ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಅರ್ಧ ಡಜನ್ ಆಕಾಂಕ್ಷಿಗಳು ಯಾರು ಯಾವ ಪಕ್ಷಕ್ಕೆ ಅಭ್ಯರ್ಥಿ ದೇವರೇ ಬಲ್ಲ

 

ವಿಶೇಷ ವರದಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ  ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ.ನಾ ಮುಂದೂ ತಾ ಮುಂದೂ ಅಂತ ಬ್ಯಾನರ್ ಬಂಟಿಂಗ್ಸ್ ಹಾವ  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಹೆಸರು ದುರ್ಗದಲ್ಲಿ ಕೇಳುತ್ತಿದೆ. ಒಟ್ಟು ಅರ್ಥ ಡಜನ್ ಅಭ್ಯರ್ಥಿಗಳು ನಾ ಅಭ್ಯರ್ಥಿ ಎಂಬ ಘೋಷಣೆಯೊಂದಿಗೆ ಹೊರಟಿದ್ದಾರೆ‌. ಆದರೆ ಯಾರಿಗೂ ಕೂಡ ನಾನು ಇದೇ ಪಕ್ಷದಿಂದ ಸ್ವರ್ಧೆ ಮಾಡುತ್ತೇನೆ ಎಂಬ ಖಾತ್ರಿ ಇಲ್ಲ. ಕೇಲವರು‌ ಮಾತ್ರ ಟಿಕೆಟ್ ಖಾತ್ರಿಯಾಗಿದೆ ಎಂಬ ಗಾಳಿ ಮಾತು ಕೇಳುತ್ತಿದೆ.ಆದರೆ  ಹಾಲಿ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಎಲ್ಲಾವನ್ನು ಗಮನಿಸುತ್ತಿದ್ದಾರೆ‌.

ಬಿಜೆಪಿ ಪಕ್ಷದಿಂದ  ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಟಿಕೆಟ್ ಪಕ್ಕ ಆಗಿದೆ.

ಕಾಂಗ್ರೆಸ್ ಪಕ್ಷದಿಂದ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್, ವೀರೇಂದ್ರ ಪಪ್ಪಿ,  ಹನುಮಲಿ ಷಣ್ಮುಖಪ್ಪ,  ಎಸ್.ಕೆ.ಬಸವರಾಜನ್  ನಾಲ್ವರು ಸಹ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಕ್ಷೇತ್ರದಲ್ಲಿ ಮಾತು ಕೇಳಿ ಬರುತ್ತಿದೆ ಆದರೆ  ಕೈ ಟಿಕೆಟ್  ಯಾರಿಗೆ ಎಂಬ  ಗುಟ್ಟು ಹೈಕಮಾಂಡ್ ಯಾರಿಗೂ ಬಿಟ್ಟುಕೊಟ್ಟಿಲ್ಲ.

ಜೆಡಿಎಸ್ ಪಕ್ಷದಿಂದ ಸೌಭಾಗ್ಯ ಬಸವರಾಜನ್ ಕಣಕ್ಕೆ ಇಳಿಯಲಿದ್ದರೆ ಎಂಬ ಮಾತು ಕ್ಷೇತ್ರದಲ್ಲಿದ್ದು ಎಲ್ಲಾ ಖಾಸಗಿ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದಾರೆ. ಮಾಜಿ‌ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಸಹ ಪಕ್ಷಕ್ಕಾಗಿ ದುಡಿದಿದ್ದು  ಅವರಿಗೆ ಟಿಕೆಟ್ ನೀಡಲಿ ಎಂಬ ವಾದ ಕಾರ್ಯಕರ್ತರಲ್ಲಿದೆ.

ಆಮ್ ಆದ್ಮಿ ಪಕ್ಷ ಸಹ ಸಂಘಟನೆಯಲ್ಲಿ ತೊಡಗಿದ್ದು ಜಿಲ್ಲಾಧ್ಯಕ್ಷ ಜಗದೀಶ್ ಅವರು ಸಹ ಸ್ವರ್ಧೆ ಮಾಡಲು ಎಲ್ಲಾ ತಯಾರಿ‌ ನಡೆಸಿದ್ದಾರೆ.

ಈ‌ ಎಲ್ಲಾ  ಪೈಪೋಟಿ ನಡುವೆ ಯಾರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು ಪಕ್ಕ ಆಗಲು 2-3 ತಿಂಗಳು ಕಾಯಬೇಕಿದೆ. ಚುನಾವಣೆಯ ಪಕ್ಷಾಂತರ ಪರ್ವ ಪ್ರಾರಂಭವಾಗಿಲ್ಲ. ಎಲ್ಲಾ ಲೆಕ್ಕಚಾಗಳನ್ನು   ಯಾವ ಪಕ್ಷ ಯಾರಿಗೆ  ಟಿಕೆಟ್ ನೀಡುತ್ತದೆ  ಎಂಬುದು ಸೇರಿ ಪೂರ್ಣ ಚಿತ್ರಣಕ್ಕೆ ಜನರು ಕಾಯಬೇಕಿದೆ.

[t4b-ticker]

You May Also Like

More From Author

+ There are no comments

Add yours