ಮೀಸಲಾತಿಗಾಗಿ ಸಮಾಜದ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ನಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ: ಬಿ.ಕಾಂತರಾಜ್ ಗುಡುಗು

 

ಚಿತ್ರದುರ್ಗ ಮೇ. ೨೦
ಪರಿಶಿಷ್ಟ ಪಂಗಡಕ್ಕೆ ಶೇ.೭.೫ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಶ್ರೀಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಇಂದು ನಗರದಲ್ಲಿ ನಾಯಕ ಜನಾಂಗದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ನಗರದ ಮದಕರಿ ನಾಯಕ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಸಂತೇಪೇಟೆ ವೃತ್ತದ ಮೂಲಕ ಬಿಡಿರಸ್ತೆಯಿಂದ ಮಹಾವೀರ ವೃತ್ತ, ವಾಸವಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತವನ್ನು ತಲುಪಿತು. ಈ ಸಂದರ್ಭದಲ್ಲಿ ವಿವಿಧ ಜಾನಪದ ಕಲಾಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಸಂವಿಧಾನದ ಹಕ್ಕು, ನಿಲ್ಲಿಸಿ, ನಿಲ್ಲಿಸಿ ಎಸ್.ಟಿ. ಎಸ್.ಸಿ. ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ, ಎಲ್ಲಿಯವರೆಗೂ ಜಾತಿ ಅಲ್ಲಿಯವರೆಗೂ ಮೀಸಲಾತಿ, ಹೆಚ್ಚಿಸಿ, ಹೆಚ್ಚಿಸಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸಿ, ಎಲ್ಲಿಯವರೆಗೂ ಹೋರಾಟ ರಾಜ್ಯ ಸರ್ಕಾರ ಕಣ್ಣು ತೆರೆಯುವವರೆಗೂ ಹೋರಾಟ, ಬೇಕೇ, ಬೇಕು, ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರದಲ್ಲೂ ಮೀಸಲಾತಿ ಬೇಕು ಎಂದ ಘೋಷಣೆಗಳ ಭಿತ್ತಿ ಪತ್ರವನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಗಳು ಎಸ್.ಟಿ,ಗೆ ಬೇರೆ ಬೇರೆ ಜನಾಂಗವನ್ನು ಸೇರಿಸುತ್ತಿದ್ದಾರೆ ಆದರೆ ಮೀಸಲಾತಿಯ ಪ್ರಮಾಣ ಮಾತ್ರ ಅಷ್ಠೇ ಇದೆ ಅದು ಸಹಾ ಬದಲಾಗಬೇಕಿದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸರ್ಕಾರ ಇದರ ಬಗ್ಗೆ ಯಾವುದೇ ರೀತಿಯ ಚಕಾರವನ್ನು ಎತ್ತಿಲ್ಲ, ಶ್ರೀಗಳ ಧರಣಿಗೆ ಬೇಟಿಯನ್ನು ಸಹಾ ನೀಡಿಲ್ಲ ಇದೇ ರೀತಿ ಮುಂದುವರೆದರೆ ಹೋರಾಟವನ್ನು ಉಗ್ರವಾಗಿ ಮಾಡಬೇಕಾಗುತ್ತದೆ. ಇದರ ಫಲವನ್ನು ಸರ್ಕಾರ ಮುಂದಿನ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ, ಮೀಸಲಾತಿಗೆ ಆಗ್ರಹಿಸಿ ಶ್ರೀಗಳು ಫೆ.೧೦ ರಿಂದ ಧರಣಿಯನ್ನು ನಡೆಸುತ್ತಿದ್ದಾರೆ ಇಂದಿಗೆ ೧೦೦ ದಿನ ಪೂರ್ಣವಾಗಿದೆ ಸರ್ಕಾರ ಇದರ ಬಗ್ಗೆ ಯಾವುದೇ ರೀತಿಯಿಂದಲೂ ಸ್ಫಂದಿಸುತ್ತಿಲ್ಲ, ಸರ್ಕಾರ ನಾಗ ಮೋಹನ್ ದಾಸರವರ ವರದಿಯನ್ನು ಪಡೆದಿದ್ದರು ಸಹಾ ಅದರ ಜಾರಿಯ ಬಗ್ಗೆ ಯಾವುದೇ ಮಾತಡುತ್ತಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಪೀರ್ ಮಾತನಾಡಿ, ಶ್ರೀಗಳು ಧರಣೀಯನ್ನು ಪ್ರಾರಂಭ ಮಾಡಿ ೧೦೦ ದಿನವಾದರೂ ಸಹಾ ಸರ್ಕಾರದ ಪ್ರತಿನಿಧಿಗಳು ಸೌಜನ್ಯಕ್ಕಾದರೂ ಸಹಾ ಮಾತನಾಡಿಸಿಲ್ಲ, ಇದು ದುಃಖದ ವಿಚಾರವಾಗಿದೆ. ನಾಯಕ ಸಮಾಜದ ಶಾಸಕರು, ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದರ ಮೂಲಕ ಸಮಾಜವನ್ನು ಬೆಂಬಲಿಸಬೇಕಿದೆ ಎಂದು ಹೇಳೀದರು.

ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಇದು ಬರಿ ಎಸ್.ಟಿ. ಜನಾಂಗದ ಹೋರಾಟವಲ್ಲ ಎಸ್.ಸಿ. ಎಸ್.ಟಿ. ಜನಾಂಗ ಸೇರಿ ಮಾಡುತ್ತಿರುವ ಹೋರಾಟವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ಮೀಸಲಾತಿಯನ್ನು ನೀಡಲು ಮುಂದಾಗಬೇಕಿದೆ. ಕೇಂದ್ರ ಸರ್ಕಾರ ಮೀಸಲಾತಿಯನ್ನು ನೀಡಿದೆ ಆದರೆ ರಾಜ್ಯ ಸರ್ಕಾರ ಮಾತ್ರ ಮೀಸಲಾತಿಯನ್ನು ನೀಡುವಲ್ಲಿ ಮೀನಾವೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಮೀಸಲಾತಿ ಸುಲಭವಾಗಿ ಸಿಗುವುದಲ್ಲ, ಇದಕ್ಕಾಗಿ ಇನ್ನೂ ಹಲವಾರು ರೀತಿಯ ಹೋರಾಟವನ್ನು ಮಾಡಬೇಕಿದೆ. ಶ್ರೀಗಳು ನಮಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಇದು ಜಾರಿಯಾದರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಮೀಸಲಾತಿಯ ಬಗ್ಗೆ ಸಮಾಜದ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರೆ ನಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಮೀಸಲಾತಿಯ ಪರವಾಗಿ ಹೋರಾಟವನ್ನು ಹೊರಗಡೆಯೂ ಮಾಡಿಲ್ಲ, ವಿಧಾನಸಭೆಯ ಒಳಗೆಡೆಯೂ ಸಹಾ ಮಾಡಿಲ್ಲ, ಇದರ ಬಗ್ಗೆ ಮಾತನ್ನು ಸಹಾ ಆಡಿಲ್ಲ, ಸಮಾಜದ ಪರವಾಗಿ ಇರುವವರು ಸಮಾಜವನ್ನು ರಕ್ಷಣೆ ಮಾಡಬೇಕಿದೆ ಆದರೆ ಇಲ್ಲಿ ಅವರು ಸಮಾಜವನ್ನು ನಿರ್ಲಕ್ಷö್ಯ ಮಾಡಿದ್ದಾರೆ. ಸಮಾಜದ ನಾಯಕರಾದ ರಮೇಶ್ ಜಾರಕಿಹೊಳಿಯವರನ್ನು ಷಡ್ಯಂತ್ರದಿAದ ಕೂನೆಗೂಳಿಸಿದ್ದಾರೆ. ದಲಿತ ಶಕ್ತಿ ಒಂದಾಗದಿದ್ದರೆ ಅಂಬೇಡ್ಕರ್ ರವರು ಹುಟ್ಟುವುದಕ್ಕಿಂತ ಮುಂಚಿನ ಪರಿಸ್ಥಿತಿಯನ್ನು ಮುಂದಿನ ದಿನದಲ್ಲಿ ಎದುರಿಸಬೇಕಾಗುತ್ತದೆ ಎಂದು ಸಮಾಜವನ್ನು ಕಾಂತರಾಜ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ, ನಗರಸಭೆಯ ಸದಸ್ಯ ವೆಂಕಟೇಶ್, ಕಾಂಗ್ರೆಸ್ ಮುಖಂಡ ಅಂಜನಪ್ಪ, ಬಿಜೆಪಿ ಮುಂಖಡರಾದ ಶ್ರೀಮತಿ ರತ್ನಮ್ಮ, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್, ಜಿ.ಪಂ,ಮಾಜಿ ಸದಸ್ಯ ನರಸಿಂಹಮೂರ್ತಿ ಮಾತನಾಡಿದರು.
ಗೋಪಾಲಸ್ವಾಮಿ ನಾಯಕ್, ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಸದಸ್ಯರಾದ ದೀಪ, ಮಾಜಿ ಸದಸ್ಯರಾ ರಾಜೇಶ್, ಕಾಂಗ್ರೆಸ್ ಮುಖಂಡರಾದ ಸಂಪತ್ತ್, ಸೋಮು ಸೇರಿದಂತೆ ಇತರರು ಭಾಗವಹಿಸಿದ್ದರು.

 

[t4b-ticker]

You May Also Like

More From Author

+ There are no comments

Add yours