ವಿದ್ಯಾರ್ಥಿ ಜೀವನದಲ್ಲಿ ದೇಶ ಪ್ರೇಮ ಬೆಳೆಸಿಕೊಳ್ಳಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಯುವ ಸಮೂಹ ವಿದ್ಯಾರ್ಥಿ ಜೀವನದಲ್ಲಿ ದೇಶ ಮೊದಲು ಎಂಬ ಭಾವನೆ  ಬೆಳೆಸಿಕೊಳ್ಳಬೇಕು ಎಂದು ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕ್ರೀಡಾ, ಸಾಂಸ್ಕೃತಿಕ,ರೋವರ್ಸ್ ಹಾಗೂ ಎನ್‌.ಎಸ್.ಎಸ್ ಘಟಕಗಳ ಸಮರೋಪ ಸಮಾರಂಭವನ್ನು ಉದ್ಘಾಟಸಿ  ಮತ್ತು ಲ್ಯಾ ಮಾತನಾಡಿದರು‌.
ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಸೇರಿ ಎಲ್ಲಾ ಕ್ಷೇತ್ರದಲ್ಲಿ ಯುವ ಸಮೂಹ ಭಾಗವಹಿಸಬೇಕು.ನಮ್ಮ ದೇಶ ಬಲಿಷ್ಠವಾಗಿ ಬೆಳೆಯುತ್ತಿದೆ‌. ಸಾಧನೆ ಎಂಬುದು ಸಾಧಕನ ಸ್ವತ್ತು ಒರತು ಸೋಮಾರಿಯ ಸತ್ತಲ್ಲ. ಪ್ರತಿಯೊಬ್ಬರು ಸಹ ಒಂದಲ್ಲ ಒಂದು ಕಷ್ಟದಿಂದ ಬದುಕುತ್ತಿರುತ್ತಾರೆ.ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ವಹಿಸುತ್ತಾರೆ‌. ಇದನ್ನು ಅರಿತು ಮಕ್ಕಳು ವಿಧ್ಯಾಭ್ಯಾಸ ಮಾಡಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದರೆ ಸರ್ಕಾರಿ  ಉದ್ಯೋಗ ಪಡೆಯುವ ಮೂಲಕ ತಮ್ಮ  ಕುಟುಂಬದ ಆದಾಯ ಹೆಚ್ಚಿಸಬಹದು. ತಂದೆ ತಾಯಿಯನ್ನು ಸುಖವಾಗಿ ಹಾರೈಕೆ ಮಾಡದಬಹುದು. ಎನ್.ಎಸ್.ಎಸ್ ಮೊದಲಿನಿಂದಲೂ ಶಿಸ್ತಿಗೆ ಹೆಸರಾಗಿದೆ.ಅಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ತಿಳಿಸುತ್ತಾರೆ‌.ವಿದ್ಯಾರ್ಥಿಗಳು ನಮ್ಮ ದೇಶ ಮೊದಲು ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ದೇಶದಲ್ಲಿ ಬದಲಾವಣೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿತದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.  ನಾನು ನನ್ನ ಅನುದಾನದಲ್ಲಿ4 ಹೊಸ ಕೊಠಡಿ, ಕೆಎಂ.ಆರ್.ಸಿ ಯಲ್ಲಿ  12 ಕೊಠಡಿಗೆ ಎಲ್ಲಾ ಪ್ರಕ್ರಿಯೆ ಮುಗಿದಿದೆ ಎಂದರು.
ಬಾಲಕರ ಕಾಲೇಜು ವಿದ್ಯಾರ್ಥಿನಿಯರು ಸಾಕಷ್ಟು ಶ್ರಮದಿಂದ ಅಧ್ಯಯನ ಮಾಡಿ  ಕಾಲೇಜಿಗೆ ಉತ್ತಮ ಫಲಿತಾಂಶ ತಂದು ನಮಗೆಲ್ಲ  ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ‌. ಅತಿ ಹೆಚ್ಚು ಅಂಕ ಪಡದ  ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಮತ್ತು ಪರಿಶಿಷ್ಟ ಜಾತಿ -15, ಪರಿಶಿಷ್ಟ ಪಂಗಡದ -10  ವಿದ್ಯಾರ್ಥಿ ಸೇರಿ  ಒಟ್ಟು 25 ವಿದ್ಯಾರ್ಥಿಗಳಿಗೆ ಲ್ಯಾಪ್ ವಿತರಣೆ ಮಾಡಿದ್ದು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡ ಉನ್ನತ ಶಿಕ್ಷಣದ ಕಡೆ ಒತ್ತು ನೀಡಿ ಎಂದರು.
ವಿಶ್ರಾಂತ ಪ್ರಾಧ್ಯಪಕ ಡಾ.ಲೋಕೇಶ ಅಗಸನಕಟ್ಟೆ ಮಾತನಾಡಿ   ವಿದ್ಯಾರ್ಥಿಗಳು ಊಟ ಬಿಟ್ಟರು ಮೊಬೈಲ್ ಬಿಡುತ್ತಿಲ್ಲ. ಮೊಬೈಲ್ ಜ್ಞಾನ ಹೆಚ್ಚಿಸುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಬಾರದು ಎಂದರು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಮುಖ್ಯ. ಬಡತನದಲ್ಲಿ ಸಾಧನೆ ಮಾಡಿದವರ ಸಂಖ್ಯೆ ಹೆಚ್ಚು ಪ್ರಸ್ತುತ ಜಗತ್ತಿನಲ್ಲಿ ಎಲ್ಲಾವೂ ಲಭ್ಯ ಆದರೆ ಮಿತಿಯಾಗಿ ಬಳಸಿದರೆ ಹೆಚ್ಚು ಅನುಕೂಲ ಎಂದರು‌.
ಡಾ.ಬಿ.ಕೃಷ್ಣಪ್ಪ ಮಾತನಾಡಿ ಕಳೆದ ವರ್ಷದಲ್ಲಿ  ಸಾಲಿನಲ್ಲಿ ಕಾಲೇಜಿನ 240 ವಿದ್ಯಾರ್ಥಿಗಳು ಹೆಚ್ಚುವರಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.  ಬಾಲಕರ ಕಾಲೇಜು ಅಂದರೆ ಕೇವಲ ಯುವಕರಿಗೆ ಸಿಮೀತವಾಗದೇ  ಇಲ್ಲಿ  250 ವಿದ್ಯಾರ್ಥಿನಿಯರು ದಾಖಲಾಗಿರುವುದು ವಿಶೇಷವಾಗಿದೆ. ಶಾಸಕರು ವಿವಿಧ ಅನುದಾನದಲ್ಲಿ 4 ಹೊಸ ಕೊಠಡಿಗೆ ಹಣ ನೀಡಿದ್ದಾರೆ  ಮತ್ತು  ಕೆಎಂಆರ್ಸಿ ಯೋಜನೆಯಲ್ಲಿ 12 ಕೊಠಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಆಗಿದ್ದಾರೆ‌. ಪಿಯುಸಿ ಅಧ್ಯಯನಕ್ಕೆ  ಒಂದು ಪ್ರತ್ಯೋಕ  ಕಟ್ಟಡಕ್ಕೆ ಅನುದಾನ ನೀಡಿ ಎಂದು ಶಾಸಕರಿಗೆ ಮನವಿ ಮಾಡಿದರು. ಜೊತೆಗೆ ತಾವು  ಸಹಕಾರ ನೀಡಿದರೆ ಜಿಲ್ಲೆಗೆ ಮತ್ತು ನಿಮಗೆ ಕೀರ್ತಿ ತರುವ ಜವಬ್ದಾರಿ ನಮ್ಮದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ  ಪದವಿ ಪೂರ್ವ ಶಿಕ್ಷಣ ಇಲಾಖೆ  ಉಪ ನಿರ್ದೇಶಕ ಎನ್‌.ರಾಜು,  ಸಾಹಿತಿಗಳಾದ ಲೋಕೇಶ್ ಅಗಸನಕಟ್ಟೆ,    ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷೆ ಕೊಲ್ಲಿಲಕ್ಷ್ಮಿ, ಸಮಾಜ ಸೇವಕರಾದ ಸೈಯದ್ ಅಖಿಲ್ ಷಾ ಹುಸೇನ್. ಪ್ರೌಢ ಶಾಲಾ ಮುಖ್ಯೋಪಾಧ್ಯಾ ರುದ್ರಮುನಿ, ಉಪನ್ಯಾಸಕರಾದ ದೊಡ್ಡಪ್ಪ, ಹೇಮಂತ್, ಡಾ.ಬಿ.ಕೃಷ್ಣಪ್ಪ ,ಗುರುನಾಥ್ ಇದ್ದರು.
[t4b-ticker]

You May Also Like

More From Author

+ There are no comments

Add yours