ಕಾಂಗ್ರೆಸ್ ಅಧಿಕಾರದಲ್ಲಿ ಉತ್ತಮ ಕೆಲಸ ಆಗಿದೆ:ಮಾಜಿ ಸಚಿವ ಹೆಚ್.ಆಂಜನೇಯ

 

ಚಿತ್ರದುರ್ಗ ಮಾ. ೦೨
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ಧಾಗ ಉತ್ತಮವಾದ ಕೆಲಸವನ್ನು ಮಾಡಿದೆ ಆದರೆ ಅದರ ಪ್ರಚಾರ ಆಗಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರದ ಕೂರತೆ ಇದೆ ಎಂದು ಮಾಜಿ ಸಚಿವ ಹೆಚ್.ಅಂಜನೇಯ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಆರ್ ಕೃಷ್ಣಮೂರ್ತಿಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ಧಾಗ ಉತ್ತಮವಾದ ಕೆಲಸವನ್ನು ಮಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮವಾದ ಶಾಲಾ-ಕಾಲೇಜಿನ ಕಟ್ಟಡಗಳು ಹಾಸ್ಟಲ್‌ಗಳನ್ನು ನಿರ್ಮಾಣ ಮಾಡುವುದರ ಮೂಲಕ ಮಕ್ಕಳು ಶಿಕ್ಷಣವನ್ನು ಕಲಿಯುವಂತೆ ಮಾಡಲಾಗಿದೆ, ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದ ಹಿನ್ನಲೆಯಲ್ಲಿ ಕಳೆದ ಬಾರಿ ಸೋಲನ್ನು ಅನುಭವಿಸಬೇಕಾಯಿತು ಎಂದರು.

