ಎಮ್ಮೆಹಟ್ಟಿ ಕೆರೆ ನೀರು ಸುಗಮವಾಗಿ ಹರಿಯಲು ಶೀಘ್ರ ವ್ಯವಸ್ಥೆ: ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

 

ಚಿತ್ರದುರ್ಗ:ಎಮ್ಮೆಹಟ್ಟಿಕೆರೆ ನೀರು ಜನರಿಗೆ ತೊಂದರೆ ಆಗದಂತೆ  ‌ಸುಗಮವಾಗಿ ಹರಿಯಲು ಎಲ್ಲಾ ವ್ಯವಸ್ಥೆವನ್ನು ಮಾಡಿ ಶೀಘ್ರ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಇಂದು  ತಹಶೀಲ್ದಾರ್  ಅಧ್ಯಕ್ಷತೆಯಲ್ಲಿ ಎಮ್ಮೆಹಟ್ಟಿ ಕೆರೆಯ ವಿಚಾರಕ್ಕೆ ಸಂಬಂಧಿಸಿದಂತೆ ಎಮ್ಮೆಹಟ್ಟಿ ಮತ್ತು  ,ಹಂಪನೂರು ಗ್ರಾಮಸ್ಥರು ಮತ್ತು ಸಂಬಂಧಿಸಿದ ಇಂಜಿನಿಯರ್ ಸಭೆ ಕರೆಯಲಾಗಿತ್ತು.
ಸಾರ್ವಜನಿಕರು ಕೆರೆ ತುಂಬಿದ್ದು ನೀರು ಹೋಗಲು ಜಾಗ ಇಲ್ಲ ಹೆದ್ದಾರಿ ಅವರು ಮಣ್ಣು ಹಾಕಿ ಮುಚ್ಚಿದ್ದಾರೆ, ಜಮೀನುಗಳಲ್ಲಿ ನೀರು ತುಂಬಿಕೊಂಡಿದೆ. ಹೇಳಿದರು ಯಾರು ಸ್ಪಂದಿಸಲ್ಲ  ಎಂಬ ವಾದ ಮಂಡಿಸಿದರು. ಮತ್ತು  ರಾಷ್ಟ್ರೀಯ  ಹೆದ್ದಾರಿ‌ NH4  ರ ನವರು‌ ನಮ್ಮಿಂದ ಆ ರೀತಿ ಆಗಿಲ್ಲ ಎಂದರು. ಇದಕ್ಕೆ ಮಧ್ಯ ಪ್ರವೇಶಿಸಿದ ತಹಶೀಲ್ದಾರ್   ಎರಡು ಕಡೆಯವರಿಗೆ  ಸಮಸ್ಯೆ ಸರಿಯಾಗಬೇಕು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದರು.
ಒಂದು ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಮಣ್ಣು ಹಾಕಿದ್ದರೆ ಕೂಡಲೇ ತೆರವು ಮಾಡಬೇಲು ಎಂದು ಕಂಪನಿಯವರಿಗೆ ಸೂಚಿಸಿದರು. ಪಿಎನ್ ಸಿ ನೀರು ಸರಾಗವಾಗಿ ಹರಿಯಲು ಎಲ್ಲಾ ವ್ಯವಸ್ಥೆ ರೈತರಿಗೆ ಮಾಡಿಕೊಡುತ್ತೇನೆ ಎಂದು ತಹಶೀಲ್ದಾರ್ ಸಮ್ಮುಖದಲ್ಲಿ ಒಪ್ಪಿಕೊಳ್ಳುವ ಮೂಲಕ‌ ತಹಶೀಲ್ದಾರ್ ಸತ್ಯನಾರಾಯಣ ಅವರು ಜನರ ಮತ್ತು ಪಿಎನ್ ಸಿ ನಡುವಿನ ಸಮಸ್ಯೆಗೆ ಇಬ್ಬರಿಗೂ ಶಾಂತಿ ಮಂತ್ರ ಪಾಠ ಹೇಳಿ ಪರಿಹಾರ ಹುಡಕುವಲ್ಲಿ ಯಶಸ್ವಿಯಾದರು.
ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ  ಅಧಿಕಾರಿಗಳು, PRED ಇಂಜಿನಿಯರ್ ಪಾತಪ್ಪ ,  ಉಪತಹಶೀಲ್ದಾರ್ ,   ಎಮ್ಮೆಹಟ್ಟಿ , ಹಂಪನೂರು ಗ್ರಾಮಸ್ಥರು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours