ಭರಮಸಾಗರ ನಾಡ ಕಚೇರಿಗೆ ನೆರಳು ಆಸನ ವ್ಯವಸ್ಥೆಗೆ ಉಪವಿಭಾಧಿಕಾರಿ ಆರ್.ಚಂದ್ರಯ್ಯ ಸಂತಸ

 

ಚಿತ್ರದುರ್ಗ: ತಾಲೂಕಿನ ಭರಮಸಾಗರ ನಾಡ ಕಚೇರಿಯಲ್ಲಿ ಕಚೇರಿಗೆ ಬರುವ ಸಾರ್ವಜನಿಕರಿಗಾಗಿ ನೂತನವಾಗಿ ನೆರಳಿನ ವ್ಯವಸ್ಥೆ ಮತ್ತು ಆಸನ ವ್ಯವಸ್ಥೆ ನಿರ್ಮಿಸಿದ್ದು ಉಪವಿಭಾಗಾಧಿಕಾರಿಗಳು ಆರ್‌. ಚಂದ್ರಯ್ಯ ಅವರು ಉದ್ಘಾಟನೆ ಮಾಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಭರಮಸಾಗರ ನಾಡ ಕಚೇರಿಗೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಇಲ್ಲಿ ನೆರಳು, ನೀರು, ಆಸನ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿ ಇದಕ್ಕೆ ಖಾಸಗಿ ಕಂಪನಿಯ ದಾನಿಗಳ ಮುಖಾಂತರ ನೆರಳಿನ, ಆಸನ , ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು  ನೆರಳಿನ ವ್ಯವಸ್ಥೆಯನ್ನು  ಉಪ ವಿಭಾಗಧಿಕಾರಿಗಳಾದ ಚಂದ್ರಯ್ಯ ಅವರು ಸಂತಸದಿಂದ ಉದ್ಘಾಟಿಸಿದ್ದು ನನಗರ ಸಂತೋಷ ತಂದಿದೆ. ಜನರಿಗೆ ಸಂಯಮದಿಂದ ಕುಳಿತು ಕೆಲಸ ಮಾಡಿಸಿಕೊಂಡ ಹೋಗಲು ಅನುಕೂಲವಾಗಲಿದೆ ಎಂದರು. ಈಗಾಗಲೇ ತುರುವನೂರು, ಹಿರೇಗುಂಟನೂರು, ಚಿತ್ರದುರ್ಗ ತಾಲೂಕು ಕಚೇರಿ ಬಳಿ ಕುಡಿಯುವ ನೀರು, ನೆರಳು, ಆಸನ ವ್ಯವಸ್ಥೆಯನ್ನು ಮಾಡಿದ್ದು ಗ್ರಾಮೀಣ ಭಾಗದ ಜನರು ನೆಮ್ಮದಿಯಿಂದ ನೆರಳಿನಲ್ಲಿ ಕೆಲಸ ನಿರ್ವಹಿಸಿಕೊಂಡು ತೆರಳುವ ವಾತವರಣ ನಿರ್ಮಾಣವಾಗಿದೆ. ಇದಕ್ಕೆ ಸಹಕಾರ ನೀಡಿದ ಕಂಪನಿಯವರಿಗೆ ತುಂಬು ಹೃದಯವಾದ ಧನ್ಯವಾದಗಳು ತಿಳಿಸುತ್ತೇನೆ. ತಾಲೂಕು ಕಚೇರಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿತ್ತು ಅದಕ್ಕೂ ಸುಣ್ಣ ಬಣ್ಣ ಬಳಿಸಿ ಕಟ್ಟಡ ಸುಂದರವಾಗಿ ಕಾಣತ್ತಿದೆ ಎಂದು ತಿಳಿಸಿದರು‌.  ಗ್ರಾಮ ಲೆಕ್ಕಧಿಕಾರಿ ಮತ್ತು ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

 

[t4b-ticker]

You May Also Like

More From Author

+ There are no comments

Add yours