ರಾಜ್ಯದಲ್ಲಿ 9575  ಜನ ಬಿಡುಗಡೆ, 9319 ಕರೋನಾ, 95 ಸಾವು ಎಲ್ಲಿ ಎಷ್ಟು ಸಾವು ನೋಡಿ ವಿವರ.

 

ಬೆಂಗಳೂರು: ರಾಜ್ಯದಲ್ಲಿ ಭಾನುವಾರವೂ ಮಹಾಮಾರಿಕರೋನಾ ಅಟ್ಟಹಾಸಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ  95  ಜನ ಸಾವನ್ನಪ್ಪಿದ್ದಾರೆ.

ಮತ್ತೆಹೊಸದಾಗಿ   9319 ಜನರಿಗೆಸೋಂಕುಹರಡಿದ್ದರಿಂದ ರಾಜ್ಯದಒಟ್ಟುಸೋಂಕಿತರ 3,98, 551ಕ್ಕೆಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 9575ಜನ ಬಿಡುಗಡೆಗೊಂಡಿದ್ದು, ಈವರೆಗೆ 2,92,873 ಒಟ್ಟು ಜನ ಗುಣಮುಖರಾಗಿದ್ದು,  99266    ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 775 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಭಾನುವಾರವೂ 95 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 6393ಕ್ಕೆ ಏರಿಕೆಯಾದಂತಾಗಿದೆ.

ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ಬರೋಬ್ಬರಿ 2824   ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ ಬಾಗಲಕೋಟೆ 180, ಬಳ್ಳಾರಿ 396, ಬೆಳಗಾವಿ 427, ಬೆಂಗಳೂರು ಗ್ರಾಮಾಂತರ 93, ಬೀದರ 83, ಚಾಮರಾಜನಗರ 41, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 239, ಚಿತ್ರದುರ್ಗ 261, ದಕ್ಷಿಣ ಕನ್ನಡ 326,  ದಾವಣಗೆರೆ 221, ಧಾರವಾಡ 311, ಗದಗ 194, ಹಾಸನ 324, ಹಾವೇರಿ 295, ಕಲಬುರಗಿ 165, ಕೊಡಗು 38, ಕೋಲಾರ 119, ಕೊಪ್ಪಳ 198, ಮಂಡ್ಯ 230, ಮೈಸೂರು 686, ರಾಯಚೂರು 187, ರಾಮನಗರ 68, ಶಿವಮೊಗ್ಗ 329, ತುಮಕೂರು 304, ಉಡುಪಿ 217, ಉತ್ತರಕನ್ನಡ 247, ವಿಜಯಪುರ 96, ಯಾದಗಿರಿ 139 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದುರಾಜ್ಯಆರೋಗ್ಯಮತ್ತುಕುಟುಂಬಕಲ್ಯಾಣಇಲಾಖೆಮಾಹಿತಿನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ  38, ಬಳ್ಳಾರಿ ಹಾಗೂ ಬೆಳಗಾವಿ ತಲಾ 8, ಧಾರವಾಡ 6, ಮೈಸೂರು 5,  ಶಿವಮೊಗ್ಗ, ತುಮಕೂರು ತಲಾ ಕೊಪ್ಪಳ 4, ಶಿವಮೊಗ್ಗ , ತುಮಕೂರು ತಲಾ 3, ಗದಗ , ಚಿಕ್ಕಮಗಳೂರು ಹಾಸನ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ತಲಾ 2,   ಬೀದರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಡಗು, ಮಂಡ್ಯ,  ಉತ್ತರಕನ್ನಡ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

[t4b-ticker]

You May Also Like

More From Author

+ There are no comments

Add yours