ಭಾರತ ಕ್ರಿಕೆಟ್ ಗೆ ಇಬ್ಬರು ದಿಗ್ಗಜರು ವಿದಾಯ

ನವದೆಹಲಿ, ಆ.15- ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂದು ನಿವೃತ್ತಿ ಘೋಷಿಸಿದ್ದಾರೆ.
ಎಂ.ಎಸ್ ಧೋನಿ ಅವರ ಜೊತೆಗೆ ಮತ್ತೊಬ್ಬ ಕ್ರಿಕೆಟಿಗ ಸುರೇಶ್ ರೈನಾ ಅವರೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಹೀಗಾಗಿ ಧೋನಿ ಅವರ ಮೊದಲ ಇನ್ನಿಂಗ್ಸ್ ಪತನವಾಗಿ ಸುರೇಶ್ ರೈನಾ ಅವರ ವಿಕೆಟ್ ಅನ್ನೂ‌ ಭಾರತ ಕಳೆದುಕೊಂಡಂತಾಗಿದೆ.

ಎಂ.ಎಸ್ ದೋನಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಕ್ರಿಕೆಟ್ ನಲ್ಲಿ ಧೋನಿ ಯುಗಾಂತ್ಯವಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಟಿ-20ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಟೆಸ್ಟ್ ಕ್ರಿಕೆಟ್ಗೆ ವರ್ಷಗಳೇ ಕಳೆದಿತ್ತು. ಏಕದಿನ ಮತ್ತು ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಎಂಎಸ್ ಧೋನಿ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ.
ಹಲವು ದಿನಗಳಿಂದ ಎಂಎಸ್ ಧೋನಿ ಅವರು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು ಆದರೆ ಅವರ ಖಚಿತಪಡಿಸಿಲ್ಲ ಇದೀಗ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

2007ರಲ್ಲಿ ಭಾರತಕ್ಕೆ ತಮ್ಮ ನಾಯಕತ್ವದಲ್ಲಿ ಟಿ-20ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಿರೀಟವನ್ನು ಗೆದ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು 2007 ರಲ್ಲಿ ಟಿ-20ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ, ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರಾಭವಗೊಂಡಿತು.
2015 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಐದು ವರ್ಷಗಳ ಬಳಿಕ ಇದೀಗ ಮತ್ತು ಟಿ.20-ಮತ್ತು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಟೆಸ್ಟ್ ನಲ್ಲಿ ಮಹಿ: ಟೆಸ್ಟ್ ಕ್ರಿಕೆಟ್ನಲ್ಲಿ 90 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ ಅವರು 4876 ರನ್ ಗಳಿಸಿದ್ದಾರೆ. ಈ ಪೈಕಿ ಆರು ಶತಕ 33 ಅರ್ಧಶತಕ ಬಾರಿಸಿದ್ದಾರೆ. 224 ಗರಿಷ್ಠ ರನ್ ಬಾರಿಸಿದ್ದು 38.09 ಸರಾ ಸರಿ ಹೊಂದಿದ್ದಾರೆ.

ಏಕ ದಿನ ಕ್ರಿಕೆಟ್: ಏಕದಿನ ಕ್ರಿಕೆಟ್ನಲ್ಲಿ 350 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ಅವರು 10773 ರನ್ ಗಳಿಸಿದ್ದಾರೆ. ಈ ಪೈಕಿ 10 ಶತಕ ಹಾಗು 73 ಅರ್ಧ ಶತಕ ಬಾರಿಸಿದ್ದಾರೆ.183 ಗರಿಷ್ಠ ರನ್ ಆಗಿದೆ.‌ಒಂದು ವಿಕೆಟ್ ಕೂಡ ಪಡೆದಿದ್ದಾರೆ.
ಶೇ.50.53 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಟಿ- 20‌‌: ಟಿ- ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ‌ 98 ಪಂದ್ಯಗಳನ್ನಾಡಿದ್ದಾರೆ. 37.60 ಸರಾಸರಿಯಲ್ಲಿ 1617 ರನ್ ಗಳಿಸಿದ್ದಾರೆ.ಎರಡು ಅರ್ದ ಶತಕ ಗಳಿಸಿದ್ದು ಗರಿಷ್ಠ 56 ರನ್ ಬಾರಿಸಿದ್ದಾರೆ.

ಐಪಿಎಲ್: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ಆರಂಭದಿಂದಲೂ ನಾಯಕರಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ಹಲವು ಬಾರಿ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ.
190 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ 4432 ರನ್ ಗಳಿಸಿದ್ದಾರೆ.ಶೆ.42.02 ಸರಾಸರಿ .

ಟೆಸ್ಟ್ ನಲ್ಲಿ ಮಹಿ:ಟೆಸ್ಟ್ ಕ್ರಿಕೆಟ್ನಲ್ಲಿ 90 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ ಅವರು 4876 ರನ್ ಗಳಿಸಿದ್ದಾರೆ. ಈ ಪೈಕಿ ಆರು ಶತಕ 33 ಅರ್ಧಶತಕ ಬಾರಿಸಿದ್ದಾರೆ. 224 ಗರಿಷ್ಠ ರನ್ ಬಾರಿಸಿದ್ದು 38.09 ಸರಾ ಸರಿ ಹೊಂದಿದ್ದಾರೆ.

ಏಕ ದಿನ ಕ್ರಿಕೆಟ್: ಏಕದಿನ ಕ್ರಿಕೆಟ್ನಲ್ಲಿ 350 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ಅವರು 10773 ರನ್ ಗಳಿಸಿದ್ದಾರೆ. ಈ ಪೈಕಿ 10 ಶತಕ ಹಾಗು 73 ಅರ್ಧ ಶತಕ ಬಾರಿಸಿದ್ದಾರೆ.183 ಗರಿಷ್ಠ ರನ್ ಆಗಿದೆ.‌ಒಂದು ವಿಕೆಟ್ ಕೂಡ ಪಡೆದಿದ್ದಾರೆ.
ಶೇ.50.53 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಟಿ- 20‌‌: ಟಿ- ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ‌ 98 ಪಂದ್ಯಗಳನ್ನಾಡಿದ್ದಾರೆ. 37.60 ಸರಾಸರಿಯಲ್ಲಿ 1617 ರನ್ ಗಳಿಸಿದ್ದಾರೆ.ಎರಡು ಅರ್ದ ಶತಕ ಗಳಿಸಿದ್ದು ಗರಿಷ್ಠ 56 ರನ್ ಬಾರಿಸಿದ್ದಾರೆ.

ಐಪಿಎಲ್: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ಆರಂಭದಿಂದಲೂ ನಾಯಕರಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ಹಲವು ಬಾರಿ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ.
190 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ 4432 ರನ್ ಗಳಿಸಿದ್ದಾರೆ.ಶೆ.42.02 ಸರಾಸರಿ ಹೊಂದಿದ್ದಾರೆ

[t4b-ticker]

You May Also Like

More From Author

+ There are no comments

Add yours