ಬೆಳಘಟ್ಟ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ರೆಡ್ಡಿ ಆಯ್ಕೆ

 

ಚಿತ್ರದುರ್ಗ: ತಾಲೂಕಿನ ಬೆಳಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ರೆಡ್ಡಿ 16 ಮತಗಳನ್ನು ಪಡೆಯುವ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ದ ಸ್ವರ್ಧೆ ಮಾಡಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಿರೀಶ್ ರೆಡ್ಡಿ ಕೇವಲ 4 ಮತಗಳನ್ನು ಮಾತ್ರ ಪಡೆದಿದ್ದಾರೆ. ಒಟ್ಟು 20 ಸದಸ್ಯರ ಪಂಚಾಯತಿ ಸದಸ್ಯರನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ರೆಡ್ಡಿ ಬೆಳಘಟ್ಟ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು ಅವರಿಗೆ ಎಲ್ಲಾ ರೀತಿಯ ಸಹಕಾರ ಶಾಸಕನಾಗಿ ನೀಡುತ್ತೇನೆ. ಬೆಳಘಟ್ಟ ಸೇರಿ ಚಳ್ಳಕೆರೆ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿದೆ‌. ಗ್ರಾಮ ಪಂಚಾಯತಿ ಸದಸ್ಯರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಸದಸ್ಯರು ಶ್ರಮಿಸಬೇಕು. ನಾನು ಶಾಸಕನಾಗಿ ಪ್ರತಿ ಹಳ್ಳಿಯಲ್ಲಿ ರಸ್ತೆಗಳು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸದಸ್ಯರ ಜೊತೆಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಬೆಳಘಟ್ಟ ಗ್ರಾಮ ಪಂಚಾಯತಿ 20 ಸದಸ್ಯರು ಹೊಂದಿದ್ದು ಅದರಲ್ಲಿ 16 ಮತವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸದಸ್ಯರು ವಿಶ್ವಾಸದಿಂದ ಮತ ಚಲಾಯಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚಳ್ಳಕೆರೆ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದು ಕ್ಷೇತ್ರದ ಅಭಿವೃದ್ಧಿ ನನ್ನ ಮೂಲ ಧ್ಯೇಯ ಎಂದು ತಿಳಿಸಿದರು‌. ಈ ಸಂದರ್ಭದಲ್ಲಿ ಬೆಳಘಟ್ಟ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಕೋಟ್ಲಾ ಅಶೋಕ್ ರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಹನುಮಂತರೆಡ್ಡಿ ಕವಿತ ದುಶಾಂತ ಕುಮಾರ್ ರಾಮರೆಡ್ಡಿ ,ಮಂಜುಶ್ರೀ ಪಾಲಯ್ಯ , ನ್ಯಾಮಲ ಪಾಲಾಯ , ನಾಗೇಶ , ಕಮಲಮ್ಮ ಭಾರತಮ್ಮ ಚಿತ್ತಮ್ಮ ರತ್ನಮ್ಮ ಕೆ ಸಿ ಪಾಲಯ್ಯ ಜ ಮಂಜುನಾಥ ಮತ್ತು ಮುಖಂಡರು ಇದ್ದರು..

[t4b-ticker]

You May Also Like

More From Author

+ There are no comments

Add yours