ನಮ್ಮ ಅಧಿಕಾರದ ಅವಧಿಯಲ್ಲಿ ಯಾವ ಗುತ್ತಿಗೆದಾರರನಿಂದಲೂ ಹಣವನ್ನು ಪಡೆಯಲಿಲ್ಲ, ಕಮಿಷನ್ ಪಡೆಯಲಿಲ್ಲ, ಆಗುವ ಕೆಲಸವನ್ನು ನಿಲ್ಲಿಸಲಿಲ್ಲ, ನಮ್ಮ ಪಾಡಿಗೆ ನಾವು ನಮ್ಮ ಕೆಲಸವನ್ನು ಮಾಡುತ್ತಾ ಹೋದವು ಆದರೆ ಈಗಿನ ಸರ್ಕಾರ ಪ್ರತಿಯೊಂದಕ್ಕೂ ಸಹಾ ಕಮಿಷನ್ ಪಡೆಯುವುದರ ಮೂಲಕ ಎಲ್ಲರ ಕೋಪಕ್ಕೆ ಗುರಿಯಾಗಿದ್ದಾರೆ. ಎಲ್ಲದರಲ್ಲೂ ಸಹಾ ಲಂಚ ಲಂಚ ಎನ್ನುತ್ತಿದೆ, ರಾಜಖಿಯ ಎನ್ನುವುದು ಈಗ ಕೊಳೆತು ನಾರುತ್ತಿದೆ. ಇದರಲ್ಲಿ ಉತ್ತಮವಾದ ವ್ಯಕ್ತಿಗಳು ಬಾರದಿದ್ದರೆ ರಾಜಕೀಯ ಮತ್ತಷ್ಟು  ಜಯಲಕ್ಷ್ಮಿ ಒಲಿದೆ. ಮುಂದಿನ ದಿನದಲ್ಲಿ ನಡೆಯುವ ಚುನಾವಣೆಯಲ್ಲಿ ಉತ್ತಮವಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ೫ ವರ್ಷದ ಅಧಿಕಾರ ಅವಧಿಯಲ್ಲಿ ಉತ್ತಮಔಆದ ಆಡಳಿತವನ್ನು ಸಿದ್ದರಾಮಯ್ಯ ನೀಡಿದ್ದಾರೆ. ನನಗೂ ಸಹಾ ಹಾಸಿಗೆ ದಿಂಬುನಲ್ಲಿ ಹಗರಣ ನಡೆದಿದೆ ಎಂದು ಬೋಬ್ಬೆ ಹೊಡೆದಿದ್ದಾರೆ. ಇದರ ಬಗ್ಗೆ ತನಿಖೆಯನ್ನು ಮಾಡಿಸಿ ಎಂದು ನಾನೇ ಹೇಳುತ್ತೇನೆ ಎಂದರು.
ಸೋನಿಯಗಾAಧಿಯವರು ಹುಷಾರಿಲ್ಲ ಎಂದು ಅವರಿಗೆ ಭಾಷಣ ಮಾಡಿದಾಗ ಛತ್ರಿಯನ್ನು ಹಿಡಿಯಲಾಗಿತ್ತು ಇದನ್ನು ಪ್ರಧಾನ ಮಂತ್ರಿಗಳು ಲೇವಡಿ ಮಾಡಿದ್ದಾರೆ. ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆಯ್ನನು ತ್ಯಾಗ ಮಾಡಿದ ಮಹಿಳೇ ಸೋನಿಯಾಗಾಂಧಿಯಾಗಿದ್ದಾರೆ ಇಂತಹರ ಬಗ್ಗೆ ದೇಶದ ಉತ್ತನ ವ್ಯಕ್ತಿಯೂರ್ವರು ಈ ರೀತಿ ಮಾತನಾಡುವುದು ಅವರಿಗೆ ಶೋಭೆಯನ್ನು ತರುವುದಿಲ್ಲ, ಕಾಂಗ್ರೆಸ್ ಪಕ್ಷ ಮಾಡಿದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ತಮ್ಮದೇ ಆದ ಯೂಟೂಬ್ ಚಾನಲ್ ಗಳಲ್ಲಿ ಪ್ರಚಾರ ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸಬೇಕಿದೆ. ಇತ್ತೀಚಿನ ದಿನದಲ್ಲಿ ದರ ಏರಿಕೆ ಹೆಚ್ಚಾಗಿದೆ. ಇದರ ಬಗ್ಗೆ ಈ ಹಿಂದೆ ದರ ಏರಿಕೆಯಾದರೆ ಬೊಬ್ಬೆಯನ್ನು ಹೊಡೆಯುತ್ತಿದ್ದ ಬಿಜೆಪಿ ಈಗ ದರ ಏರಿಕೆಯಾದರರೂ ಸಹಾ ಬಾಯಿ ಮುಚ್ಚಿಕೊಂಡು ಸುಮ್ಮನಿದೆ. ರೈತರ ಸಾಲವನ್ನು ಮನ್ನಾ ಮಾಡದ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಾದ ಅಂಬಾನಿ, ಆದಾನಿ, ಮೋದಿಯಂತಹರ ಸಾಲವನ್ನು ಮನ್ನಾ ಮಾಡಿದೆ, ಇದರ ಬಗ್ಗೆ ಜನತೆಯೂ ಸಹಾ ಹೋರಾಟವನ್ನು ಮಾಡುತ್ತಿಲ್ಲ, ಹೋರಾಟವನ್ನು ಮಾಡಿದರೂ ಸಹಾ ಅದನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅಂಜನೇಯ ದೂರಿದರು.
ಜಿಲ್ಲಾ ಪ್ರಚಾರ ಸಮಿತಿ ಮಾಜಿ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ವ ಮಾತನಾಡಿ, ಕಾಂಗ್ರೆಸ್ ಪಕ್ಷ ಮಾಡಿದ ಕೆಲಸವನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುವಲ್ಲಿ ಪಕ್ಷದ ಮುಖಂಡರು ಎಡವಿದ್ದಾರೆ. ಉತ್ತಮವಾದ ಪ್ರಚಾರವನ್ನು ನೀಡಿದ್ದರೆ ಕಳೆದ ಸಾರಿಯೂ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಈಗ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಉತ್ತಮವಾದ ಆಡಳಿತವನ್ನು ನೀಡುವಲ್ಲಿ ವಿಫಲವಾಗಿದೆ. ಈಗ ಇವರು ನಡೆಸುತ್ತಿರುವ ಯಾತ್ರೆಯಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿಕೆಶಿವಕುಮಾರ್ ರವರನ್ನು ಬೈಯುವುದೇ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ದೇ ಮಾಡಲು ಟಿಕೇಟಿಗಾಗಿ ಹೊರಾಟವನ್ನು ಮಾಡುವವರು ಯಾರಿಗಾದರೂ ಟಿಕೇಟ್ ಸಿಕ್ಕ ಮೇಲೆ ಪಕ್ಷದ ಕಡೆ ಬರುವುದೇ ಕಡಿಮೆಯಾಗುತ್ತಿದೆ ಇದು ದುರಂತವಾಗಿದೆ ಎಂದರು.
ಮುಖAಡರಾದ ಹನುಮಲಿ ಷಣ್ಮುಖಪ್ಪ ಮಾತನಾಡಿ, ಚುನಾವಣೇ ಇನ್ನೂ ೭೩ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ದಿನದ ೨೪ ಗಂಟೆಯೂ ಸಹಾ ಪಕ್ಷದ ಪರವಾಗಿ ಕೆಲಸವನ್ನು ಮಾಡಬೇಕಿದೆ. ಸರ್ಕಾರ ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ. ಚಿತ್ರದುರ್ಗದ ಆರು ತಾಲ್ಲೂಕುಗಳನ್ನು ಸಹಾ ಗೆಲ್ಲಬೇಕಿದೆ. ಪಕ್ಷದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಪಕ್ಷದ ಮುಖಂಡರನ್ನು ಆಗ್ರಹಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಪಕ್ಷದಲ್ಲಿ ಪ್ರಚಾರ ಸಮಿತಿಯ ಪಾತ್ರ ಅತಿ ಮುಖ್ಯವಾಗಿದೆ. ದೇಶದ ಪ್ರಧಾನ ಮಂತ್ರಿಗಳು ತಮ್ಮ ಭಾಷೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕಿದೆ. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಬಾರದು, ತಾವು ಏನು ಮಾಡಿದೇವೆ ಎಂಬುದನ್ನು ತಿಳಿಸುವ ಕಾರ್ಯವನ್ನು ಮಾಡುವುದರ ಮೂಲಕ ಮತವನ್ನು ಕೇಳ ಬೇಕೇ ವಿನಹ ಬೇರೆಯವರನ್ನು ಬೈಯುವುದರ ಮೂಲಕ ಟೀಕೆ ಮಾಡಬಾರದೆಂದು ಕಿವಿ ಮಾತು ಹೇಳೀದರು.
ಶಾಸಕರಾದ ರಘುಮೂರ್ತಿ ಮಾತನಾಡಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿರು ಕೃಷ್ಣಮೂರ್ತಿಯವರಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಮುಂಭರುವ ಎಲ್ಲಾ ಚುನಾವಣೆಯಲ್ಲಿಯೂ ಸಹಾ ಇವರಿಗೆ ನೆರವಾಗಬೇಕಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಯುಪಿಎ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಿಳಿಸುವ ಕಾರ್ಯವಾಗಬೇಕಿದೆ. ತತ್ವ ಸಿದ್ದಾಂತದ ಮೂಲಕ ಚುನಾವಣೆಯನ್ನು ಗೆಲ್ಲಬೇಕಿದೆ. ಇದಕ್ಕಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಒಂದಾಗಬೇಕಿದೆ. ಕೃಷಮೂರ್ತಿಯವರ ಮೇಲೆ ಹೆಚ್ಚಿನ ರೀತಿಯ ಜವಾಬ್ದಾರಿಯಿದೆ ಎಂದರು.

