ಕಾಂಗ್ರೆಸ್ ದುರಾಡಳಿತ ಸ್ವ ಪಕ್ಷದಿಂದಲೇ ಬಹಿರಂಗ:ಸಿ.ಟಿ.ರವಿ

 

chithradurga: ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿನ ದುರಾಡಳಿತದ ಸತ್ಯಾಸತ್ಯತೆ ಸ್ವ ಪಕ್ಷದವರಿಂದಲೇ ಬಹಿರಂಗವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi)  ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದಲ್ಲಿ ದೇಶ ಬೇಕು ಎನ್ನುವ ಜನರೇ ಹೆಚ್ವಾಗಿದ್ದು, ರಾಜ್ಯದಲ್ಲಿ ಕಾಂಗ್ರೇಸ್ ನಡೆಸುತ್ತಿರುವ ದುರಾಡಳಿತದಿಂದ ಬೆಸತ್ತು ಹೋಗಿದ್ದಾರೆ. ಇದರಂದಲೇ ಸ್ವ ಪಕ್ಷದವರು ನಡೆಸುತ್ತಿರುವ ದುರಾಡಳಿತದ ಸತ್ಯಾಸತ್ಯತೆಗಳ ಬಗ್ಗೆ ನಮಗೆ ಮಾಹಿತಿ ನೀಡಿ, ಅವುಗಳನ್ನು ತಡೆಯುವ ಯತ್ನಕ್ಕೆ ಕೈ ಜೋಡಿಸುತ್ತಿದ್ದಾರೆ. ಆದರೆ ಅಲ್ಲಿನ ಬೆರಳೆಣಿಕೆ ಮಂದಿ‌ ಮಾತ್ರ ತಮ್ಮ ಬೆಳೆಕಾಳು ಬೆಯ್ಯಿಸ್ಸಿಕೊಳ್ಳಲು ಜನ ವಿರೋಧಿ, ದೇಶ ವಿರೋಧಿ ಹೇಳಿಕೆಗಳನ್ನು‌ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಅಬಕಾರಿ ಡಿಸಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂಬ ಸಚಿವ ಈಶ್ವರ ಖಂಡ್ರೇ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯಿಸಿ, ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂಬುದು ತಡವಾಗಿ ಆದರೂ ತಿಳಿದು ಖಂಡ್ರೆ ಈಗ ಸತ್ಯ ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ಕಾಂಗ್ರೇಸ್ ನವರು ಸತ್ಯ ಹೇಳುವ ಧೈರ್ಯವನ್ನು ಇತ್ತೀಚೆಗೆ ಕಳೆದುಕೊಂಡಿದ್ದಾರೆ ಎಂದು ಲೇವಡಿ‌ ಮಾಡಿದ ಅವರು, ಡಿ.ಕೆ.ಶಿವಕುಮಾರ್ ಸ್ಟೈಲ್ ಎದರಿಸಿ ರಾಜಕೀಯ ಮಾಡುವ ಸ್ಟೈಲ್ ಆಗಿದೆ‌. ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲೂ ಎದುರಿಸಿ ರಾಜಕಾರಣ ಮಾಡಲು ಆಗುವುದಿಲ್ಲ ಎಂಬುದು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರಿನ ಕೆಲವರ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ರಾಜೀವ್ ತಾರನಾಥ್ ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಪರ್ಸೆಂಟೆಜ್ ಲೆಕ್ಕದಲ್ಲಿ ಕಲಾವಿದರ ಬಳಿ ಹಣ ಕೇಳಿದ ಕುಖ್ಯಾತಿ ಕಾಂಗ್ರೇಸ್ ಸರ್ಕಾರದ್ದಾಗಿದೆ. ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಆದರೂ ಕೂಡ ಸರ್ಕಾರ ತಮಗೆ ಸಂಬಂಧಿಸಿದಲ್ಲ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ, ತಂಗಡಗಿ ಇದ್ದ ಮೂವರಲ್ಲಿ ಕದ್ದವರಾರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪಿ.ಎಂ ಸ್ವ-ನಿಧಿ: ಸಾಲ ಸೌಲಭ್ಯಕ್ಕೆ ಅರ್ಜಿ

ಬರಗಾಲದಲ್ಲಿ ಈ ಸಂದರ್ಭದಲ್ಲಿ ಐಟಿ ದಾಳಿ ವೇಳೆ ನೂರು ಕೋಟಿ ಹಣ ಸಿಕ್ಕಿದೆ. ಇದು ನೂರಕ್ಕೆ ನೂರು ಪಂಚರಾಜ್ಯಗಳ ಎಲೆಕ್ಷನ್ ಗೆ ಸರ್ಕಾರ ಸಂಗ್ರಹಿಸಿದ ಹಣವಾಗಿದೆ. ಕೆಲವು ಭಾಗದಲ್ಲಿ ಎದರಿಸಿ, ಬೆದರಿಸಿ ಹಣ ಸಂಗ್ರಹಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರು ಪ್ರಾಮಾಣಿಕರು ಆಗಿದ್ರೆ, ಸಿಬಿಐ ತನಿಖೆಗೆ ನೀಡಲಿ ಎಂದು ಒತ್ತಯಿಸಿದರು.

ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲೇ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಬರದ ಬೆಗೆಯಲ್ಲಿ ಪವರ್ ಕಟ್ ಮಾಡಿ ರೈತರಿಗೆ ಬರೆ ಹಾಕುತ್ತಿದ್ದಾರೆ. ಈಗಲೇ ಈ ಪರಿಸ್ಥತಿ ಎದುರಿಸಿದರೆ ಇನ್ನೂ ಏಪ್ರಿಲ್, ಮೇ ತಿಂಗಳಲ್ಲಿ ಯಾವ ಮಟ್ಟಕ್ಕೆ ಹೋಗಬಹುದು. ಈಗ ಗೃಹ ಜ್ಯೋತಿ ಕೊಟ್ಟಿದ್ದಾರೆ, ಮುಂದೆ ಕಂರೆಂಟ್ ಇಲ್ಲ ಉಚಿತ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಅನಿತ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours