಾಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪ್ರಭಾರ ಇಒ ಸಂತೋಷ್, ಪಶುವೈದ್ಯಾಧಿಕಾರಿ ರೇವಣ್ಣ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇAದ್ರ, ಪ್ರೊ.ಶಿವಲಿಂಗಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours