ಶಿವಸಿಂಪಿ ಸಮಾಜಕ್ಕೆ ೨ ಎ ಮೀಸಲು ಕೊಡಬೇಕೆಂಬ ಬೇಡಿಕೆ ನನ್ನ ಗಮನದಲ್ಲಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ ಜು. ೨೪

ಕೇಂದ್ರ ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರ ಶಿವಸಿಂಪಿ ಸಮಾಜಕ್ಕೆ ೨ ಎ ಮೀಸಲಾಯಿತಿ ಕೊಡುತ್ತಿಲ್ಲ,ರಾಜ್ಯಸರ್ಕಾರವೂ ಶಿವಸಿಂಪಿ ಸಮಾಜಕ್ಕೆ ೨ ಎ ಮೀಸಲು ಕೊಡಬೇಕೆಂಬ ಬೇಡಿಕೆ ನನ್ನ ಗಮನದಲ್ಲಿದೆ. ಬೇಡಿಕೆ ಈಡೇರಿಸುವಂತೆ ಕೋರಿ ನಾನೂ ಕೂಡ ಈಗಾಗಲೇ ಸಿಎಂಗೆ ಪತ್ರ ಬರೆದಿದ್ದೇನೆ. ಸಮಾಜ ಕಲ್ಯಾಣ ಸಚಿವರಿಗೂ ಮನವಿ ಮಾಡಿದ್ದೇವೆ. ಎಲ್ಲ ಜಿಲ್ಲೆಗಳಲ್ಲೂ ಸಮಾಜದವರು ಎಲ್ಲ ಶಾಸಕರ ಮೇಲೆ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರ ಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದಿಂದ ಆಯೋಜಿಸಿದ್ದ ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಕಚೇರಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಂಡರೆ ಅನುದಾನ ಕೊಡುವುದಾಗಿ ಹೇಳಿದ ಅವರು, ಕಟ್ಟಡಕ್ಕೆ ಇನ್ನುಳಿದ ಶಾಸಕರು,ಸಂಸದರ ಅನುದಾನವನ್ನೂ ಪಡೆದುಕೊಳ್ಳ ಬೇಕೆಂದು ಸಲಹೆ ನೀಡಿದರು.

ಶಾಸಕ ನಿಧಿಯಿಂದ ಜಿಲ್ಲಾ ಲಿಂಗಾಯತ ಶಿವಸಿಂಪಿ ಸಮಾಜದ ಕಚೇರಿ ಕಟ್ಟಡಕ್ಕೆ ೧೦ ಲಕ್ಷ ರೂ.ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿ ರಾಜ್ಯ ಸರ್ಕಾರ ಶಿವಸಿಂಪಿ ಸಮಾಜಕ್ಕೆ ೨ ಎ ಮೀಸಲಾಯಿತಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಳಿಗೆ ನಿಯೋಗ ತೆರಳೋಣವೆಂದ ಶಾಸಕರು, ಸಮಾಜದ ಏಳಿಗೆಗೆ ದುಡಿಯುತ್ತಿರುವ ಮುಖಂಡ ಕೆಇಬಿ ಷಣ್ಮುಖಪ್ಪ ಅವರ ನಡೆಯನ್ನು ಶ್ಲಾಘಿಸಿದರು.

ಚನ್ನಗಿರಿಯ ಶ್ರೀ ಹಾಲುಸ್ವಾಮಿಯ ಡಾ.ಬಸವ ಜಯಚಂದ್ರ ಶ್ರೀಗಳು ಮಾತನಾಡಿ, ಸಮಾಜದ ಬಗ್ಗೆ ವಿಷಯವನ್ನು ತಿಳಿಯುವಂತ ಕಾರ್ಯಕ್ರಮ ಇದಾಗಿದೆ. ಇಲ್ಲಿ ಬಂದು ಊಟ ಮಾಡಿ ಹೋಗುವುದು ಮಾತ್ರವಲ್ಲದೆ ಇಲ್ಲಿ ಆಗಮಿಸಿದ ಜನತೆ ಏನು ಮಾತನಾಡಿದರು ಎಂಬುದನ್ನು ತಿಳಿದು ಅದರಂತೆ ನಡೆಯುವ ಪ್ರಯತ್ನವನ್ನು ಮಾಡಬೇಕಿದೆ ಇದರಿಂದ ಇಲ್ಲಿಗೆ ಬಂದಿದ್ದು ಸಾರ್ಥಕವಾಗುತ್ತದೆ. ಭಕ್ತಿ ಗುಜರಾತ್‌ನಲ್ಲಿ ಹುಟ್ಟಿ ಮಹರಾಷ್ಟçದಲ್ಲಿ ಅದು ಪ್ರಸಾರವಾದರೆ ಕರ್ನಾಟಕದಲ್ಲಿ ಅದು ಅನುಭವವಾಗಿದೆ. ಶಿವನ ಸಾಕ್ಷತ್ಕಾರ ಮಾಡಿಕೊಂಡವರೆದ್ದರೆ ಶಿವಶಿಂಪಿ ಸಮಾಜದವರು ಎಂದರು.

ಶಿವವನ್ನು ಸಾಕ್ಷಾತ್ಕರಾ ಮಾಡಿಕೊಂಡ ಶಿವಶಿಂಪಿ ಸಮಾಜದವರು ಶಿವನ್ನು ಬೇಡಿದ್ದು ಯಾವುದೇ ಆಸ್ತಿ, ಆಶ್ವರ್ಯವಲ್ಲ, ರಾತ್ರಿ ಹೂತ್ತು ಮಾಡುವ ಕಾಯಕವನ್ನು ನೀಡುವಂತೆ ಹಗಲು ಹೋತ್ತು ಎಲ್ಲರು ಕಾಯಕ ಮಾಡುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಕಾಯಕ ಮಾಡುವಂತ ಕಾಯಕವನ್ನು ನೀಡುವಂತೆ ಬೇಡಿದವರು ಶಿವಶಿಂಪಿ ಸಮಾಜದರು, ಕಾಯಕದಲ್ಲಿ ಕಷ್ಠವಾದ ಕಾರ್ಯಕವನ್ನು ನೀಡುವಂತೆ ಬೇಡಿದವರು ನೀವುಗಳು, ಭಕ್ತಿಯನ್ನು ಪ್ರದರ್ಶನ ಮಾಡಲು ಬರುವುದಿಲ್ಲ, ಅದನ್ನು ಭಗವಂತನಿಗೆ ಸಮರ್ಪಣೆ ಮಾಡಬಹುದಾಗಿದೆ ಎಂದು ಶೀಗಳು ನುಡಿದರು.
ಅಭಿನಂದನೆ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಜನತರಯನ್ನು ಹುರಿದುಂಬಿಸುವ ಕಾರ್ಯವಾಗಿದೆ. ಸಮಾಜ ಮತ್ತು ಸಂಘಟನೆ ಬಲವಾಗಿ ಇರಬೇಕಿದೆ. ಜನ ಜಾಗೃತಿಯನ್ನು ಮೂಡಿಸುವ ಕಾರ್ಯವಾಗಬೇಕಿದೆ ಇದರಿಂದ ಮಾತ್ರ ಸಮಾಜ ಬೆಳೆಯಲು ಸಾಧ್ಯವಿದೆ ಎಂದು ಡಾ.ಬಸವ ಜಯಚಂದ್ರ ಶ್ರೀಗಳು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಇ.ಎಸ್. ಜಯದೇವಮೂರ್ತಿ ವಹಿಸಿದ್ದರು. ಬಾಗಲಕೋಟೆಯ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜನ್ ಎಸ್.ಕೋಲ್ಹಾರ್, ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಎಂ.ಟಿ.ಮಲ್ಲಿಕಾರ್ಜನಯ್ಯ ಹಾಗೂ ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶೈಲಜ ಉಮಾಮಹೇಶ್ವರಪ್ಪ ಗಣಿತ ತಜ್ಞ ಬಸವರಾಜ್ ಭಾಗವಹಿಸಿದ್ದರು.
ಕು.ನಿಖಿತಾ ಸ್ವಾಗತ ನೃತ್ಯ ಮಾಡಿದರೆ, ಶ್ರೀಮತಿ ಮಮತ ಹರೀಷ್ ಸ್ವಾಗತಿಸಿದರು. ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜ ಕಾರ್ಯದರ್ಶಿ ಮಲ್ಲಿಕಾರ್ಜನ್ ಇಟಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಕ್ಷರಪ್ಪ ವಂದಿಸಿದರು. ಶ್ರೀಮತಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು.
ಅಂದು ಬೆಳ್ಳಿಗೆ ನಗರದ ರಂಗಯ್ಯನಬಾಗಿಲ ಬಳಿಯ ಮದಕರಿ ವಿನಾಯಕ ದೇವಸ್ಥಾನದಿಂದ ಶ್ರೀ ಕುಲಗುರು ಶಿವದಾಸಿಮಯ್ಯನವರ ಬಾವಚಿತ್ರದ ಮೆರವಣಿಗೆಯನ್ನು ಮುಂಬೈನ ಶಿವಶಿಂಪಿ ಸಮಾಜದ ಸಂಘಟಕರಾದ ನಾಗೇಶ್ ವಿ.ಅಥಣಿ ಚಾಲನೆ ನೀಡಿದರು.ವೀರಗಾಸೆ, ನಾದಸ್ವರ ಸೇರಿದಂತೆ ಇತರೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ದ್ವೀತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

[t4b-ticker]

You May Also Like

More From Author

+ There are no comments

Add yours