ಜಿಲ್ಲಾ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, ಇಲ್ಲಿ ಮುಖಂಡರು ತಿಳಿಸಿದ ವಿಚಾರಗಳನ್ನು ಪಕ್ಷದ ಕಾರ್ಯಕರ್ತರು ಮತದಾರರಿಗೆ ತಿಳಿಸುವ ಕಾರ್ಯವನ್ನು ಮಾಡುವುದರ ಮೂಲಕ ಮುಂದಿನ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಕಾಂಗ್ರಸ್ ಮಾಡಿದ ಅಭೀವೃದ್ದಿಯನ್ನು ಮತದಾರರಿಗೆ ತಿಳಿಸುವ ಕಾರ್ಯವನ್ನು ಎಲ್ಲರು ಸೇರಿ ಮಾಡಬೇಕಿದೆ. ಜನರಿಗೆ ಅಭೀವೃದ್ದಿಗಿಂತ ಭಾವನ್ಮಾಕವಾಗಿ ಇರಬೇಕಿದೆ ಏಕೆಂದರೆ ನಾವು ಅಭೀವೃದ್ದಿ ಮಾಡಿದರೂ ಸಹಾ ಮತದಾರ ಅಧಿಕಾರವನ್ನು ನೀಡಲಿಲ್ಲ ಅದರೆ ಏನು ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಇದು ದುರಂತವಾಗಿದೆ. ಹಿಂದಿನ ಕಾಲದಲ್ಲಿ ಒಂದು ಜನಾಂಗವನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಶಿಕ್ಷಣ ಸಿಗದಂತೆ ಮಾಡಲಾಯಿತು, ಈಗಲೂ ಸಹಾ ಆರ್ ಎಸ್.ಎಸ್.ನಂತಹ ಸಂಘಟನೆ ಒಂದು ವರ್ಗ ಶಿಕ್ಷಣವನ್ನು ಕಲಿಯಬಾರದೆಂದು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಮುಂದಾಗಿರುವುದು ದುರಂತ ಸರಿ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯರಾದ ಜಿ.ಎಸ್.ಚಂದ್ರಶೇಖರ್ ಕಾರ್ಯಧ್ಯಕ್ಷರಾದ ಹಾಲಸ್ವಾಮಿ, ಕುಮಾರಗೌಡ, ಜಯಲಕ್ಷ, ಶಶಿಕಲಾ ಸುರೇಶಬಾಬು, ನೇತಾಜಿ, ತಿಪ್ಪೇಸ್ವಾಮಿ, ಸಂಪತ್ ಕುಮಾರ್, ಬಿಟಿ.ಜಗದೀಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶ್ರೀಮತಿ ಜಯಮ್ಮ, ಜಿ.ಪಂ.ಮಾಜಿ ಸದಸ್ಯರಾದ ನರಸಿಂಹರಾಜು, ಆನಂತ್, ಅನ್ವರ್ ಪಾಷ, ಗೀತಾ ನಂದನಿಗೌಡ, ಮುದಸೀರ್, ಅಜ್ಜಪ್ಪ, ಆಶೋಕ್ ನಾಯ್ಡು, ಮಹಡಿ ಶಿವಮೂರ್ತಿ, ಎನ್.ಡಿ.ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಡಿಸಿಸಿ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್‌ಪೀರ್ ಅಧ್ಯಕ್ಷತೆಯನ್ನು ವಹಿಸಿದ್ದರು.

 

[t4b-ticker]

You May Also Like

More From Author

+ There are no comments

Add yours