ಬೆಳೆ ವಿಮೆ ಪರಿಹಾರ ಎಲ್ಲಾ ರೈತರಿಗೆ ಸಿಗುತ್ತದೆ, ರೈತರು ಆತಂಕ ಪಡಬೇಡಿ:ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: ತಾಲೂಕಿನಲ್ಲಿ 46374  ಹೆಕ್ಟರ್ ಕೃಷಿಗೆ ಸಂಬಂಧಿಸಿದ ಶೇಂಗಾ ಬೆಳೆ, ಸುಮಾರು  8,196 ಹೆಕ್ಟರ್ ಈರುಳ್ಳಿ ಹಾಗೂ ಇತರ ತೋಟಗಾರಿಕಾ ಬೆಳೆ ನಷ್ಟ ಸಂಭವಿಸಿದ್ದು  ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಎಲ್ಲಾ ಬೆಳೆಗಳ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ಬರದಿಂದ ಸಾಗಿದೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಭರವಸೆ ನೀಡಿದರು.

 

ಇಂದು ನಗರದ ನೆಹರು ವೃತ್ತದಲ್ಲಿ ಸೋಮ ಗುದ್ದು ರಂಗಸ್ವಾಮಿ ನೇತೃತ್ವದ ರೈತ ಬಂಧುಗಳು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ ತಾಲೂಕಿನಾದ್ಯಂತ ‌ಸಾವಿರಾರು ರೈತರು ಬೆಳೆ ವಿಮೆಗೆ ಸಂಬಂಧಿಸಿದಂತೆ ಕಳೆದ ಸಾಲಿನಲ್ಲಿ ಎಲ್ಲ ರೈತರಿಗೂ ಬೆಳೆ ವಿಮೆ ಪಾವತಿಯಾಗಿದೆ.  ಈ ಸಾಲಿನಲ್ಲಿ ಸಹ   ಯಾವುದೇ ಬೆಳೆ ವಿಮೆ ಕೈ  ತಪ್ಪದಂತೆ  ಕ್ರಮವಹಿಸಲಾಗಿದೆ. ರೈತರ ನೀರಾವರಿಯ ಪಂಪ್ ಸೆಟ್  ಖಾಸಗೀಕರಣ ಕುರಿತಾದ ಯಾವುದೇ ಪ್ರಸ್ತಾಪ ಸರ್ಕಾರದಿಂದ  ತಾಲೂಕ ಆಡಳಿತದ ಬಂದಿಲ್ಲ .

ಯಾವುದೇ ರೈತರು ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ  ದಾಖಲಾತಿಗಳನ್ನು ಹಿಡಿದುಕೊಂಡು ಪ್ರತಿಯೊಂದು ಕಚೇರಿಯನ್ನು ಅಲೆಯುವ ಅಗತ್ಯವಿಲ್ಲ. ಪಾರದರ್ಶಕವಾಗಿ ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಪರಿಹಾರ ಸಾಫ್ಟ್ವೇರ್ ನಲ್ಲಿ ವಿವರವನ್ನು ದಾಖಲಿಸುವ ಕಾರ್ಯ ನಡೆಯುತ್ತಿರುವುದರಿಂದ ರೈತರು ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡಿದರು.

ಪ್ರತಿಯೊಂದು ಸಮಸ್ಯೆ ಮತ್ತು ಕಷ್ಟಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾಲಮಿತಿ ಒಳಗೆ ಸ್ಪಂದಿಸಿ ಕೆಲಸ ಮಾಡಲಾಗುತ್ತದೆ. ರೈತರಿಗೂ ಈ ಇಲಾಖೆಗೂ ಅವಿನಭಾವ ಸಂಬಂಧವಿದೆ. ರೈತರಿಗೆ ಸಮಸ್ಯೆಗೆ ನೇರಬಾಗಿ ನನಗೆ ಸಂಪರ್ಕಿಸಿ ಎಂದರು.

ಸೋಮ ಗುದ್ದು ರಂಗಸ್ವಾಮಿ ಮಾತನಾಡಿ ರೈತರು ನಿರಂತರವಾಗಿ ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟ ವಿಮೆ ನಷ್ಟ ಮುಂತಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ರೈತರ ಪಂಪ್ ಸೆಟ್ ಖಾಸಗಿಕರಣ ಕುರಿತಾದ ಪ್ರಸ್ತಾವವು ಕೂಡ ಸರ್ಕಾರದ ಮುಂದಿದೆ ಯಾವುದೇ ಕಾರಣಕ್ಕೂ ಈ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ.  ರೈತರಿಗೆ ಮಾರಕವಾಗುವಂತಹ ಯಾವುದೇ ತೀರ್ಮಾನಗಳನ್ನು ಸರ್ಕಾರವು ತೆಗೆದುಕೊಳ್ಳಬಾರದೆಂದು ಮನವಿ ಮಾಡಿದರು.

ತಾಲೂಕಿನ ಇಡೀ ರೈತ ಸಮೂಹವು ಮುಷ್ಕರದಲ್ಲಿ ಭಾಗಿಯಾಗಿದ್ದು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ ವ್ಯವಸ್ಥೆ ಕೈಗೊಳ್ಳಲಾಯಿತು.

[t4b-ticker]

You May Also Like

More From Author

+ There are no comments

Add yours