ಬೆಳೆವಿಮೆ ಪರಿಹಾರ ವಿತರಣೆ ಅವ್ಯವಹಾರ :ಶಾಸಕ ಟಿ.ರಘುಮೂರ್ತಿ ಪ್ರಶ್ನೆ

 

ಬೆಳಗಾವಿ ಸುವರ್ಣವಿಧಾನಸೌಧ

ಡಿ.06: ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಉಂಟಾದ ಅವ್ಯವಹಾರದ ಬಗ್ಗೆ ಶಾಸಕ  (MLA) ಟಿ.ರಘುಮೂರ್ತಿ ಅವರು ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಕೃಷಿ ಸಚಿವರನ್ನು ಪ್ರಶ್ನಿಸಿದ್ದಾರೆ.

ಬುಧವಾರ ಶಾಸಕರ 175ನೇ ಚುಕ್ಕೇ ಗುರುತಲ್ಲದ ಪ್ರಶ್ನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲಿಖಿತವಾಗಿ ಉತ್ತರ ನೀಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಪಿ.ಮಹಾದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿತ ಖಾತೆದಾರರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ರೈತರು ದೂರು ನೀಡಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನಲ್ಲಿ 68717 ಹೆಕ್ಟೇರ್ ಪ್ರದೇಶದ 14 ವಿವಿಧ ಅಧಿಸೂಚಿತ ಬೆಳೆಗೆ ಒಟ್ಟು 44852 ಬೆಳೆವಿಮೆ ನೊಂದಣಿ ಪ್ರಸ್ತಾವನೆಗಳು ನೋಂದಣಿಯಾಗಿವೆ. ಇದಲ್ಲದೆ ತಾಲ್ಲೂಕಿನ ಬೀಳು ಭೂಮಿ ಹಾಗೂ ನೋಂದಾಯಿತ ಬೆಳೆಯಲ್ಲದ ಬೇರೆ ಬೆಳೆಗಳಿಗೆ 80 ಪ್ರಕರಣಗಳಲ್ಲಿ ರೂ.67 ಲಕ್ಷಕ್ಕೂ  ಹೆಚ್ಚೂ ಬೆಳೆವಿಮೆ ಹಣ ದುರುಪಯೋಗವಾಗಿದೆ. ಮೂಲ ಖಾತೆದಾರರ ಬದಲಿಗೆ ಬೇರೆಯೊಬ್ಬರನ್ನು ನೋಂದಣಿ ಮಾಡಿಸಿದ 2 ಪ್ರಕರಣಗಳಲ್ಲಿ ರೂ.1.90 ಲಕ್ಷ ಬೆಳೆ ವಿಮೆಹಣ ಪಡೆದ ವಂಚಿಸಲಾಗಿದೆ ಈ ಕುರಿತು ಜಿಲ್ಲಾಧಿಕಾರಿ ತನಿಖಾ ವರದಿ ನೀಡಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours