ಗ್ರಾಮೀಣ ಭಾಗದ ಸಮಗ್ರ ಅಭಿವೃದ್ದಿಗೆ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಅ:1:  ಚಕ್ ಡ್ಯಾಂ, ಮನೆಗಳು, ರಸ್ತೆಗಳು ಸೇರಿ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಗೊಡಬನಹಾಳ್, ಅನ್ನೇಹಾಳ್,ಬೋವಿ ಕಾಲೋನಿ, ದೊಡ್ಡಪುರ  ಗ್ರಾಮಗಳಲ್ಲಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅನುದಾನದಲ್ಲಿ ನಿರ್ಮಾಣ ಮಾಡುವ ನೂತನ ಸಿ.ಸಿ.ರಸ್ತೆ  ಕಾಮಗಾರಿಗೆ ಚಾಲನೆ ಮತ್ತು ವಿವಿಧ ಕಾಮಗಾರಿ ಪೂರ್ಣವಾದ ರಸ್ತೆಗಳ ಉದ್ಘಾಟನೆ  ನೇರವೇರಿಸಿ‌ ಮಾತನಾಡಿದರು.
ಗೊಡಬನಾಳ್ ಗ್ರಾಮದಲ್ಲಿ 40 ಲಕ್ಷದ ಸಿ.ಸಿ.ರಸ್ತೆಗೆ ಹಣ ನೀಡಿದ್ದೇನೆ.2  ಕೋಟಿ ವೆಚ್ಚದಲ್ಲಿ 2 ಚಕ್ ಡ್ಯಾಂ ನಿರ್ಮಾಣ, 75 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
ದೊಡ್ಡಪುರ ಗ್ರಾಮದಲ್ಲಿ 4೦ ಲಕ್ಷದ ಸಿ.ಸಿ‌.ರಸ್ತೆ, ಕಕ್ಕೇರು ಗ್ರಾಮದಲ್ಲಿ 60 ಲಕ್ಷದ ಸಿ.ಸಿ. ಚಾಲನೆ ನೀಡಿದ್ದು ಕಾಂಕ್ರೀಟ್ ಹಾಕುವ ವೇಳೆ ಮಳೆ ನೋಡಿಕೊಂಡು ಹಾಕಲು ಸೂಚಿಸಿದರು‌.
ಅನ್ನೇಹಾಳ್ ಒಡ್ಡರ ಹಟ್ಟಿ 3೦ ಲಕ್ಷ ಸಿ.ಸಿ.ರಸ್ತೆ ಮತ್ತು ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ ಜಾನಕೊಂಡ  ಬುರುಜನರೊಪ್ಪ  ರಸ್ತೆಯಿಂದ ಅನ್ನೇಹಾಳ್ ಜಂಪಯ್ಯನಹಟ್ಟಿ ವರಗೆ 1.8೦ ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ವೇಗವಾಗಿ ಕೆಲಸ ಮಾಡಲು ಸೂಚಿಸಿದ್ದೇನೆ.
ಗುಣಮಟ್ಟದ ಕಾಮಗಾರಿ ಮಾಡಬೇಕು. ಜನರು ಸಹ ನಿಗಾ ವಹಿಸಿ ತಮ್ಮ ಗ್ರಾಮಗಳಲ್ಲಿ ಉತ್ತಮವಾಗಿ ಕೆಲಸ ಮಾಡಿಸಿಕೊಳ್ಳಿ ಎಂದರು.
ಚಿತ್ರದುರ್ಗ ವಿಧಾನ  ಸಭಾ ಕ್ಷೇತ್ರದಲ್ಲಿ 170 ಕೋಟಿ ವೆಚ್ಚದಲ್ಲಿ 150 ರಿಂದ 160 ಚಕ್ ಡ್ಯಾಂ ಗಳನ್ನು ನಿರ್ಮಾಣ ಮಾಡುವ ಮುಖಾಂತರ ಅಂತರ್ಹಜಲ ಮಟ್ಟ ಹೆಚ್ಚಿಸುವ ಕಡೆ ಗಮನ ಹರಿಸಿದ್ದೇನೆ. ಕಳೆದ ಐದಾರು ವರ್ಷಗಳ ಹಿಂದೆ ಸಾವಿರಾರು ಎಕರೆ ತೋಟಗಳು ನೀರಿಲ್ಲದೆ ಒಣಗಿ ಹೋದವು. ಕೆಲವರು ನಗರ ಪ್ರದೇಶದಿಂದ ಟ್ಯಾಂಕರ್ ಮೂಲಕ‌ ನೀರು ಹರಿಸಿದರು ಸಹ ಅನೇಕರು ತೋಟಗಳು ನಾಶವಾಗಿದ್ದು ತುಂಬಾ ನೋವಿನ ಸಂಗತಿ ಎಂದರು.
ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶಕ್ತಿ‌ ಮೀರಿ ಶ್ರಮಿಸಿದ್ದೇನೆ. ಸಿ.ಸಿ.ರಸ್ತೆ, ಚಕ್ ಡ್ಯಾಂಗಳು, ಶಾಲೆಗಳು, ದೇವಸ್ಥಾನಗಳ ಅಭಿವೃದ್ಧಿಗೆ ಹಣ  ನೀಡಿದ್ದು ಎಲ್ಲಾರಿಗೂ ಸಮಾನವಾಗಿ ಪಕ್ಷಭೇದ ಮರೆತು‌ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ದೊರೆಸ್ವಾಮಿ, ಮಂಜುನಾಥ್, ಪುಷ್ಪ, ವರದರಾಜ್, ಮುಖಂಡರಾದ  ಕೆಂಗಣ್ಣ, ಮಹಲಿಂಗಪ್ಪ, ವೆಂಕಟೇಶ್, ದೊಡ್ಡಪುರ ರಾಜು, ಪ್ರಸನ್ನಕುಮಾರ್,ಕೆ.ಶಿವಕುಮಾರ್,ಸೊಂಡೇಕೊಳ ರವಿಶಂಕರ್, ಎಂ.ಬಿ.ಕುಮಾರ್ ಮತ್ತು ಗ್ರಾಮಸ್ಥರು ಇದ್ದರು‌.
[t4b-ticker]

You May Also Like

More From Author

+ There are no comments

Add yours