ಜನರಿಗೆ ಆರೋಗ್ಯಭಾಗ್ಯ ನೀಡಿದ ಕೀರ್ತಿ ಪೌರ ಕಾರ್ಮಿಕರದು:ಟಿ.ರಘುಮೂರ್ತಿ

 

ಚಳ್ಳಕೆರೆ-23 ನಗರದ ನೈರ್ಮಲ್ಯವನ್ನು ಕಾಪಾಡುವ ಜೊತೆಯಲ್ಲಿ ನಾಗರೀಕರಿಗೂ ಸಹ ಯಾವುದೇ ಸೊಂಕು ಹರಡದಂತೆ ಸದೃಢ ಆರೋಗ್ಯವನ್ನು ತಂದುಕೊಡುವ ಕಾರ್ಯ ಮಾಡುವ ಪೌರಕಾರ್ಮಿಕರ ಕಾರ್ಯ ಅತಿಶ್ರೇಷ್ಠ. ಅವರ ಕಾಯಕದ ಬಗ್ಗೆ ಇಡೀ ಸಮಾಜವೇ ಹೆಮ್ಮೆ ಪಡಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರಸಭೆ ಕಚೇರಿ ಮುಂಭಾಗದ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಾಷ್ಟçಪಿತ ಮಹಾತ್ಮಗಾಂಧೀಜಿಯವರೂ ಸಹ ಪೌರಕಾರ್ಮಿಕರ ಕಾರ್ಯದ ಬಗ್ಗೆ ಹೆಮ್ಮೆಪಟ್ಟರಲ್ಲದೆ, ತಮ್ಮ ಸ್ವಚ್ಚತೆಯನ್ನು ತಾವೇ ಕೈಗೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾದರು. ಪ್ರಸ್ತುತ ಸರ್ಕಾರ ಪೌರಕಾರ್ಮಿಕರ ಬದುಕನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಅನೇಕ ಸುಧಾರಿತ ಕ್ರಮಗಳನ್ನು ಕೈಗೊಂಡಿದೆ. ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಸ್ಪಷ್ಟ ಮಾಹಿತಿ ಇದ್ದು, ಮುಂಬರುವ ದಿನಗಳಲ್ಲಿ ಪೌರಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸರ್ಕಾರ ನೀಡಲಿದೆ. ನಿವೇಶನ, ಮನೆ ಸೇರಿದಂತೆ ಶಾಶ್ವತ ಸೌಲಭ್ಯ ಪಡೆಯಲು ಕಾರ್ಮಿಕರು ಆರ್ಹರಿದ್ದಾರೆ. ಕಾರ್ಮಿಕ ಕಾರ್ಯ ಪವಿತ್ರವೆಂದು ಭಾವಿಸುವೆ ಎಂದರು.

ನಗರಸಭೆ ಸದಸ್ಯ ಕೆ.ವೀರಭದ್ರಪ್ಪ, ಸದಸ್ಯೆ ಜಯಲಕ್ಷಿö್ಮ, ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪೌರಕಾರ್ಮಿಕರ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು, ಸ್ಥಳೀಯವಾಗಿ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಸಿ.ಚಂದ್ರಪ್ಪ, ದಿವಂಗತ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ಪೌರಕಾರ್ಮಿಕರ ದಿನಾಚರಣೆಯ ರೂವಾರಿಗಳು. ಮಲಹೋರುವ ಪದ್ದತಿಯನ್ನು ರದ್ದುಗೊಳಿಸುವ ಚಾರಿತ್ರಿಕ ಕಾರ್ಯವನ್ನು ಜಾರಿಗೆ ತಂದ ಮಹಾನೀಯರು ಅವರು. ಸರ್ಕಾರ ಪೌರಕಾರ್ಮಿಕರಿಗೆ ಪ್ರತಿವರ್ಷ ಸಮವಸ್ತç, ಸಲಕರಣೆ, ರಕ್ಷಾಕವಚ ಮುಂತಾದ ವಸ್ತುಗಳನ್ನು ನೀಡುತ್ತಿದೆ. ಇಂದು ಸಹ 1.40ವೆಚ್ಚದಲ್ಲಿ ಕುಕ್ಕರ್, 1.50 ಲಕ್ಷ ವೆಚ್ಚದಲ್ಲಿ ಸಮವಸ್ತç ಇನ್ನಿತರೆ ವಸ್ತುಗಳನ್ನು ಪೌರಕಾರ್ಮಿಕರಿಗೆ ನೀಡಲಾಗಿದೆ. ಇಬ್ಬರು ನಿವೃತ್ತ ನೌಕರರ ಸೇರಿದಂತೆ ಒಟ್ಟು 110 ಪೌರಕಾರ್ಮಿಕರಿಗೆ ಶಾಸಕರು ಸನ್ಮಾನಿಸಿದ್ಧಾರೆ. ಎಲ್ಲಾ ಪೌರಕಾರ್ಮಿಕರಿಗೆ ಸಿಹಿ ನೀಡಿ ಶುಭಹಾರೈಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ್, ಎಂ.ಜೆ.ರಾಘವೇಂದ್ರ, ವಿರೂಪಾಕ್ಷಿ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸುನೀಲ್, ಎಇಇ ಕೆ.ವಿನಯ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಸಹಾಯಕ ಇಂಜಿನಿಯರ್ ಲೋಕೇಶ್, ಅಕೌಂಟೆಂಟ್ ಹರೀಶ್, ಸೂರಪರಿಡೆಂಟ್ ಭಾಸ್ಕರ್, ಇ.ತಿಪ್ಪೇಸ್ವಾಮಿ, ವಿಶ್ವನಾಥ, ಗುರುಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ದಾದಾಪೀರ್, ಗಣೇಶ್, ಗೀತಕುಮಾರಿ, ಎಸ್.ಎಲ್.ಮಂಜಣ್ಣ ಮುಂತಾದವರು ಉಪಸ್ಥಿತರಿದ್ದರು. ಪೌರಕಾರ್ಮಿಕರಾದ ನಾಗರಾಜು, ಮಂಜುನಾಥ, ಟಿ.ನಿಂಗಪ್ಪ, ಉಮೇಶ್, ಶಿವಣ್ಣ, ಮಹಂತಪ್ಪ, ತಿಪ್ಪಮ್ಮ ಮುಂತಾದವರನ್ನು ಸನ್ಮಾನಿಸಲಾಯಿತು.

[t4b-ticker]

You May Also Like

More From Author

+ There are no comments

Add yours